ಶರಾವತಿ ಸಂತ್ರಸ್ತರಿಗೆ ಇನ್ನು ನ್ಯಾಯ ಸಿಕ್ಕಿಲ್ಲ
– ಒಡಿಸಾ ಮಾದರಿಯ ಅರಣ್ಯ ಕಾಯ್ದೆ ಜಾರಿತರಲಾಗುವುದು: ಮಂಜುನಾಥ ಗೌಡ ಹೇಳಿಕೆ
– ಅಧಿಕಾರಿಗಳು ಇನ್ನು ಬಿಜೆಪಿ ಸರ್ಕಾರ ಇದೆ ಅಂದುಕೊಂಡಿದ್ದಾರಾ?
NAMMUR EXPRESS NEWS
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರನ್ನು ವನ್ಯಪ್ರಾಣಿಗಳಿಂತ ಕನಿಷ್ಠವಾಗಿ ನಡೆಸಿಕೊಳ್ಳಲಾಗಿದೆ ಎಂದು ಮಂಜುನಾಥ್ ಗೌಡ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1959-60 ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಉಂಟಾಗಿದೆ. 1978 ರಲ್ಲಿ ನೋಟಿಫೈ ಮಾಡಿದ ಸಂತ್ರಸ್ತರ ಭೂಮಿಯನ್ನ ನೀಡಲು ಬೊಮ್ಮಾಯಿ ಸರ್ಕಾರ ಡಿನೋಟಿಪಿಕೇಷನ್ ಮೂಲಕ ನೀಡಲು ವಿಫಲವಾಗಿದ್ದಾರೆ. ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿರುವ ಭೂಮಿಯನ್ನ ಅರಣ್ಯ ಇಲಾಖೆಯವರು ಉಪ ವಿಭಾಗದಲ್ಲಿ ರೈತರ ಭೂಮಿಯನ್ನ ಅರಣ್ಯ ಎಂದು ಘೋಷಿಸಲು ಮುಂದಾಗಿದೆ. ಈ ಹಿನ್ಬಲೆಯಲ್ಲಿ ಶೀಘ್ರದಲ್ಲಿ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಅರಣ್ಯ ಇಲಾಖೆ ಹುಂಚ ಭಾಗದಲ್ಲಿ 60 ವರ್ಷದ ಮನೆಯವರಿಗೆ ನೋಟೀಸ್ ನೀಡಿದ್ದಾರೆ. ಇದು ಆಗಬಾರದು ಎಂದರು.
ಒಡಿಸ್ಸಾ ಸರ್ಕಾರ 1996 ರಿಂದ ಈಚೆಗೆ ಮೀಸಲು ಅರಣ್ಯ ಭೂಮಿಯನ್ನ ಅರಣ್ಯ ಭೂಮಿಯಿಂದ ಕೈಬಿಟ್ಟಿದೆ. ಅಲ್ಲಿ ಆಗುವುದಾದರೆ ಇಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. 9,934 ಎಕರೆ ಭೂಮಿಯನ್ನ ಕಾಗೋಡು ತಿಮ್ಮಪ್ಪ ಡಿನೋಟಿಫೈ ಮಾಡಿದ್ದರು. ಇದನ್ನ ಸುಪ್ರೀಂನಲ್ಲಿ ಸ್ಥಳೀಯರೊಬ್ಬರು ರಿಟ್ ಹಾಕಿದ್ದರ ಕಾರಣ 9,934 ಎಕರೆ ಭೂಮಿ ಡಿನೋಟಿಫೈ ಆಗಿಲ್ಲವೆಂದರು. ಈಗ ಆಶಾಭಾವನೆ ಇದೆ. ಪಾರ್ಲಿಮೆಂಟ್ ನಲ್ಲಿ ಆ.04 ರಂದು ಗೆಜೆಟ್ನೋಟಿಪೈ ಆಗಿದೆ. ಅರಣ್ಯ ಯಾವುದು ಎಂದು ಪಟ್ಟಿ ಮಾಡಲಾಗಿದೆ. 1996ರ ಡಿಸೆಂಬರ್ ಹಿಂದೆ ಅರಣ್ಯೇತರ ಎಂದು ಘೋಷಿಸಿದ್ದರೆ ಆ ಭೂಮಿಯನ್ನು ಕೈಬಿಡಲಾಗಿದೆ ಎಂದು ಘೋಷಿಸಿದೆ. ಇದನ್ನ ಒಡಿಸಾ ಸರ್ಕಾರ ಸೊಪ್ಪಿನ ಬೆಟ್ಟ,ಕಾನು ಕುಮ್ಕಿ, ಡೀಮ್ಡ್ ನೋಟಿಫೈನ್ನ ಕೈಬಿಟ್ಟಿದೆ. ಇದನ್ನ ರಾಜ್ಯದಲ್ಲಿಯೂ ಕೈಬಿಡುವಂತೆ ಕರ್ನಾಟಕ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. 9934 ಎಕರೆ ಎರಡು ಗುಂಟೆ ಸಂತ್ರಸ್ತರಿಗೆ ಭೂಮಿಯನ್ನ ಡಿನೋಟಿಫೈ ಮಾಡಬೇಕು ಎಂದರು.
ಶಿವಮೊಗ್ಗದ 6-7 ಕಿಮಿ ದೂರದಲ್ಲಿ ಬಿಜೆಪಿ ನಾಯಕರೊಬ್ಬರ ಜಮೀನನ್ನ ಅರಣ್ಯ ಇಲಾಖೆ ಡಿನೋಟಿಫೈಮಾಡಿದೆ. ಸಂತ್ರಸ್ತರ ಭೂಮಿಯನ್ನ ಡಿನೋಟಿಫೈ ಮಾಡಲು ಸಾಧ್ಯವಿಲ್ಲ. ಎಲ್ಲಾ ಅಧಿಕಾರಿಗಳು ಇನ್ನೂ ಬೊಮ್ಮಾಯಿ ಸರ್ಕಾರವೇ ಮುಂದು ರೆದಿದೆ ಎಂದುಕೊಂಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಧುರೀಣ ಜಯಂತ್, ದುಗ್ಗಪ್ಪ ಗೌಡ, ಚಂದ್ರಭೂಪಾಲ್ ಮೊದಲಾದವರು ಉಪಸ್ಥಿತರಿದ್ದರು.