ಡಾ.ಆರ್.ಎಂ.ಎಂ ಡಿಸಿಸಿ ಬ್ಯಾಂಕ್ ಸಾರಥಿ!
– ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಾಯಕ
– ಶಿವಮೊಗ್ಗ ಜಿಲ್ಲೆಯಲ್ಲೇ ಸಹಕಾರ ಕ್ಷೇತ್ರಕ್ಕೆ ಮತ್ತೆ ಚೈತನ್ಯ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸೆ.29ರಂದು ಚುನಾವಣೆ ನಡೆದಿದ್ದು ಡಾ.ಆರ್.ಎಂ.ಮಂಜುನಾಥ ಗೌಡ ಮತ್ತೆ ಅಧ್ಯಕ್ಷಗಿರಿ ಪಡೆದಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಶುಕ್ರವಾರ ಮತ್ತೆ ಮಂಜುನಾಥ ಗೌಡ ಅಧಿಕಾರ ಹಿಡಿದಿದ್ದಾರೆ. ಇದೀಗ ಇಡೀ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಮತ್ತು ಸಹಕಾರಿ ವಲಯ ಅಭಿನಂದನೆ ಸಲ್ಲಿಸುತ್ತಿದೆ
ಹೇಗಿತ್ತು ಮತ್ತೆ ಸಹಕಾರಿ ಹಾದಿ..?
ಎಂ.ಬಿ.ಚನ್ನವೀರಪ್ಪ ಅವರನ್ನು ಜುಲೈ ತಿಂಗಳಲ್ಲಿ ಅವಿಶ್ವಾಸ ಮಂಡನೆ ಮೂಲಕ ಪದಚ್ಯುತಗೊಳಿಸಿದಾಗಲೇ ಆರ್.ಎಂ.ಮಂಜುನಾಥ ಗೌಡ ಹೆಸರು ಕೇಳಿ ಬಂದಿತ್ತು. ಡಿಸಿಸಿ ಬ್ಯಾಂಕ್ ಕೆ.ಪಿ.ದುಗ್ಗಪ್ಪಗೌಡ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದಾದ ಬಳಿಕ ಸೆ.8ರಂದು ಕೆ.ಪಿ.ದುಗ್ಗಪ್ಪಗೌಡರನ್ನು ಅಪೆಕ್ಸ್ ಬ್ಯಾಂಕ್ನಲ್ಲಿ ಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ನೇಮಕ ಮಾಡಿ, ಆರ್.ಎಂ.ಮಂಜುನಾಥ ಗೌಡ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್. ಎಲ್.ಷಡಾಕ್ಷರಿ ಪ್ರಭಾರಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸೇರಿದಂತೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿರುವ ಬಹುತೇಕರೊಂದಿಗೆ ಆರ್ಎಂಎಂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಡಾ.ಆರ್.ಎಂ.ಮಂಜುನಾಥ ಗೌಡ ರಾಜ್ಯದಲ್ಲೇ ಟಾಪ್ ನಾಯಕ. ಹಳ್ಳಿ ಹಳ್ಳಿಯಲ್ಲೂ ಸಹಕಾರ ಸಂಘಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದೀಗ ಮತ್ತೆ ಅವರಿಗೆ ಹುದ್ದೆ ಸಿಕ್ಕಿದ್ದು ಇಡೀ ಜಿಲ್ಲೆಯಲ್ಲಿ ಸಂತಸ ವ್ಯಕ್ತವಾಗುತ್ತಿದೆ.