- ಸರ್ಕಾರಿ ಕಚೇರಿಯಲ್ಲಿ ಬಿಎಸ್ಎನ್ಎಲ್ ಬಳಕೆ ಕಡ್ಡಾಯ
- ನೆಟ್ವರ್ಕೂ ಇಲ್ಲ…ಇಂಟರ್ನೆಟ್ ವೇಗ ಇಲ್ಲ
- ಜನತೆಗೆ ಮತ್ತಷ್ಟು ಸಮಸ್ಯೆ ಸಾಧ್ಯತೆ
ನವದೆಹಲಿ: ಸರ್ಕಾರಗಳ ಯಡವಟ್ಟು ನಿಯಮಗಳು ಜನತೆಗೆ ಅತೀ ಹೆಚ್ಚು ತೊಂದರೆ ಕೊಡುತ್ತವೆ. ಅಂತೆಯೇ ಇಲ್ಲೊಂದು ನಿಯಮ ಇದೀಗ ಜನರ ಸಂಕಟಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಬಿಎಸ್ಎನ್ಎಲ್ ಚೇತರಿಕೆಗೆ ಹೊಸ ಪ್ಲಾನ್ ಮಾಡುತ್ತಿದೆ. ಆದರೆ ಎಲ್ಲಿಯೂ ತಂತ್ರಜ್ಞಾನ ಮತ್ತು ಸೇವೆಯಲ್ಲಿ ಅದೂ ಜಾರಿಯಾಗಿಲ್ಲ. ಈ ನಡುವೆ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯ, ಸರ್ಕಾರಿ ಕಚೇರಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಿಎಸ್ಎನ್ಎಲ್ ಸೇವೆ ಬಳಕೆ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಸೇವೆಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದೆ. ಆದರೆ ಇದು ಜನರ ಕೆಲಸಗಳಿಗೆ ಮತ್ತಷ್ಟು ತೊಂದರೆ ತಂದೊಡ್ಡುವ ಸಾಧ್ಯತೆ ಇದೆ. ಭಾರೀ ನಷ್ಟದಲ್ಲಿರುವ ಬಿಎಸ್ಎನ್ಎಲ್ಗೆ ಕೊಂಚ ನೆಮ್ಮದಿ ನೀಡಿದೆ. ಆದರೆ ಎಲ್ಲಾ ಕಚೇರಿಗಳಲ್ಲಿ ಈ ಸೇವೆ ಪಡೆದು ಕೆಲಸ ಮಾಡಿದರೆ ಜನ ತೊಂದರೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಏಕೆಂದರೆ ಗ್ರಾಮೀಣ, ನಗರ ಭಾಗದಲ್ಲಿ ಈ ನೆಟ್ವರ್ಕ್ ಅತ್ಯಂತ ಕಳಪೆ ಮಟ್ಟದಲ್ಲಿದೆ.