ಎನ್. ಆರ್. ಪುರ: ನಾಗಲಾಪುರ ಗ್ರಾಪಂಗೆ ರಾಜ್ಯ ಮಟ್ಟದ ಪ್ರಶಸ್ತಿ
-17 ರೂಪಾಯಿ ಇಟ್ಟುಕೊಂಡು ದೇವರ ಹುಂಡಿಗೆ 100 ಕೋಟಿ ಚೆಕ್ ಹಾಕಿದ!
– ಮೂಡಿಗೆರೆ: ಶಾಲಾ ಮೈದಾನವನ್ನೇ ಬಾಡಿಗೆಗೆ ತಗೊಂಡ!..ಶಾಲಾ ಮಕ್ಕಳಿಗೆ ಅಕ್ಕಿ ಬೆಳೆಯನ್ನು ಇಟ್ಟಿಲ್ಲ ಈ ಭೂಪ!
– ಕಳಸ: ಗ್ರಹಚಾರ ತಪ್ಪಿದ್ರೆ ಗುಂಡಿಯಲ್ಲಿ ಗಂಡಾಂತರ!
NAMMUR EXPRESS NEWS
ನರಸಿಂಹರಾಜಪುರ: ನರಸಿಂಹರಾಜಪುರ ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿಯು 2023-24ನೇ ಸಾಲಿನ ಜಿಲ್ಲಾ ಪಂಚಾಯಿತಿ ನಿಗದಿಪಡಿಸಿದ ಶ್ರೇಯಾಂಕ ವ್ಯವಸ್ಥೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಗ್ರಾಮ ಪಂಚಾಯಿತಿಯು 15ನೇ ಹಣಕಾಸು ಯೋಜನೆಯ ಅನುದಾನ ವೆಚ್ಚ ಭರಿಸಿರುವುದು, ನರೇಗಾ ಯೋಜನೆಯಲ್ಲಿ ನಿಗದಿತ ಗುರಿಯಂತೆ ಮಾನವ ದಿನಗಳ ಸೃಷ್ಟಿ, ಬಾಪೂಜಿ ಸೇವಾ ಕೇಂದ್ರದಲ್ಲಿ ಸಕಾಲದಲ್ಲಿ ಸಾರ್ವಜನಿಕ ಸೇವೆಗಳನ್ನು ನೀಡಿರುವುದು, ತೆರಿಗೆ ವಸೂಲಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿರುವುದು. ಈ ಎಲ್ಲಾ ಕೆಲಸಗಳಿಗೆ ಉತ್ತಮ ರೀತಿಯಲ್ಲಿ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸಹಕಾರದಿಂದ ಈ ಸ್ಥಾನ ಪಡೆಯಲು ಸಾಧ್ಯವಾಗಿದೆ. ಎಲ್ಲರ ಸಹಕಾರದೊಂದಿಗೆ ನಾಗಲಾಪುರ ಗ್ರಾಮ ಪಂಚಾಯಿತಿಯ ಪರವಾಗಿ ದ್ವಿತೀಯ ಶ್ರೇಯಾಂಕ ಪ್ರಶಸ್ತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಮಂಜುಳ ಪಡೆದುಕೊಂಡರು.
ನಾಗಲಾಪುರ ಗ್ರಾಮ ಪಂಚಾಯಿತಿಯು ಸರ್ಕಾರದ ಸಕಲ ಯೋಜನೆಗಳನ್ನು ಆಗಸ್ಟ್ ತಿಂಗಳಲ್ಲಿ ಸಕಾಲದಲ್ಲಿ ಅನುಷ್ಠಾನ ಮಾಡಿರುವುದು. ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಉತ್ತಮ ಆಡಳಿತ ಹಾಗೂ ಸಿಬ್ಬಂದಿ ಪರಿಶ್ರಮದ ಫಲವಾಗಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಮಂಜುಳ ತಿಳಿಸಿದ್ದಾರೆ.
17 ರೂಪಾಯಿ ಇಟ್ಟುಕೊಂಡು ದೇವರ ಹುಂಡಿಗೆ 100 ಕೋಟಿ ಚೆಕ್ ಹಾಕಿದ ಚೋರ!
ತನ್ನ ಬ್ಯಾಂಕ್ ಖಾತೆಯಲ್ಲಿ 17 ರೂಪಾಯಿ ಇಟ್ಟುಕೊಂಡು, ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಚೆಕ್ ಬರೆದು ಹಾಕಿದ್ದಾನೆ. ಆಂಧ್ರ ಪ್ರದೇಶದ ಸೀಮಾಚಲಂನ ಶ್ರೀ ವರಮಹಾಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಹುಂಡಿಯಲ್ಲಿ ಈ ಚೆಕ್ ದೊರೆತಿದೆ. ಹುಂಡಿಯಲ್ಲಿ ದೊರೆತ ಈ ಚೆಕ್ ಅನ್ನು ದೇವಸ್ಥಾನದ ಮಂಡಳಿಯುವರು ಬ್ಯಾಂಕ್ಗೆ ನಗದಿಗೆ ಕಳುಹಿಸಿದಾಗ ಈ ಸತ್ಯ ಬಯಲಾಗಿದೆ
ಶಾಲಾ ಮೈದಾನ ಕಾಫಿ ಬೀಜ ಒಣಗಿಸುವ ತಾಣ!
ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆಯ ಅನುದಾನ ದುರುಪಯೋಗವಾಗಿದೆ. ಬಿಸಿಯೂಟದ ಅಕ್ಕಿ, ಬೇಳೆ ಮಾಯವಾಗಿದೆ. ಶಾಲೆಯ ಆಟದ ಮೈದಾನವನ್ನು ಶ್ರೀಮಂತರಿಗೆ ಕಾಫಿ ಒಣಗಿಸಲು ಅಕ್ರಮವಾಗಿ ಬಾಡಿಗೆಗೆ ನೀಡಿ ಮುಖ್ಯ ಶಿಕ್ಷಕಿ ಕರ್ತವ್ಯ ಲೋಪವೆಸಾಗಿದ್ದಾರೆ ಎಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಿ.ಎಚ್.ಹೊನ್ನೇಶ್ ದೂರಿದ್ದಾರೆ. ಶಾಲೆಯಲ್ಲಿ 53 ವಿದ್ಯಾರ್ಥಿಗಳು, 9 ಮಂದಿ ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕಿ ಚಿಕ್ಕಮಗಳೂರಿನಿಂದ ಶಾಲೆಗೆ ಓಡಾಡುತ್ತಿದ್ದಾರೆ. ವಾರದಲ್ಲಿ 2 ಅಥವಾ 3ದಿನ ಮಾತ್ರ ಶಾಲೆಗೆ ಹಾಜರಾಗಿ ಉಳಿದ ದಿನ ಗೈರಾಗುತ್ತಾರೆ. ಆ 15ರಂದು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೋದವರು ಮತ್ತೆ ಶಾಲೆಗೆ ಹಿಂದಿರುಗಿಲ್ಲ. ಇನ್ನೋರ್ವ ಶಿಕ್ಷಕಿಯೂ ಶಾಲೆಗೆ ಆಗಾಗ ಗೈರುಹಾಜರಾಗುತ್ತಿದ್ದಾರೆ.
ಕಳಸ, ಹೊರನಾಡಿನಲ್ಲಿ ರಸ್ತೆ ಅವ್ಯವಸ್ಥೆ!
ರಸ್ತೆ ಗುಂಡಿ ತಪ್ಪಿಸಲು ಹೋದ ಆಟೋ, ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಚಿಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನಲ್ಲಿ ನಡೆದಿದೆ. ಶಾಲಾ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಇಬ್ಬರು ಶಾಲಾ ಮಕ್ಕಳಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಕಳಸ ಸರ್ಕಾರಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಿದ್ದಾರೆ. ರಸ್ತೆ ಗುಂಡಿಗಳಿಂದ ಒಂದಿಲ್ಲೊಂದು ಅವಾಂತರ ಸೃಷ್ಟಿಯಾಗುತ್ತಲೇ ಇದೆ. ಯಮ ಸ್ವರೂಪಿ ರಸ್ತೆ ಗುಂಡಿಗೆ ಅನೇಕ ಸವಾರರ ಪ್ರಾಣಕ್ಕೆ ಕುತ್ತು ತಂದಿದೆ. ಸಂಬಂಧ ಪಟ್ಟ ಅಧಿಕಾರಿಗಳು ಅದಷ್ಟು ಬೇಗ ಹದಗೆಟ್ಟಿರುವ ರಸ್ತೆ ಗುಂಡಿಗೆ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.