ಕೊಪ್ಪ ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನ!
– ಬಾಳೆಹೊನ್ನೂರು ತಮ್ಮ ಮನೆಯಲ್ಲಿ ಘಟನೆ
– ಮೂಡಿಗೆರೆ: ರಸ್ತೆಯ ಗುಂಡಿಗೆ ಮೀನು ಬಿಟ್ಟು ಪ್ರತಿಭಟನೆ
– ಬೀರೂರು: ಒಂದೇ ದಿನ 11 ಮನೆಗಳಲ್ಲಿ ಕಳ್ಳತನಕ್ಕೆ ಪ್ಲಾನ್!
NAMMUR EXPRESS NEWS
ಕೊಪ್ಪ: ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಆಡಳಿತ ಅಧಿಕಾರಿಗಳು ನೀಡಿದ ನೋಟೀಸ್ ಹಾಗೂ ವಯುಕ್ತಿಕ ಕಾರಣ ಎನ್ನಲಾಗಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಸಂದೀಪ್ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಾಳೆಹೊನ್ನೂರಿನ ತಮ್ಮ ಮನೆಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ವೈದ್ಯರು ಮನನೊಂದಿದ್ದರು ಎನ್ನಲಾಗುತ್ತಿದೆ. ಮಾತ್ರೆ ಸೇವಿಸಿ ತೀವು ಅಸ್ವಸ್ಥಗೊಂಡಿದ್ದ ವೈದ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯ ಡಾ.ಸಂದೀಪ್ ಸೇವೆ ವೇಳೆಯಲ್ಲೂ ಮದ್ಯಪಾನ ಮಾಡಿಕೊಂಡಿರುತ್ತಿದ್ದರು ಎಂದು ಆರೋಪಿಸಲಾಗಿದೆ. ಡಾ.ಸಂದೀಪ್ ಪದೇಪದೇ ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಈ ಕಾರಣಕ್ಕೆ ಕೊಪ್ಪ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಾನವಿ ಅವರು ಡಾ.ಸಂದೀಪ್ ಅವರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೆಂದು ತಿಳಿದು ಬಂದಿದೆ
ರಸ್ತೆಯ ಗುಂಡಿಗೆ ಮೀನು ಬಿಟ್ಟು ಪ್ರತಿಭಟನೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ!
ಮಂಗಳೂರು-ಕಡೂರು-ಮೂಡಿಗೆರೆ-ಬೇಲೂರು- ಚಿಕ್ಕಮಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಗುಂಡಿಮಯವಾಗಿದ್ದು ಯಾರೂ ಸರಿ ಮಾಡುವ ಗೋಜಿಗೆ ಹೋಗಿಲ್ಲ. ಆದ್ದರಿಂದ ಪ್ರತಿಭಟನಾಕಾರರು ಗುಂಡಿಗೆ ಮೀನು ಬಿಟ್ಟು, ಮೀನು ಹಿಡಿದು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ರಸ್ತೆಯ ಗುಂಡಿಗಳಿಗೆ ಬತ್ತ ನಾಟಿ ಮಾಡಿ, ಸಿಲ್ವರ್ ಗಿಡಗಳನ್ನಿಟ್ಟು ಪ್ರತಿಭಟನೆ ನಡೆಸಿದೆ.
ಒಂದೇ ದಿನ 11 ಮನೆಗಳಲ್ಲಿ ಕಳ್ಳತನಕ್ಕೆ ಪ್ಲಾನ್!
ಬೀರೂರು ಪಟ್ಟಣದಲ್ಲಿ ಸೋಮವಾರ ತಡರಾತ್ರಿ ಕಳವಿಗೆ ಯತ್ನ ನಡೆಸಿದ್ದಾರೆ. ವಿವಿಧ ಬಡಾವಣೆಗಳಲ್ಲಿ 11 ಮನೆಗಳ ಬೀಗ ಒಡೆದಿರುವ ಕಳ್ಳರು ಸಂತೆ ಸಮೀಪದ ಬೋವಿ ಕಾಲೋನಿಯಲ್ಲಿ 3 ಮನೆಗಳು, ಸಮೀಪದಲ್ಲಿ ಇರುವ ಪುರಿಭಟ್ಟಿ ಬಡಾವಣೆ, ಕಟ್ಟೆ ಕೋಡಿ ಅಂತರಘಟ್ಟಮ್ಮ ದೇವಸ್ಥಾನದ ಬೀದಿ, ಬಳೆಗಾರರ ಬೀದಿಯಲ್ಲಿ 2 ಮನೆ, ಮಡಿವಾಳರ ಬೀದಿಯಲ್ಲಿ 2 ಮನೆ ಸೇರಿದಂತೆ ಬೀಗ ಹಾಕಿದ ಮನೆಗಳ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು ಹಣ, ಒಡವೆಗಾಗಿ ಕಳ್ಳತನ ಎಸಗಿದ್ದಾರೆ. ಅಕ್ಕಪಕ್ಕದವರಿಗೆ ಅನುಮಾನ ಬಾರದಂತೆ ಬೀಗ ಒಡೆದಿರಬಹುದು ಎಂದು ಶಂಕಿಸಲಾಗಿದೆ.