ಸಾಗರದಲ್ಲಿ ಕಿಡಿಗೇಡಿಗಳ ಮೇಲೆ ಪೊಲೀಸರ ಕ್ಯಾಮರಾ ಕಣ್ಣು!
ಶಿವಮೊಗ್ಗ: ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ!
ಭದ್ರಾವತಿ: ತಮಿಳುನಾಡು ಮುಖ್ಯಮಂತ್ರಿ ಪುತ್ರನ ವಿರುದ್ಧ ಕೇಸ್
ಹೊಸನಗರ : ಅವೈಜ್ಞಾನಿಕವಾಗಿ ನಡೆಯುತ್ತಿದೆ ಆಟೋ ಸ್ಟ್ಯಾಂಡ್
NAMMUR EXPRESS NEWS
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ಉಪ ವಿಭಾಗ ಪೊಲೀಸ ಇಲಾಖೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂದಿಲ್ಲೊಂದು ರೀತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳ ಮೇಲೆ ಕಣ್ಣು ಇಡಲು ಡ್ರೋನ್ ಕ್ಯಾಮರಾ ಉಪಯೋಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ನಗರದ ಪ್ರಮುಖ ಏರಿಯಾಗಳಲ್ಲಿ ಹಾಗೂ ಪಾಳುಬಿದ್ದ ಕಟ್ಟಡಗಳ ಸಮೀಪ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಿ ಪಡೆ ಹುಡುಗರಿಗೆ ಚಳಿ ಬಿಡುಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಭದ್ರಾವತಿ: ತಮಿಳುನಾಡು ಮುಖ್ಯಮಂತ್ರಿ ಪುತ್ರನ ವಿರುದ್ಧ ಕೇಸ್
ಭದ್ರಾವತಿ : ಹಿಂದು ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳನ್ನು ಅವಮಾನಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅರಳಿಹಳ್ಳಿ ದೇವರಾಜ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಉದಯನಿಧಿ ಸ್ಟಾಲಿನ್ ಸೆ.2ರಂದು ಹಿಂದು ಸನಾತನ ಧರ್ಮ ಡೆಂಘ ಇದ್ದಂತೆ. ಅದನ್ನು ವಿರೋಧಿಸಿದರೆ ಸಾಲದು, ಅದನ್ನು ಡೆಂಘ ಸೊಳ್ಳೆಗಳು, ಜ್ವರ, ಮಲೇರಿಯಾ, ಕರೊನಾ ನಿರ್ಮೂಲನೆ ಮಾಡಿದಂತೆ ಮಾಡಬೇಕೆಂದು ಉದ್ದೇಶಪೂರ್ವಕವಾಗಿ ದ್ವೇಷಪೂರಿತ ಮಾತುಗಳನ್ನಾಡಿದ್ದಾರೆ. ಹಿಂದು ಧಾರ್ಮಿಕ ಭಾವನೆ ಮತ್ತು ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹೊಸನಗರ : ಅವೈಜ್ಞಾನಿಕವಾಗಿ ನಡೆಯುತ್ತಿದೆ ಆಟೋ ಸ್ಟ್ಯಾಂಡ್
ಹೊಸನಗರ : ಪಟ್ಟಣದ ಬಸ್ ನಿಲ್ದಾಣದ ಪಾರ್ಶ್ವದಲ್ಲಿ ಚೌಡಮ್ಮ ರಸ್ತೆಗೆ ಹೊಂದಿಕೊಂಡಂತೆ ಇರುವ ಚೌಡಮ್ಮ ಆಟೋ ನಿಲ್ದಾಣಕ್ಕಾಗಿ ಪಟ್ಟಣ ಪಂಚಾಯಿತಿಯವರು ನಡೆಸುತ್ತಿರುವ ಆಟೋ ಸ್ಟ್ಯಾಂಡ್ ಕಾಮಗಾರಿಗೆ ಪಟ್ಟಣದ ನಾಗರಿಕರು ತೀವ್ರ ವಿರೋಧಿಸಿದ್ದರೂ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೌಡಮ್ಮ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ಹೋಗಲು ಈ ಆಟೋ ನಿಲ್ದಾಣ ಅವಜ್ಞಾನಿಕವಾದ ನಿರ್ಮಿಸುತ್ತಿರುವ ಕಾರಣ ಸಾರ್ವಜನಿಕರಿಗೆ ಕಂಟಕ ಪ್ರಾಯವಾಗಿದ್ದು ನಿಲ್ದಾಣದ ಒಂದು ಪಾಶ್ವದಲ್ಲಿ ಬಸ್ ನಿಲ್ದಾಣದ ಹೋಟೆಲ್, ಸಾರ್ವಜನಿಕ ಶೌಚಾಲಯಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗಿಸುವ ನೀರಿನ ಟ್ಯಾಂಕ್ ಚೇಂಬರ್ ಇದ್ದು ಅಲ್ಲಿಗೆ ನೀರಿನ ಟ್ಯಾಂಕರ್ ಹೋಗಲು ಸ್ಥಳಾವಕಾಶದ ಕೊರತೆ ಆಗುತ್ತದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ಆಟೋ ನಿಲ್ದಾಣಕ್ಕೆ ಬದಲಿ ಜಾಗ ಕಲ್ಪಿಸಿಕೊಡುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ!
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಜಮೀನುಗಳ ಬಳಿ ಇತ್ತೀಚೆಗೆ ಕಾಣಿಸಿಕೊಂಡು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಬಿದ್ದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.ಬೋನಿಗೆ ಬಿದ್ದಿರುವ ಚಿರತೆಗೆ ಸರಿಸುಮಾರು 4 ರಿಂದ 5 ವರ್ಷ ವಯೋಮಾನವಿದೆ. ಕಳೆದ ಹಲವು ದಿನಗಳಿಂದ ಚಿರತೆಯು ಸಮೀಪದ ಹೊಲಗದ್ದೆಗಳ ಬಳಿ ಓಡಾಡಿಕೊಂಡಿತ್ತು. ಕಳೆದ ಕೆಲ ದಿನಗಳ ಹಿಂದೆ ಜಮೀನಿನ ಮನೆಯೊಂದರ ಬಳಿಯಿದ್ದ ನಾಯಿಯನ್ನು ಬೇಟೆಯಾಡಿ ಸಾಯಿಸಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಚಿರತೆ ಸೆರೆಗಾಗಿ ಅದು ಓಡಾಡುವ ಸ್ಥಳದಲ್ಲಿ ಬೋನಿಟ್ಟಿದ್ದರು.