ಶಿವಮೊಗ್ಗದಲ್ಲಿ ವಿಮಾನ ಹಾರಾಟಕ್ಕೆ ಸಜ್ಜು!
– ಆ.31ರಿಂದಲೇ ಬೆಂಗಳೂರು -ಶಿವಮೊಗ್ಗ ಓಡಾಟ
– ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಹಿಳೆ ದೂರು!
– ರಾಜ್ಯದಲ್ಲಿ ತಾಪಮಾನ ದಿಢೀರ್ ಏರಿಕೆ
NAMMUR EXPRESS NEWS
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 31ರಂದು ಮೊದಲ ವಿಮಾನ ಹಾರಾಟ ನಡೆಸಲಿದೆ. ಇಂಡಿಗೋ ಲೈಟ್ ಬೆಳಿಗ್ಗೆ 9:30ಕ್ಕೆ ಅಲ್ಲಿಂದ ಹೊರಡುತ್ತದೆ. ಶಿವಮೊಗ್ಗದಲ್ಲಿ 11:05ಕ್ಕೆ ಲ್ಯಾಂಡಿಂಗ್ ಆಗುತ್ತದೆ. ವಾಪಸ್ಸು 11:25ಕ್ಕೆ ಇಲ್ಲಿಂದ ಹೊರಟು 12:25ಕ್ಕೆ ಬೆಂಗಳೂರಿಗೆ ಹೋಗುತ್ತದೆ. ಉಡಾನ್ ಯೋಜನೆಯಡಿ ತಿರುಪತಿ,ಚೆನ್ನೈ, ಗೋವಾ ಇನ್ನು ಎರಡು ತಿಂಗಳ ಒಳಗಾಗಿ ವಿಮಾನಗಳ ಹಾರಾಟವು ಕೂಡ ನಡೆಯುತ್ತದೆ. ಸಬ್ಸಿಡಿಯನ್ನು ಕೂಡ ಸರ್ಕಾರವು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ ಶಿವಮೊಗ್ಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗುವ ಸಾಧ್ಯತೆ ಹೆಚ್ಚಾಗಿದೆ.
ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕೇಸ್!
ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504 ಹಾಗೂ 509 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಚಕ್ರವರ್ತಿ ಸೂಲಿಬೆಲೆ ಮೇಲೆ ಅರೋಪ ಸಾಬೀತು ಆದರೆ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಬಹುದು ಎಂದು ಹೇಳಲಾಗುತ್ತಿದೆ. ಆಗಸ್ಟ್ 24 ನೇ ತಾರೀಖಿನಂದು ಕಾಂಗ್ರೆಸ್ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕಿ ಸೌಗಂಧಿಕಾ ರಘುನಾಥ್ ಫೇಸ್ಟುಕ್ ನಲ್ಲಿ ಅವಹೇಳನ ಕಾರಿಯಾಗಿ ಕಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
ರಾಜ್ಯದಲ್ಲಿ ತಾಪಮಾನ ದಿಢೀರ್ ಏರಿಕೆ
ರಾಜ್ಯದಲ್ಲಿ ಮಳೆಗಾಲದಲ್ಲೂ ತಾಪಮಾನ ಏರಿಕೆಯಾಗಿದ್ದು, ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಉಷ್ಣಾಂಶ ವಾಡಿಕೆಗಿಂತ ಸರಾಸರಿ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಜೂನ್ ತಿಂಗಳಿನಿಂದ ಈವರೆಗೆ 666 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈವರೆಗೆ ಕೇವಲ 490 ಮಿ.ಮೀ ಮಳೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿಯೇ ಶೇ. 23 ರಷ್ಟು ಮಳೆ ಕೊರತೆ ಉಂಟಾಗಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ.
ರಾಜ್ಯದಲ್ಲಿ ನೈಋತ್ಯ ದಿಕ್ಕಿನಿಂದ ಬೀಸುವ ಗಾಳಿ ಕಡಿಮೆಯಾಗಿ ವಾಯ್ಯುವ ದಿಕ್ಕಿನಿಂದ ಬಿಸಿಗಾಳಿ ಬೀಸುತ್ತಿದೆ. ಇದರಿಂದ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.