ಪುತ್ತಿಲ ವಿರುದ್ಧ ಸುಮೋಟೋ ಕೇಸ್..!
– ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆ
– ಶಿವಮೊಗ್ಗ :ಅಪ್ರಾಪ್ತ ಮೇಲೆ ಅತ್ಯಾಚಾರ: ಜೈಲು
– ಸಾಗರ :ಪರವಾನಗಿ ಇಲ್ಲದೆ ಹಸುಗಳ ರವಾನೆ
– ರಿಪ್ಪನ್ಪೇಟೆ: ಇನ್ನೋವಾ ಕಾರು ಪಲ್ಟಿ
– ಓಮ್ಮಿಯಲ್ಲಿ ಜಾನುವಾರು ಸಾಗಣೆ: ಧರ್ಮದೇಟು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಕರಾವಳಿ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಅರುಣ್ ಕುಮಾರ್ ಪುತ್ತಿಲ್ಲ ರಾಗಿಗುಡ್ಡದಲ್ಲಿ ಸೆಕ್ಷನ್ ಜಾರಿ ಇದ್ದರೂ ಆಯುಧ ಪೂಜೆಯ ದಿನ ಶಸಸ್ತ್ರಗಳಿಗೆ ಪೂಜೆ ಮಾಡಿ ಎಂದು ಕರೆ ನೀಡಿರುವುದು ಪ್ರಚೋದನೆಗೆ ಪುಷ್ಠಿ ನೀಡುತ್ತಿರುವುದರಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೋಟೋ ದೂರು ದಾಖಲಾಗಿದೆ. ಸ್ಕ್ಯಾನರ್, ಸ್ಕ್ರೂಡ್ರೈವರ್ ಹೊರತು ಪಡಿಸಿ ತಲ್ವಾರ್ ಪೂಜೆಗೆ ಕರೆ ನೀಡಿದ್ದ ಪುತ್ತಿಲ್ಲರ ವಿರುದ್ಧ ಸುಮೋಟೋ ದೂರು ದಾಖಲಾಗಿದೆ.
ಸಾಗರದ ಗಣಪತಿ ಕೆರೆಯಲ್ಲಿ ಅಪರಿಚಿತ ಶವ ಪತ್ತೆ
ಸಾಗರ: ಅಪರಿಚಿತ ವ್ಯಕ್ತಿಯ ಶವವೊಂದು ಸಾಗರದ ಗಣಪತಿ ಕೆರೆಯಲ್ಲಿ ಪತ್ತೆಯಾಗಿದೆ. 25 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ಶವವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಯಾವುದೆ ಸುಳಿವು ಸಿಗದ ಕಾರಣ ಸುಳಿವು ದೊರೆತರೆ ಕೂಡಲೆ ಸಮೀಪದ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಮೇಲೆ ಅತ್ಯಾಚಾರ: ನಾಲ್ವರಿಗೆ ಜೈಲು!
ಶಿವಮೊಗ್ಗ: ಡಿಸೆಂಬರ್ 6 2020 ರಂದು ನಡೆದಿದ್ದ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಶಿವಮೊಗ್ಗ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿದೆ. ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ಆರೈಕೆ ಮಾಡುತ್ತಿದ್ದ ಬಾಲಕಿಯೊಬ್ಬಳನನ್ನು ಪುಸಲಾಯಿಸಿ ಒಮಿನಿ ವಾಹನದಲ್ಲಿ ಕರೆದೊಯ್ದು ಅತ್ಯಾಚಾರವೆಸಗಲಾಗಿತ್ತು. ಶಿವಮೊಗ್ಗದಲ್ಲಿ ಕೋಮು ವಿಚಾರಕ್ಕೆ ಸೆಕ್ಷನ್ ಜಾರಿಯಾಗಿದ್ದ ಸಂದರ್ಭ ಹಾಗಾಗಿ ಊಟ, ಹಣ್ಣು, ಹಾಲು ಹತ್ತಿರದಲ್ಲಿಯೇ ಸಿಗುತ್ತಿರಲಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ತಾಯಿಗೆ ಊಟ ತರಲು ಪರದಾಡುತ್ತಿದ್ದ ಬಾಲಕಿಯನ್ನು ಊಟ ಕೊಡಿಸುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು.
ಆನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ, ವಾಪಸ್ ಆಸ್ಪತ್ರೆಯ ಬಳಿಯಲ್ಲಿ ಕರೆತಂದು ಬಿಟ್ಟಿದ್ದರು. ಈ ಅಲ್ಲಿದ್ದವರು ಗಮನಿಸಿ ಆಸ್ಪತ್ರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ನಂತರ ಪ್ರಕರಣ ಸಂಬಂಧ ಕೇಸ್ ದಾಖಲಾಗಿತ್ತು. ಸೆಕ್ಷನ್, ಸೆಕ್ಷನ್ (366, 376 ಬಿ, 506, ಪೋಕ್ಸ್ ಆ್ಯಕ್ಟ್!) ಅಡಿಯಲ್ಲಿ ದಾಖಲಾಗಿದ್ದ ಕೇಸ್ನ ವಿಚಾರಣೆ ಮುಗಿದು ಇದೀಗ ಶಿವಮೊಗ್ಗ ಕೋರ್ಟ್ ತೀರ್ಪು ನೀಡಿದೆ. ಪ್ರಕರಣದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಿರುವ ಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ಹಾಕಿದ್ದು, ದಂಡ ಕಟ್ಟದಿದ್ದರೆ ಆರು ತಿಂಗಳು ಶಿಕ್ಷೆ ವಿಧಿಸಿದೆ.
ಓಮ್ಮಿಯಲ್ಲಿ ಜಾನುವಾರು ಸಾಗಣೆ: ಧರ್ಮದೇಟು
ರಿಪ್ಪನ್ಪೇಟೆ: ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಓಮ್ಮಿ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾದರಿ ಗ್ರಾಮಸ್ಥರು ವಾಹನವನ್ನು ತಡೆದು ತಪಾಸಣೆಗೆ ಮುಂದಾಗುತ್ತಿದ್ದಂತೆ ವಾಹನ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದು ಇನ್ನೋರ್ವ ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿದ ಘಟನೆ ಶುಕ್ರವಾರ ರಾತ್ರಿ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಸಮೀಪದ ಆಚಾಪುರ ಗ್ರಾಮದವರೆಂದು ಹೇಳಲಾಗುತ್ತಿದ್ದು ಎರಡು ಜಾನುವಾರುಗಳನ್ನು ಮತ್ತು ಓರ್ವ ಆರೋಪಿಯನ್ನು ಹಿಡಿದ ಕೆಂಚನಾಲ ಗ್ರಾಮಸ್ಥರು ಠಾಣೆಗೆ ಒಪ್ಪಿಸಿದ್ದಾರೆ. ಪಿಎಸ್ಐ ಪ್ರವೀಣ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪರವಾನಗಿ ಇಲ್ಲದೆ ಹಸುಗಳ ಸಾಗಾಟ
ಸಾಗರ: ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ವಿಠಲ್ ಪೈ ಅವರಿಗೆ ಸೇರಿದ ನಾಲ್ಕು ಹಸುಗಳನ್ನು ಮೂರಳ್ಳಿಯ ಶಿವರಾಜ್ ಮತ್ತು ನಾಗರಾಜ್ ಎಂಬುವವರು ಲಗೇಜ್ ಆಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ತೆಗೆದುಕೊಂಡು ಬರುತ್ತಿದ್ದಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮುಂಡಿಗೇಸರ ವೃತ್ತದಲ್ಲಿ ತಡೆದು ನಿಲ್ಲಿಸಿದ ತನಿಖೆ ನಡೆದಿದೆ. ಶಿವರಾಜ್ ಮತ್ತು ನಾಗರಾಜ್ ಹಸುಗಳನ್ನು ಖರೀದಿಸಿ ಲಗೇಜ್ ಆಟೋದಲ್ಲಿ ಒಯ್ಯುತ್ತಿದ್ದರು. ಆದರೆ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಹಿಂದೂ ಜಾಗರಣಾ ವೇದಿಕೆ ಮತ್ತು ಗ್ರಾಮಸ್ಥರು ಆಟೋ ಸಹಿತ ಶಿವರಾಜ್, ನಾಗರಾಜ್ ಅವರನ್ನು ಗ್ರಾಮಾಂತರ ಠಾಣೆಗೆ ಒಪ್ಪಿಗೆ ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಪ್ಪನ್ಪೇಟೆ: ಇನ್ನೋವಾ ಕಾರು ಪಲ್ಟಿ!
ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ ಸಮೀಪದ ಜಂಬಳ್ಳಿ ತಿರುವಿನಲ್ಲಿ ಇನ್ನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಹುಂಚ ಕಡೆಯಿಂದ ರಿಪ್ಪನ್ಪೇಟೆ ಕಡೆಗೆ ಬರುತ್ತಿದ್ದ ಟೊಯೋಟಾ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಲ್ಲಿ ನಾಲ್ವರು ಪ್ರಯಾಣಿಸುತಿದ್ದರು. ಜಂಬಳ್ಳಿ ತಿರುವಿನಲ್ಲಿ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಮನ್ (21) ಕುಮಾರ್ (21) ಇಬ್ಬರಿಗೆ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಇಬ್ಬರನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕ ಮದನ್ ಎಂಬಾತನಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.