ಸಾಗರದಲ್ಲಿ ಬಾಲಕನ ಮುಖ ಕಚ್ಚಿದ ಬೀದಿ ನಾಯಿಗಳು!
– ಶಿವಮೊಗ್ಗದಲ್ಲಿ ಸರ್ಕಾರಿ ಬಸ್ಸಲ್ಲೇ ದರೋಡೆ ಯತ್ನ!
– ಬೈಕ್ ಮೇಲೆ ಮರ ಬಿದ್ದು ಓರ್ವ ದುರ್ಮರಣ
NAMMUR EXPRESS NEWS
ಸಾಗರ: ಸಾಗರ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು ಬೀದಿನಾಯಿಗಳು ದಾಳಿ ನಡೆಸಿ ಬಾಲಕನೊಬ್ಬನ ಮುಖಕ್ಕೆ ಕಚ್ಚಿ ಗಂಭೀರ ಗಾಯ ಮಾಡಿವೆ. ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ನಾಯಿಗಳು ದಾಳಿ ಮಾಡಿದ್ದು, ಆತನನ್ನು ಅಟ್ಟಾಡಿಸಿ ಆತನ ಮುಖಕ್ಕೆ ಕಚ್ಚಿವೆ. ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಪಡೆದುಕೊಂಡು ನಾಯಿಗಳನ್ನು ಹಿಡಿಸಿ ಎಂದು ಅಂಗಲಾಚಿ ವಿಡಿಯೋ ಮಾಡಿದ್ದಾನೆ. ಸಾಗರ ನಗರಸಭೆ ವ್ಯಾಪ್ತಿಯ 25ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ಬಸ್ಸಲ್ಲಿ ಯುವಕರ ರೌಡಿಸಂ!
ಶಿವಮೊಗ್ಗ: ಸಾರಿಗೆ ಬಸ್ನಲ್ಲಿ ಟಿಕೇಟ್ ಪಡೆಯದೆ ಪ್ರಯಾಣಿಸಿ ಕಂಡಕ್ಟರ್ ಮೇಲೆ ಹಲ್ಲೆ ಮುಂದಾಗಿ ಬಸ್ನಲ್ಲಿ ಪುಂಡಾಟ ನಡೆಸಿ ಯುವಕರು ಠಾಣೆ ಮೆಟ್ಟಿಲೇರಿದ್ದಾರೆ. ಸೋಮವಾರ ಬೆಳಗ್ಗೆ ಚಿತ್ರದುರ್ಗದಿಂದ ಶಿವಮೊಗ್ಗದ ಕಡೆ ಹೊಳೆಹೊನ್ನೂರು ಮಾರ್ಗವಾಗಿ ಹೋಗುವ ಬಸ್ಸಿಗೆ ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಕನೊಬ್ಬ ಹತ್ತಿದ್ದಾನೆ. ನಿರ್ವಾಹಕರು ಬಸ್ ಟಿಕೇಟ್ ತೆಗೆದುಕೊಳ್ಳುವಂತೆ ತಿಳಿಸಿದರು ಯುವಕ ಟಿಕೇಟ್ ತೆಗೆದುಕೊಳದೆ ಸಣ್ಣದಾಗಿ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದಾನೆ.
ಬಸ್ನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನ ವಿಡಿಯೋ ಚಿತ್ರಿಕರಿಸಿದ ಸಹ ಪ್ರಯಾಣಿಕನ ಮೇಲೂ ಹಲ್ಲೆ ಮಾಡಿದ್ದಾನೆ. ಯುವಕ ಪೋನ್ ಮಾಡಿ ಒಂದಿಬ್ಬರು ಗೆಳೆಯರನ್ನು ಕರೆಸಿಕೊಂಡು ಅರಹತೊಳಲು ಕೈಮರ ನಿಲ್ದಾಣದ ಬಳಿ ಬಸ್ ಹತ್ತಿಸಿಕೊಂಡಿದ್ದಾನೆ. ಯುವಕನಿಗೆ ಸಾಹಯಕ್ಕೆ ಬಂದ ಪುಂಡರು ಕಂಡಕ್ಟರ್ ಬಳಿ ಇದ್ದ ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡು ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವಕರು ಬಸ್ಅನ್ನು ಎಲ್ಲಿಯೂ ನಿಲ್ಲಿಸದಂತೆ ಹೋಗುವಂತೆ ದಾಂದಲೆ ನಡೆಸಿದ್ದಾರೆ. ಬಸ್ನಲ್ಲಿದ ಸಹ ಪ್ರಯಾಣಿಕರು ಬಸ್ ನಿಲ್ಲಿಸಿ ನಾವು ಇಳಿಯುತ್ತವೆ ಎಂದು ಕೂಗಾಡಿದ್ದಾರೆ. ಬಸ್ನ ಚಾಲಕ ಬಸ್ನ್ನು ನೇರವಾಗಿ ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಬಂದು ನಿಲ್ಲಿಸಿ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪುಂಡಾಟ ನಡೆಸಿದ ಯುವಕರ ಪಾಲಕರು ದಾವಣಗೆರೆ ಮೂಲದ ನಿವೃತ್ತ ಪಿಎಸ್ಐ ರೊಂದಿಗೆ ಠಾಣೆಗೆ ಭೇಟಿ ನೀಡಿ ಮದ್ಯಾಹ್ನದ ವೇಳೆಗೆ ಸಾರಿಗೆ ಸಿಬ್ಬಂದಿಯೊಂದಿಗೆ ರಾಜಿ ಪಂಚಾಯಿತಿ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಬೈಕ್ ಮೇಲೆ ಮರ ಬಿದ್ದು ಓರ್ವ ದುರ್ಮರಣ
ಶಿವಮೊಗ್ಗ ಗ್ರಾಮಾಂತರದ ಯಲವಟ್ಟಿ ಗ್ರಾಮದಲ್ಲಿ ಮರಕಡಿಯುವ ವೇಳೆ ಬಂದ ಬೈಕ್ ಮೇಲೆ ಬಿದ್ದ ಕಾರಣ ಬೈಕ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು ಓರ್ವ ಸಾವು ಕಂಡಿದ್ದಾರೆ. ಯಲವಟ್ಟಿಯ ಖಾಸಗಿ ತೋಟದಲ್ಲಿದ್ದ ಮರ ಕಡಿಯಲು ಮುಂದಾಗಿದ್ದಾರೆ. ಮರ ಕಡಿಯುವ ವೇಳೆ ಮುಂಜಾಗೃತ ಕ್ರಮ ಕೈಗೊಳ್ಳದ ಪರಿಣಾಮ ಬೈಕ್ ಮೇಲೆ ಮರ ಬಿದ್ದಿದೆ. ಬೈಕ್ ನಲ್ಲಿದ್ದ ಮೂವರಿಗೂ ಹೊಡೆತ ಬಿದ್ದಿದೆ. ಮೂವರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಮೂವರಲ್ಲಿ ಓರ್ವ ಸಾವು ಕಂಡಿದ್ದಾನೆ. ಆತನನ್ನ ರಾಜೇಶ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.