ಒಡೆಯನಿಗಾಗಿ 64 ಕಿಮೀ ನಡೆದು ಬಂದ ನಾಯಿ!
– ನಾಯಿ ನಿಯತ್ತು ಎಲ್ರಿಗೂ ಗೊತ್ತು: ಆದ್ರೆ ಈ ಕಥೆ ಓದಿ!
– ದತ್ತು ಕೊಟ್ಟಿದ್ದ ಮನೆಗೆ ಹೋಗಿದ್ದ ನಾಯಿ…!
NAMMUR EXPRESS NEWS
ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಎನ್ನುವ ಮಾತು ಅಕ್ಷರಶಃ ಸತ್ಯ. ಅಂಥದ್ದೇ ಒಂದು ನಿದರ್ಶನ ಜಾಲತಾಣದಲ್ಲಿ ಜನರ ಇದೀಗ ಮನಮಿಡಿದಿದೆ. ಉತ್ತರ ಐರ್ಲೆಂಡ್ನ ಕಂಟ್ರಿ ಟೈರೋನ್ ನಿವಾಸಿ ನಿಗೆಲ್ ಪ್ಲೆಮಿಂಗ್ ಎಂಬುವರು ಕೂಪರ್ ಎನ್ನುವ ಶ್ವಾನವೊಂದನ್ನು ಇತ್ತೀಚೆಗೆಷ್ಟೇ ದತ್ತು ಪಡೆದಿದ್ದರು. ಅದು ಒಂದು ತಿಂಗಳಿಂದ ಕಾಣೆಯಾಗಿತ್ತು. ಕೂಪರ್ಗಾಗಿ ನಿಗೆಲ್ ತೀವ್ರ ಹುಡುಕಾಟ ನಡೆಸಿದರು.ಈ ವೇಳೆ ಕೂಪರ್ ಬಗ್ಗೆ ಮಾಹಿತಿ ಸಿಕ್ಕಿದ್ದು, ಆತ ತನ್ನ ಮಾಜಿ ಮಾಲೀಕರ ವಿಳಾಸವನ್ನು ಹುಡುಕುತ್ತಾ, ಊಟ-ನೀರು ಇಲ್ಲದೆ, 27 ದಿನಗಳ ಕಾಲ 64 ಕಿ.ಮೀ. ನಡೆದುಕೊಂಡೇ ಮನೆ ಮುಂದೆ ಬಂದು ನಿಂತಿದೆ.
ಮಾಜಿ ಮಾಲೀಕರ ಮೇಲಿನ ಕೂಪರ್ ಪ್ರೀತಿ ಕಂಡು ನೆಟ್ಟಿಗರು ಕಣ್ಣಂಚು ತುಂಬಿದ್ದು, ಕೂಪರ್ನನ್ನು ಮತ್ತೆ ಪತ್ತೆ ಹಚ್ಚಿರುವ ನಿಗೆಲ್ ಆತನನ್ನು ಅದೇ ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.