ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಎಂಪಿ ಟಿಕೆಟ್?!
– ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅಭಿಮಾನಿಗಳ ಪಟ್ಟು
– ಬಿಜೆಪಿಯಲ್ಲಿ ಯಾರು…?… ನಾಲ್ವರ ಹೆಸರು
– ಜೆಡಿಎಸ್ ಇಂದ ಸುಧಾಕರ್ ಶೆಟ್ಟಿ ಮತ್ತೆ ಬರ್ತಾರಾ?
NAMMUR EXPRESS NEWS
ಉಡುಪಿ/ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಇದೀಗ ಚುನಾವಣೆ ರಾಜಕೀಯ ಜೋರಾಗಿದೆ. ಇದೀಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕುತೂಹಲ ಮೂಡಿಸಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಈ ಸಾರಿ ಯುವ ಅಭ್ಯರ್ಥಿ ಹಾಗೂ ಉತ್ತಮ ಅಭ್ಯರ್ಥಿ ಆಯ್ಕೆಗೆ ಹೈಕಮಾಂಡ್ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಖ್ಯಾತ ವಕೀಲ, ನ್ಯಾಯವಾದಿ, ವಾಗ್ಮಿ ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸಫಲರಾಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಇವರಿಗೆ ಚಿಕ್ಕಮಗಳೂರು, ಉಡುಪಿ ಭಾಗದ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಹಾಗೂ ಪಕ್ಷದವರ ಒತ್ತಡ ಹೆಚ್ಚಾಗಿದೆ. ಇನ್ನು ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಸುಧೀರ್ ಕುಮಾರ್ ಮುರೊಳ್ಳಿ ಅವರ ಹೆಸರು ಮುಂಚೂಣಿಯಲ್ಲಿದ್ದು ಎಸಿಸಿ ಮುಖಂಡರಾದ ಸಂದೀಪ್ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಇನ್ನು ಜಯಪ್ರಕಾಶ್ ಹೆಗ್ಡೆ ಅವರನ್ನು ಮನವೊಲಿಸುವ ಕೆಲಸ ಕೂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಅಖಾಡ ಸಜ್ಜುಗೊಳ್ಳುತ್ತಿದೆ.
ಬಿಜೆಪಿಯಲ್ಲಿ ಯಾರು?..ನಾಲ್ವರ ನಡುವೆ ಸ್ಪರ್ಧೆ!
ಉಡುಪಿ, ಚಿಕ್ಕಮಗಳೂರು ಪ್ರಸ್ತುತ ಸಂಸದೆ ಶೋಭಾ ಕರಂದ್ಲಾಜೆ ಕೃಷಿ ಸಚಿವರಾಗಿಯು ಕೆಲಸ ಮಾಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಹೆಚ್ಚಿನ ಸಂಪರ್ಕ ಇಲ್ಲದಿರುವುದು ಅವರಿಗೆ ನೆಗೆಟಿವ್ ಆಗಿದೆ. ಇನ್ನು ಹೊಸ ಅಭ್ಯರ್ಥಿಯನ್ನು ಬಿಜೆಪಿ ಹುಡುಕುತ್ತಿದ್ದು ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೆಸರು ಮುನ್ನೆಲೆಗೆ ಬಂದಿದೆ. ಉಡುಪಿಯ ಪ್ರಮೋದ್ ಮದ್ವರಾಜ್ ಕೂಡ ನಾನು ಟಿಕೆಟ್ ಸ್ಪರ್ಧೆಯಲ್ಲಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆ ಕೂಡ ಸಾಧ್ಯತೆ ಇದೆ.
ಜೆಡಿಎಸ್ ಸುಧಾಕರ್ ಶೆಟ್ಟಿ ಮತ್ತೆ ಬರ್ತಾರಾ?
ಜೆಡಿಎಸ್ ಪಕ್ಷ ಈ ಚುನಾವಣೆಯಲ್ಲಿ ಮೈತ್ರಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಮೈತ್ರಿ ಆಗದಿದ್ದಲ್ಲಿ ಶೃಂಗೇರಿ ವಿಧಾನ ಸಭೆಯಲ್ಲಿ ಕೆಲವೇ ದಿನದಲ್ಲಿ ಒಳ್ಳೆಯ ಹೆಸರು ಮಾಡಿ ಮೋಡಿ ಮಾಡಿರುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಸ್ಪರ್ಧೆ ಮಾಡುವ ಬಗ್ಗೆ ಈ ಹಿಂದೆ ಹೇಳಿದ್ದರು.