– ಮುಖ್ಯಶಿಕ್ಷಕಿ ಮೇಲೆ ಗ್ರಾಮದೇವತೆ ಬಂತು!
-ಮುಳ್ಳಯ್ಯನಗಿರಿ ಸೆನ್ಸಾರ್ ಆಧಾರಿತ ಚೆಕ್ಪೋಸ್ಟ್ ವಾಹನಗಳು ಸಂಪೂರ್ಣ ಸ್ಕ್ಯಾನ್!
-ಸರ್ಕಾರಿ ಆಸ್ಪತ್ರೆಗೆ ಹೋಗುವುದು ಸುಮ್ಮನೆ! ಜನರ ಗೋಳು ಕೇಳುವವರು ಯಾರು?
NAMMUR EXPRESS NEWS : ಮೂಡಿಗೆರೆ: ಮೈ ಮೇಲೆ ದೇವತೆ ಆವಾಹನೆಯಾದಂತೆ ಮಾತನಾಡಿರುವ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯ ಶಿಕ್ಷಕಿ ಕಣ್ಣು ಮುಚ್ಚಿಕೊಂಡು ‘ತಾನು ಅಧಿಕಾರಿಗಳನ್ನು ಯಾರನ್ನೂ ಬಿಡುವುದಿಲ್ಲ. ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆ ಮುಖ್ಯಶಿಕ್ಷಕಿ ಶಾಲೆಯ ಹಣ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು
ಮುಳ್ಳಯ್ಯನಗಿರಿ ಸೆನ್ಸಾರ್ ಆಧಾರಿತ ಚೆಕ್ಪೋಸ್ಟ್ ವಾಹನಗಳು ಸಂಪೂರ್ಣ ಸ್ಕ್ಯಾನ್!
ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠಲ್ಲಿ ವಾರಾಂತ್ಯದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಸೆನ್ಸಾರ್ ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ಮತ್ತು ಚೆಕ್ಪೋಸ್ಟ್ ನಿರ್ಮಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.ಟೋಲ್ಗೇಟ್ ಬಳಿ ಹೈಟೆಕ್ ಶೌಚಾಲಯ, ವಿಶ್ರಾಂತಿ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ರೂಪುರೇಷೆ ತಯಾರಾಗಿದೆ. ಸೀತಾಳಯ್ಯನಗಿರಿ ಮತ್ತು ದತ್ತಪೀಠದ ವಾಹನ ನಿಲುಗಡೆ ತಾಣದಲ್ಲಿ ಎಷ್ಟು ವಾಹನಗಳಿವೆ ಎಂಬುದು ಚೆಕ್ಪೋಸ್ಟ್ನಲ್ಲಿಯೇ ಗೊತ್ತಾಗಲಿದೆ.
ಸರ್ಕಾರಿ ಆಸ್ಪತ್ರೆಗೆ ಹೋಗುವುದು ಸುಮ್ಮನೆ! ಜನರ ಗೋಳು ಕೇಳುವವರು ಯಾರು?
ತೀರ್ಥಹಳ್ಳಿ : ತೀರ್ಥಹಳ್ಳಿಯ ಕೆಲವು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಡಾಕ್ಟರ್ ಗಳ ನಿರ್ಲಕ್ಷದಿಂದ ಜನರು ಬೇಸತ್ತು ಹೋಗಿದ್ದಾರೆ . ಆಸ್ಪತ್ರೆಗೆ ಹೋದರೆ ಕೇವಲ ಒಂದು ಮಾತ್ರೆಯನ್ನ ಕೊಟ್ಟು ಕಳುಹಿಸುತ್ತಾರೆ . ಇನ್ನು ಕೆಲವು ಭಾಗಗಳಲ್ಲಿ ಡಾಕ್ಟರ್ ಆಸ್ಪತ್ರೆಗೆ ಬರುವುದಿಲ್ಲ. ಆಸ್ಪತ್ರೆಗಳಲ್ಲಿ ಸಂಬಂಧಪಟ್ಟ ರೋಗಕ್ಕೆ ಔಷಧಿಯು ದೊರೆಯುವುದಿಲ್ಲ ಶಿವಮೊಗ್ಗ ಮಣಿಪಾಲ್ ಗಳಂತಹ ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಗಳಿಗೆ ಕಳಿಸುತ್ತಿದ್ದಾರೆ. ಅಲ್ಲಿಯ ಸಿಬ್ಬಂದಿ ನರ್ಸ್ಗಳು ಕೂಡ ಸರಿಯಾಗಿ ರೋಗಿಯನ್ನು ವಿಚಾರಣೆ ಮಾಡುವುದಿಲ್ಲ. ಕೆಲವೊಂದು ಕಡೆ ಆಸ್ಪತ್ರೆಗಳಲ್ಲಿ ಸ್ವಚ್ಛತೆಯು ಕೂಡ ಇಲ್ಲ.. ವ್ಯವಸ್ಥೆಯಿಂದಾಗಿ ಜನರು ಪ್ರವೇಟ್ ಆಸ್ಪತ್ರೆಗಳಿಗೆ ಹೋಗಬೇಕಾದ ಸ್ಥಿತಿ ಬಂದಿದೆ.