ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ಸರಕಾರ ಸಜ್ಜು!
– ಮಲೆನಾಡು, ಕರಾವಳಿ ಭಾಗದ ಜನರಿಗೆ ಎಚ್ಚರಿಕೆ ಗಂಟೆ
– ತೆರವು ಆರಂಭವಾದರೆ ಲಕ್ಷ ಲಕ್ಷ ಕುಟುಂಬ ಬೀದಿಪಾಲು
NAMMUR EXPRESS NEWS
ಶಿವಮೊಗ್ಗ: ಮಲೆನಾಡ ಅರಣ್ಯ ಒತ್ತುವರಿ ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳು ಹೆಚ್ಚಿವೆ. ಒತ್ತುವರಿ ಅರಣ್ಯ ಪ್ರದೇಶ ತೆರವಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವು ಅರಣ್ಯ ಇಲಾಖೆಗೆ ಸೂಚನೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕರಾವಳಿ ಒತ್ತುವರಿ ಪ್ರದೇಶ ಗುರುತು, ತೆರವು ಕುರಿತಂತೆ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಸರಕಾರ ತೀವ್ರ ಅಸಮಾಧಾನ ಹೊರಹಾಕಿದೆ. ಈ ಬೆಳವಣಿಗೆ ಅರಣ್ಯ ಇಲಾಖೆ ಅಧಿ ಕಾರಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದರೆ, ಒತ್ತುವರಿದಾರರಿಗೆ ಬೀದಿ ಪಾಲಾಗುವ ಭೀತಿ ಎದುರಾಗಿಸಿದೆ.
ಸರಕಾರದ ಸೂಚನೆಯಂತೆ ಒತ್ತುವರಿ ತೆರವು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಎದುರಾಗಿದೆ. ತೆರವು ಆರಂಭಗೊಂಡರೆ ಲಕ್ಷಾಂತರ ಕುಟುಂಬಗಳ ಬದುಕು ಸಂಕಷ್ಟ ಕ್ಕೀಡಾಗಲಿದೆ. ಹಲವು ವರ್ಷದಿಂದ ಒತ್ತುವರಿ ತೆರವು ಸ್ಥಗಿತವಾಗಿದೆ. ತಕ್ಷಣ ಕಾರಪಡೆ ರಚಿಸಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರದೇಶಕ್ಕೆ ಸಂಬಂಧಪಟ್ಟಂತೆ ನೂರಾರು ವರ್ಷದ ದಾಖಲೆ ಇದ್ದರೂ ಒತ್ತುವರಿ ತೆರವು ಮಾಡದ ಅರಣ ಇಲಾಖೆ ಧೋರಣೆಯನ್ನು ಸರಕಾರವೇ ಪ್ರಶ್ನಿಸಿದೆ. ಸೂಕ್ತ ಅಭಿಪ್ರಾಯದೊಂದಿಗೆ ಪರಿಶೀಲನೆ ಕಡತ ಮಂಡಿಸುವಂತೆ ಆದೇಶಿಸಿದೆ. ಈ ಸಂಬಂಧ ಅರಣ್ಯ ಖಾತೆ ಸಚಿವ ಈಶ್ವರಖಂಡೆ ಸೆಪ್ಟೆಂಬರ್ 22ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಮಲೆನಾಡಲ್ಲಿ ಕಾಡು ನಾಡು ಒಟ್ಟಿಗೆ ಇದೆ!
ಮಲೆನಾಡಿನಲ್ಲಿ ಕಾಡು ನಾಡು ಬಹುತೇಕ ಒಟ್ಟಿಗೆ ಇದೆ. ಇಲ್ಲಿ ಮಾನವ ಮತ್ತು ಅರಣ್ಯ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಆದರೆ ಸರ್ಕಾರ ಮತ್ತು ಜನ ಇಬ್ಬರೂ ಹೊಂದಾಣಿಕೆ ಬದುಕು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನರ ಬದುಕಿನ ಬಗ್ಗೆಯೂ ಯೋಚಿಸಬೇಕಿದೆ.