ಗಣೇಶ ಹಬ್ಬಕ್ಕೆ ಸಂಭ್ರಮದ ತಯಾರಿ!
– ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು
– ಎಲ್ಲೆಡೆ ಗಣೇಶ ಕೂರಿಸಲು ಸಿದ್ಧತೆ
NAMMUR EXPRESS NEWS
ದೇಶಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದ್ದು, ಮಾರುಕಟ್ಟೆಗಳಲ್ಲಿ ಗಣೇಶ ಮೂರ್ತಿ, ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಶನಿವಾರ, ಭಾನುವಾರ ಎಲ್ಲೆಡೆ ಖರೀದಿ ಭರಾಟೆ ಜೋರಾಗಿದೆ. ಹೂವು, ಹಣ್ಣು, ತರಕಾರಿ, ಹೊಸ ಬಟ್ಟೆಗಳ ಖರೀದಿಯೂ ಜೋರಾಗಿತ್ತು. ಜನ ಸ್ವಂತ ವಾಹನಗಳಲ್ಲಿ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಪ್ರಯಾಸ ಪಡಬೇಕಾಯಿತು. ಹೂವು, ಹಣ್ಣಿನ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದರೂ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಹಬ್ಬಗಳು ದುಬಾರಿ ಎನ್ನುವ ಭಾವನೆ ಮೂಡುತ್ತಿದೆ.
ಗೌರಿ ಹಬ್ಬದಂದು ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು ವಾಡಿಕೆ. ಬಿಡಿ ಯಾಗಿ ವಸ್ತುಗಳನ್ನು ತಂದು ಸಿದ್ಧಪಡಿಸುವಷ್ಟು ಸಮಯ ಇಲ್ಲದವರಿಗೆಂದೇ ಸಿದ್ಧವಾದ ಬಾಗಿನಗಳು ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ದೇಗುಲದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆದಿದೆ. ಗಣೇಶ ಮೂರ್ತಿಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಹಳ್ಳಿ ಹಳ್ಳಿಯಲ್ಲೂ ಗಣೇಶ ಕೂರಿಸಲು ಯುವಕ ಸಂಘ, ಸಂಘ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ.