ಮಂಜುನಾಥ ಗೌಡರಿಗೆ ಸರ್ಕಾರದ ಮಟ್ಟದಲ್ಲಿ ಸ್ಥಾನ?
– ನಿಗಮ ಮಂಡಳಿಯ ಅಧ್ಯಕ್ಷರಾಗುತ್ತಾರಾ..? ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿತಾರಾ..?
– ಮಲೆನಾಡು ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಗೌಡರ ನಡೆ!
NAMMUR EXPRESS NEWS
ತೀರ್ಥಹಳ್ಳಿ /ಶಿವಮೊಗ್ಗ: ಸಹಕಾರಿ ನಾಯಕ, ಕಾಂಗ್ರೆಸ್ ಮುಖಂಡ, ಡಿಕೆಶಿ ಆಪ್ತ, ಡಾ.ಆರ್.ಎಮ್.ಮಂಜುನಾಥ ಗೌಡ ಅವರಿಗೆ ಒಂದು ವಾರದಲ್ಲಿ ಮಹತ್ವದ ಹುದ್ದೆ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ. ಈ ಚರ್ಚೆಗೆ ಕಾರಣ ಇತ್ತೀಚಿಗೆ ನಡೆದ ತೀರ್ಥಹಳ್ಳಿ ಈಡಿಗರ ಸಂಘದ ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಸುಳಿವನ್ನು ನೀಡಿರುವುದು. ಆದರೆ ಯಾವ ಸ್ಥಾನ ದೊರೆಯಲಿದೆ, ಯಾವ ಹುದ್ದೆ ಸರ್ಕಾರದ ಮಟ್ಟದಲ್ಲಿ ದೊರೆಯಲಿದೆ ಎಂಬ ಕುತೂಹಲ ಮನೆಮಾಡಿದೆ. ಈಗಾಗಲೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮತ್ತೆ ನೇಮಕವಾಗಿರುವ ಡಾ ಆರ್ಎಂ ಮಂಜುನಾಥ ಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಇನ್ನೊಂದು ಮೂಲಗಳ ಪ್ರಕಾರ ರಾಜ್ಯದ ಪ್ರತಿಷ್ಠಿತ ನಿಗಮ ಮಂಡಳಿಯ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಚರ್ಚೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಕೂಡ ಇದೆ. ಇಲ್ಲವೇ ರಾಜ್ಯಮಟ್ಟದ ಪ್ರತಿಷ್ಠಿತ ಬ್ಯಾಂಕ್ ಒಂದರ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಈಗ ಆರಂಭವಾಗಿದೆ.
ಶಿವಮೊಗ್ಗ ರಾಜಕೀಯದಲ್ಲಿ ಈಗ ಮುಂಚೂಣಿ!
ರಾಜಕೀಯ ವಲಯದಲ್ಲಿ ಹಾಗೂ ಹಾಗೂ ಸಹಕಾರಿ ವಲಯದಲ್ಲಿ ರಾಜ್ಯಮಟ್ಟದಲ್ಲಿ ತಮ್ಮದೇ ಹೆಸರನ್ನು ಹೊಂದಿರುವ ಮಲೆನಾಡಿನ ಹಾಗೂ ತೀರ್ಥಹಳ್ಳಿಯ ನಾಯಕರಾಗಿರುವ ಡಾ ಆರ್.ಎಂ.ಮಂಜುನಾಥಗೌಡ ಅವರಿಗೆ ಮಹತ್ವದ ಹುದ್ದೆ ದೊರಕಲಿರುವುದು ಈ ಭಾಗದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇನ್ನೂ ಆರ್ ಎಂ ಮಂಜುನಾಥ ಗೌಡ ಅವರು ಈಗಾಗಲೇ ಈ ಹಿಂದೆ ಅಫೆಕ್ಟ್ಸ್ ಬ್ಯಾಂಕ್ ಅಧ್ಯಕ್ಷರಾಗಿ ರಾಷ್ಟ್ರೀಯ ಸಹಕಾರ ಮಹಾಮಂಡಳದ ಪದಾಧಿಕಾರಿಯಾಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿ ತಮ್ಮದೇ ಆದ ಸೇವೆ ನೀಡಿದ್ದಾರೆ.
ಸರ್ಕಾರದ ಮಟ್ಟದಲ್ಲಿಯೂ ಪ್ರಭಾವಿ!
ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಮಲೆನಾಡಿನಲ್ಲಿ ಅನೇಕ ರೀತಿಯ ಕೊಡುಗೆಯನ್ನು ನೀಡಿದ್ದಾರೆ. ರಾಜ್ಯಮಟ್ಟದಲ್ಲೂ ಅನೇಕ ಪಕ್ಷದ ಸಂಘಟನೆಗಳಿಗೆ ದುಡಿದಿದ್ದಾರೆ. ಇನ್ನೂ ಡಿಸಿಎಂ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಅವರ ಆಪ್ತರಾಗಿರುವ ಡಾ ಆರ್ ಎಂ ಮಂಜುನಾಥ ಗೌಡ ಅವರಿಗೆ ಯಾವ ಹುದ್ದೆ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ. ಇದಲ್ಲದೆ ಮುಂದಿನ ಚುನಾವಣೆಯಲ್ಲಿ ತೀರ್ಥಹಳ್ಳಿಯ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯು ಡಾ ಆರ್ ಮಂಜುನಾಥ ಗೌಡ ಅವರಿಗೆ ಸಿಗುವ ಈ ಹುದ್ದೆ ರಾಜಕೀಯವಾಗಿಯೂ ಕೂಡ ಯೂಟರ್ನ್ ಸಿಗಲಿದೆ. ಅನೇಕ ಸಚಿವರು, ರಾಜಕಾರಣಿಗಳ ಸ್ನೇಹಿತರಾಗಿರುವ ಆರ್.ಎಂ ತೀರ್ಥಹಳ್ಳಿ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ತಮ್ಮ ಸೇವೆ ನೀಡಿದ್ದಾರೆ.