ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಪಟ್ಟು!
– ವಿಮಾನ ಸೇವೆ ವೇಳೆ ಕೇಂದ್ರ ಸರ್ಕಾರ ಅಂತಿಮಗೊಳಿಸಲು ಅಗ್ರಹ
– ಕುವೆಂಪು ಅವರ ಪುತ್ಥಳಿ ಸ್ಥಾಪಿಸಲಿ: ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಗೌಡ
NAMMUR EXPRESS NEWS
ತೀರ್ಥಹಳ್ಳಿ : ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನ ಹಾರಾಟ ಮಾಡಲಿದ್ದು, ಇಡೀ ಶಿವಮೊಗ್ಗ ಜನತೆಗೆ ಸಂತೋಷದ ಸಂಗತಿ. ಜತೆಗೆ ಕುವೆಂಪು ಹೆಸರನ್ನು ತಕ್ಷಣ ಅಂತಿಮಗೊಳಿಸಬೇಕು ಎಂದು ತೀರ್ಥಹಳ್ಳಿ ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಗೌಡ ಅಗ್ರಹಿಸಿದ್ದಾರೆ. ಕನ್ನಡಿಗರ, ಶಿವಮೊಗ್ಗ ಜನತೆಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶಯದಂತೆ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನ ಈಗಾಗಲೇ ರಾಜ್ಯ ಸರ್ಕಾರ ಸಚಿವ ಸಂಪುಟ ಅವರ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ, ಕುವೆಂಪು ಅವರ ಪುತ್ಥಳಿಯನ್ನ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವಂತೆ ತೀರ್ಥಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯಡೂರು ಸುರೇಂದ್ರಗೌಡ ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ವಿಮಾನ ಸೇವೆಗೆ ಕ್ಷಣಗಣನೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆ.31ರಂದು ಅಧಿಕೃತ ಸೇವೆ ಸಿಗಲಿದೆ. ಈಗಾಗಲೇ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಈ ಹಂತದಲ್ಲಿ ಕುವೆಂಪು ಹೆಸರು ಅಂತಿಮಗೊಳಿಸಬೇಕು ಎಂಬ ಅಗ್ರಹ ಹೆಚ್ಚಾಗಿದೆ.