ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಜ್ಜು!
– ಭದ್ರಾವತಿಯಲ್ಲಿ ಭಾರೀ ಸಿದ್ಧತೆ: ಪೊಲೀಸ್ ಬಂದೋಬಸ್ತ್
– ಮಧು ಬಂಗಾರಪ್ಪ, ಮಂಜುನಾಥ ಗೌಡ ಪೂಜೆ
NAMMUR EXPRESS NEWS
ಭದ್ರಾವತಿ : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗಣಪತಿ ಮೆರೆವಣಿಗೆ ಸಾಗುವ ಹಾದಿ ಉದ್ದಕ್ಕು ಕೇಸರಿಮಯವಾಗಿದೆ. ಕೇಸರಿ ಬಂಟಿಂಗ್ಸ್ ಕಟ್ಟಿ ಹಿಂದು ಸಂಘಟನೆಗಳ ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಪ್ರಮುಖ ಸರ್ಕಲ್ಗಳಲ್ಲಿಯು ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ. ಇನ್ನು, ಪ್ರತಿ ವರ್ಷದಂತೆ ಈ ಬಾರಿಯು ಅನ್ನಸಂತರ್ಪಣೆ, ಮೆರವಣಿಗೆಯಲ್ಲಿ ಸಾಗುವವರಿಗೆ ತಂಪು ಪಾನೀಯ, ಸಿಹಿ ತಿಂಡಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಿಂದೂ ಮಹಾಸಭ ಗಣಪತಿ ಮೆರವಣಿಗೆ ಹಿನ್ನೆಲೆ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಪಥ ಸಂಚಲನ ನಡೆಸಲಾಯಿತು. ಕನಕ ಮಂಟಪದಿಂದ, ಕಂಚಿ ಬಾಗಿಲು ಮುಖಾಂತರ, ಎನ್.ಎಸ್.ಟಿ ರಸ್ತೆ, ಜಾಮಿಯಾ ಮಸೀದಿ, ಖಾಜಿ ಮೊಹಲ್ಲಾ, ಓಟಿ ರಸ್ತೆ, ಮಾಧವಾಚಾರ್ ವೃತ್ತ, ಚೌಕ್ ಮಸೀದಿ, ಗಾಂಧಿ ವೃತ್ತ, ಒಎಸ್ಎಂ ರಸ್ತೆ, ಹೊಸಮನೆ ಸಂತೆ ಮೈದಾನ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಲಕ್ಷ್ಮಿ ಸಾಮಿಲ್, ಜಟ್ ಪಟ್ ನಗರ, ಕಂಚಿ ಬಾಗಿಲು, ಪುನಾಃ ಕನಕ ಮಂಟಪದವರೆಗೆ ಮೆರವಣಿಗೆ ಸಾಗಿತು.
ಪೊಲೀಸ್ ಬಿಗಿ ಬಂದೋಬಸ್ತ್
ಮೆರವಣಿಗೆ ಸುಗಮವಾಗಿ ಸಾಗಲು ಭದ್ರಾವತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕೆ 10 ಡಿವೈಎಸ್ಪಿಗಳು, 20 ಇನ್ಸ್ಪೆಕ್ಟರ್ಗಳು, 60 ಸಬ್ ಇನ್ಸ್ಪೆಕ್ಟರ್ಗಳು, 100 ಸಹಾಯಕ ಪೊಲೀಸ್ ಉಪನಿರೀಕ್ಷಕರು, 600 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ಗಳು, 500 ಗೃಹರಕ್ಷಕ ದಳ ಸಿಬ್ಬಂದಿ, 6 ಡಿಎಆರ್ ತುಕಡಿ, 8 ಕೆಎಸ್ಆರ್.ಪಿ ತುಕಡಿ, 1 ಕ್ಯೂಆರ್.ಟಿ ತುಕಡಿ ಮತ್ತು 1 ಆರ್.ಎ.ಎಫ್ ಕಂಪನಿಯನ್ನು ನಿಯೋಜಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಬಂದೋಬಸ್ತ್ಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಬ್ರೀಫಿಂಗ್ ಮಾಡಿದ್ದಾರೆ.
ಮಧು ಬಂಗಾರಪ್ಪ, ಮಂಜುನಾಥ ಗೌಡ ಪೂಜೆ
ಭದ್ರಾವತಿ ಹಿಂದು ಮಹಾ ಸಭಾ ವತಿಯಿಂದ ಪ್ರತಿಷ್ಟಾಪನೆ ಮಾಡಿರುವ ಗಣೇಶ ಮೂರ್ತಿಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪ, ಸಹಕಾರಿ ನಾಯಕರಾದ ಡಾ.ಆರ್.ಎಂ.ಮಂಜುನಾಥ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇತರರು ಪೂಜೆ ಸಲ್ಲಿಸಿದರು.