ಅಜಾದ್ ಇನ್ಸ್ಟಿಟ್ಯೂಟ್ ಆಫ್ ರೋಬೋಟಿಕ್ ಟೆಕ್ನಾಲಜೀಸ್ ಕೈಗಾರಿಕಾ ಅಧ್ಯಯನ
– ಶಿವಮೊಗ್ಗದ ಪೆಸಿಟ್ ಕಾಲೇಜು ವಿದ್ಯಾರ್ಥಿಗಳ ಕಲಿಕೆ
– ವಿದ್ಯಾರ್ಥಿಗಳಿಗೆ ಇಂಟೆನ್ಶಪ್ ಮತ್ತು ಕೈಗಾರಿಕಾ ಕಲಿಕೆ ಅವಕಾಶ
NAMMUR EXPRESS NEWS
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಇಂಟೆನ್ಶಪ್ ಮತ್ತು ಕೈಗಾರಿಕಾ ಕಲಿಕೆ ಮೂಲಕ ಹೊಸ ಅವಕಾಶಗಳನ್ನು ನೀಡುತ್ತಿರುವ ಮಲೆನಾಡಿನ ಹೆಮ್ಮೆಯ ಶಿವಮೊಗ್ಗದ ಅಜಾದ್ ಇನ್ಸ್ಟಿಟ್ಯೂಟ್ ಆಫ್ ರೋಬೋಟಿಕ್ ಟೆಕ್ನಾಲಜೀಸ್ ಅಲ್ಲಿ ಪೆಸಿಟ್ ಕಾಲೇಜಿನ ವಿದ್ಯಾರ್ಥಿಗಳು ಕೈಗಾರಿಕಾ ಅಧ್ಯಯನ ನಡೆಸಿದರು. ಮಲೆನಾಡಿನ ಯುವ ಜನತೆಗೆ ಕೈಗಾರಿಕಾ ಕೌಶಲ್ಯ ಶಿಕ್ಷಣ ನೀಡುವ ಏಕೈಕ ಸಂಸ್ಥೆ ಇದಾಗಿದ್ದು ಯಾವುದೇ ಐಟಿಐ, ಡಿಪ್ಲೋಮೋ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಅರ್ಹ ವಿದ್ಯಾರ್ಥಿಗಳು ಇಲ್ಲಿ ಕೋರ್ಸ್ ಮತ್ತು ಇಂಟೆನ್ಶಶಿಪ್ ಮಾಡಬಹುದು.
ಐಟಿಐ, ಡಿಪ್ಲೋಮೋ, ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಕೌಶಲ್ಯಯುತ ಶಿಕ್ಷಣ ನೀಡುವಲ್ಲಿ ಅಜಾದ್ ರೋಬೋಟಿಕ್ ಟೆಕ್ನಾಲಜೀಸ್ ಸಂಸ್ಥೆ ಮುಂದಿದೆ. ಅದೇ ರೀತಿಯಲ್ಲಿ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಲ್ಲಿ ಆಗಮಿಸಿ ಕೈಗಾರಿಕೆಯಲ್ಲಿ ಮಿಷನ್ ಆಪರೇಟಿಂಗ್ ಬಗ್ಗೆ ಅಧ್ಯಯನ ನಡೆಸಿದರು. ಅಜಾದ್ ರೋಬೋಟಿಕ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕರಾದ ಮಹಮದ್ ಶಫಿ, ಮ್ಯಾನೇಜ್ಮೆಂಟ್ ರೆಪ್ರೆಸೆಂಟೆಟಿವ್ ಷಣ್ಮುಖ, ಇಂಜಿನಿಯರ್ ರಕ್ಷಿತ್, ಆಪರೇಟರ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.