- ಹಿಂದಿನ ಸವಾರರಿಗೂ ಹೆಲ್ಮೆಟ್ ಕಡ್ಡಾಯ
- ತಪ್ಪಿದ್ರೆ 3 ತಿಂಗಳು ಡಿಎಲ್ ಕ್ಯಾನ್ಸಲ್
ಬೆಂಗಳೂರು: ರಾಜ್ಯ ಸರ್ಕಾರ ಬೈಕ್ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ.
ಮುಂದಿನ ಸವಾರನಿಗೆ ಹಿಂದಿನ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ನಿಯಮ ತಪ್ಪಿದ್ರೆ 3 ತಿಂಗಳು ಡಿಎಲ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಲಾಗಿದೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ದಂಡ ದುಬಾರಿಗೊಳಿಸಿ ಬಳಿಕ ಕಡಿತಗೊಳಿಸಿದ್ದಂತ ರಾಜ್ಯ ಸರ್ಕಾರ, ಈಗ ರಾಜ್ಯದ ಬೈಕ್ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಮಾತ್ರವೇ ಜಾರಿಯಲ್ಲಿದ್ದಂತ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ರಾಜ್ಯಾಧ್ಯಂತ ವಿಸ್ತರಿಸಲಾಗಿದೆ. ಅಲ್ಲದೇ ಹೆಲ್ಮೆಟ್ ಧರಿಸದೇ ಸಂಚಾರಿ ಪೆÇಲೀಸರಿಗೆ ಸಿಕ್ಕಿಬಿದ್ದರೇ, ಅಂತಹ ವಾಹನ ಸವಾರರ ಪರವಾನಗಿಯನ್ನೇ 3 ತಿಂಗಳು ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ.