ಶಾಂತಿ ಕುಂಜ್ ರಿವರ್ಸೈಡ್ ಎಕ್ಸೋಟಿಕಾ ಎಂಬ ಐಷಾರಾಮಿ ಪ್ರವಾಸಿಗರ ಸ್ವರ್ಗ!
– ನದಿ, ಪರಿಸರದ ನಡುವೆ ವೈಭವದ ರೆಸಾರ್ಟ್
– ಸೆ.7ರಂದು ಐಷಾರಾಮಿ ರೆಸಾರ್ಟ್ ಉದ್ಘಾಟನೆ
ಚಿಕ್ಕಮಗಳೂರಿನ ಹೃದಯ ಭಾಗದಲ್ಲಿರುವ ಶಾಂತಿ ಕುಂಜ್ ರಿವರ್ಸೈಡ್ ಎಕ್ಸೋಟಿಕಾ ಪ್ರವಾಸಿಗರಿಗೆ ಐಷಾರಾಮಿ ಪ್ರವಾಸದ ಅನುಭವವನ್ನು ನೀಡಲು ಸಜ್ಜಾಗಿದೆ. ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಗಿರುವ ಈ ಭವ್ಯವಾದ ರೆಸಾರ್ಟ್ ಸೆಪ್ಟೆಂಬರ್ 7, 2023 ರಂದು ಮರು ಚಾಲನೆಗೊಳ್ಳಲಿದೆ. ಅಸಾಧಾರಣ ಅನುಭವವನ್ನು ಬಯಸುವ ವಿವೇಚನಾಶೀಲ ಪ್ರಯಾಣಿಕರಿಗೆ ಶಾಂತಿ ಕುಂಜ್ ತನ್ನ ಬಾಗಿಲುಗಳನ್ನು ತೆರೆಯುವುದರಿಂದ ಇತಿಹಾಸ, ಸೊಬಗು ಮತ್ತು ಪ್ರಕೃತಿಯ ನಡುವೆ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆಯಬಹುದಾಗಿದೆ.
ಶಾಂತಿ ಕುಂಜ್ ಅಂದ್ರೆ ಪ್ರಕೃತಿಯ ವೈಭವ!
ಶಾಂತಿ ಕುಂಜ್ನ ಮಾಲೀಕರಾದ ಶ್ರೀಮತಿ ಡಯಾನಾ ಸಲ್ಡಾನ್ಹಾ ಮತ್ತು ಶ್ರೀ ನವೀನ್ ಸಲ್ಡಾನ್ಹಾ ಹಂಚಿಕೊಳ್ಳುತ್ತಾರೆ, “ನಮ್ಮ ಗೌರವಾನ್ವಿತ ಸಂದರ್ಶಕರನ್ನು ಶಾಂತಿ ಕುಂಜ್ನಲ್ಲಿ ಮತ್ತೆ ನೋಡಲು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಬೋಟಿಕ್ ರೆಸಾರ್ಟ್ನ ಪ್ರತಿಯೊಂದು ಅಂಶವು ವಿಶಿಷ್ಟ ಅನುಭವವನ್ನು ನೀಡಲಿದೆ. ಅತಿಥಿಗಳು ಮತ್ತೊಮ್ಮೆ ಪ್ರಕೃತಿಯ ವೈಭವವನ್ನು ಪಡೆದುಕೊಳ್ಳಬಹುದು, ಸಮಕಾಲೀನ ಐಷಾರಾಮಿ ಸೇವೆಗಳನ್ನು ಸವಿಯಬಹುದು ಮತ್ತು ಅಮೂಲ್ಯವಾದ ನೆನಪುಗಳನ್ನು ಇಲ್ಲಿ ಸೃಷ್ಟಿಸಬಹುದು. ನಮ್ಮ ಸಿಬ್ಬಂದಿ ಶ್ರದ್ಧೆಯಿಂದ ನಿಮಗೆ ಸೇವೆ ಕೊಡಲು ಸಿದ್ಧರಾಗಿದ್ದಾರೆ. ಶಾಂತಿ ಕುಂಜ್ ರಿವರ್ಸೈಡ್ ಎಕ್ಸೋಟಿಕಾದಲ್ಲಿ ಐಷಾರಾಮಿ ಸೌಲಭ್ಯಗಳೊಂದಿಗೆ ನೆನಪುಗಳ ಬುತ್ತಿ ಕಟ್ಟಿಡಲಿದೆ.
23 ವರ್ಷಗಳ ಸೇವೆ, ಈಗ ಮತ್ತಷ್ಟು ಹೈಟೆಕ್
1979ರಲ್ಲಿ ದಾರ್ಶನಿಕ ಶ್ರೀ ಆಂಥೋನಿ ಸಲ್ಡಾನ್ಹಾ ಅವರಿಂದ ಹೋಲಿ ಕ್ರಾಸ್ ಎಸ್ಟೇಟ್ ಆಗಿ ಸ್ಥಾಪಿಸಲಾಯಿತು, ಈ ಧಾಮವು ಕಲ್ಲು ಬಂಡೆ ಮತ್ತು ಪರಿಸರದ ಹಸಿರು ನಡುವೆ ಪ್ರಶಾಂತತೆಯ ತಾಣವಾಗಿ ರೂಪಾಂತರಗೊಂಡಿದೆ. 2010ರಲ್ಲಿ, ಶಾಂತಿ ಕುಂಞ್ ಸ್ಥಾಪನೆ ಮಾಡಲಾಯಿತು. ಇತ್ತೀಚಿನ ನವೀಕರಣ ಸೌಲಭ್ಯ ಮತ್ತು ಇಂಟಿರಿಯರ್ ಈ ಹೋಂಸ್ಟೇ ಮತ್ತು ರೆಸಾರ್ಟ್ ಅನ್ನು ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದೆ. ಅಲ್ಲದೆ ಐಷಾರಾಮಿ ಸೇವೆಯ ಹಾಲ್ ಮಾರ್ಕ್ನಂತೆ ಪ್ರತಿಬಿಂಬಿಸಲಿದೆ. ಪ್ರಶಾಂತ ಭದ್ರಾ ನದಿಯ ಪಕ್ಕದಲ್ಲಿರುವ ಶಾಂತಿ ಕುಂಜ್ ಪ್ರತಿ ಅತಿಥಿಯ ಬಯಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಸತಿಗಳ ಶ್ರೇಣಿಯನ್ನು ಹೊಂದಿದೆ. ಅಹ್ಲಾದಕರ ಪರಿಸರದಲ್ಲಿ ಸುಂದರ ದಿನಗಳನ್ನು ಕಳೆಯಬಹುದು.
ಅಸಾಧಾರಣ ಆತಿಥ್ಯ, ಅತ್ಯುತ್ತಮ ಸೇವೆ
ಹಳ್ಳಿಗಾಡಿನ ಶೈಲಿಯ ಹೌಸ್ಗಳು, ವಿಸ್ತಾರವಾದ ಸುಪೀರಿಯರ್ ವಿಲ್ಲಾಗಳು, ಪ್ರೀಮಿಯರ್ ರೂಮ್ಗಳು ವಿಶೇಷವಾದ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗಿದೆ. ರೆಸಾರ್ಟ್ನ ಮಾಲೀಕರ ಅಸಾಧಾರಣ ಆತಿಥ್ಯ, ಅತ್ಯುತ್ತಮ ಸೇವೆ, ಎಲ್ಲಿಗೂ ಸಾಟಿಯಿಲ್ಲದ ವಾಸ್ತವ್ಯ, ಊಟ, ಮನೋರಂಜನೆ ಇಲ್ಲಿ ಸಿಗಲಿದೆ. ಶಾಂತಿ ಕುಂಜ್ನ ಅತಿಥಿಗಳು ತಾಪಮಾನ ನಿಯಂತ್ರಿತ ಈಜುಕೊಳದಲ್ಲಿ ಉಲ್ಲಾಸಕರ ಸ್ನಾನ, ಸೊಗಸಾದ ಬಹು-ತಿನಿಸು ರೆಸ್ಟೋರೆಂಟ್ನಲ್ಲಿ ರುಚಿಕರವಾದ ಊಟ ಮತ್ತು ಒಳಾಂಗಣ ಮತ್ತು ಹೊರಾಂಗಣದಲ್ಲಿ ಅಂತ್ಯವಿಲ್ಲದ ಮನರಂಜನಾ ಆಯ್ಕೆಗಳಂತಹ ವಿವಿಧ ಸೌಕರ್ಯಗಳನ್ನು ಆನಂದಿಸಬಹುದು.
ನಿಮ್ಮ ಮರೆಯಲಾಗದ ಕಾರ್ಯಕ್ರಮಕ್ಕೆ ಸೂಕ್ತ ಜಾಗ
ಪ್ರಕೃತಿಯ ಸೌಂದರ್ಯದ ನಡುವೆ ನೆಚ್ಚಿನ ಕಾರ್ಯಕ್ರಮಗಳನ್ನು ಆಚರಿಸಬಹುದು. ಐಷಾರಾಮಿ ವಾಸ್ತವ್ಯವನ್ನು ಒದಗಿಸುವುದರ ಹೊರತಾಗಿ, ಶಾಂತಿ ಕುಂಜ್ ಆಚರಣೆಗಳಿಗೆ ಒಂದು ರಮಣೀಯ ತಾಣವಾಗಿದೆ. ಮದುವೆ, ನಿಶ್ಚಿತಾರ್ಥ, ಬರ್ತ್ ಡೇ, ವಿವಾಹ ವಾರ್ಷಿಕೋತ್ಸವ, ಗೆಟ್ ಟುಗೆದರ್, ಕಾರ್ಪೋರೇಟ್ ಇವೆಂಟ್ಸ್ ಪ್ರಕೃತಿಯ ಮಡಿಲಲ್ಲಿ ಹೋಸ್ಟ್ ಮಾಡಬಹುದು.
ರೊಮ್ಯಾಂಟಿಕ್ ನದಿ ತೀರದ ಭೋಜನ ಅಥವಾ ಅದ್ದೂರಿ ಉದ್ಯಾನ ಔತಣಕೂಟ ಶಾಂತಿ ಕುಂಜ್ ಆತಿಥ್ಯ ಮರೆಯಲಾಗದ ಕ್ಷಣಗಳಾಗಿ ಪರಿವರ್ತಿಸುತ್ತದೆ.
ನಿಮ್ಮ ಪ್ರಯಾಣಕ್ಕೆ ಹೀಗೆ ಬನ್ನಿ….
ಶಾಂತಿ ಕುಂಜ್ ಚಿಕ್ಕಮಗಳೂರಿನಿಂದ ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ರೆಸಾರ್ಟ್ ಅನ್ನು ಪ್ರವೇಶಿಸಬಹುದು. ನೀವು ಮಂಗಳೂರು ಅಥವಾ ಬೆಂಗಳೂರು, ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಮೀಪದ ರೈಲು ನಿಲ್ದಾಣಕ್ಕೆ ರೈಲು ಮೂಲಕ ಮತ್ತು ವಾಹನದ ಮೂಲಕವೂ ನೀವೂ ಆಗಮಿಸಬಹುದು. ಶಾಂತಿ ಕುಂಜ್ನಲ್ಲಿ ಇತಿಹಾಸ, ಐಷಾರಾಮಿ ಮತ್ತು ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವ ಅವಕಾಶವನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ
+91 826 2200580
www.shanthikunnj.com ಗೆ ಭೇಟಿ ನೀಡಿ.
[email protected] ಅನ್ನು ಸಂಪರ್ಕಿಸಿ