ವಿಷ ಕುಡಿಯುವಂತೆ ಪತ್ನಿಗೆ ಪತಿಯಿಂದಲೇ ಪ್ರಚೋದನೆ?!
– ಸಾಗರ: ಗಣಪತಿ ಕೆರೆ ಬಳಿಯಲ್ಲಿ ಪಲ್ಟಿಯಾದ ಕಾರು!
– ಭದ್ರಾವತಿ: ಯುವಕನೋರ್ವನಿಗೆ ಚಾಕು ಇರಿತ
– ಸಾಗರ : ಹೆದ್ದಾರಿಯಲ್ಲಿ ಬೈಕ್ಗಳ ನಡುವೆ ಡಿಕ್ಕಿ
NAMMUR EXPRESS NEWS
ಭದ್ರಾವತಿ: ಮಹಿಳೆಯೊಬ್ಬರು ವಿಷ ಕುಡಿಯುವ ದೃಶ್ಯ ಮೊಬೈಲ್ ಅಲ್ಲಿ ಸೆರೆಯಾಗಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೂರುದಾರ ಚಂದ್ರಮ್ಮ ಅಡಿಕೆ ಕೊಯ್ಲು ಮಾಡಲು ಬಂದ ವೇಳೆ ಗಿರೀಶ್ ಪಾಟೀಲ್ ಎಂಬವರು ಮತ್ತು ಅವರ ಕುಟುಂಬ ವ್ಯಾಜ್ಯ ತೆಗೆದಿದೆ. ಈ ವೇಳೆ ಗಿರೀಶ್ರ ಪತ್ನಿ ಮಧುಮಾಲಾ ವಿಷ ಕುಡಿದಿದ್ದಾಳೆ. ಸುಮಾರು ಹತ್ತಿಪ್ಪತ್ತು ಮಂದಿ ಎದುರೇ ಆಕೆ ವಿಷ ಕುಡಿದರು ಆಕೆಯನ್ನು ರಕ್ಷಿಸಲು ಯಾರು ತೆರಳಲಿಲ್ಲ. ಮೊದಲಾಗಿ ಪತಿಯೇ ಕುಡಿ ಕುಡಿ ವಿಷ ಕುಡಿ ಎನ್ನುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ವಿಷ ಕುಡಿದ ಮಹಿಳೆಯು ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಡೀ ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯ ಸ್ಟೇಟ್ಮೆಂಟ್ ಪಡೆಯಲು ಭದ್ರಾವತಿ ಗ್ರಾಮಾಂತರ ಪೊಲೀಸರು ತೆರಳಿದ್ದಾರೆ.
ಸಾಗರದ ಗಣಪತಿ ಕೆರೆ ಬಳಿಯಲ್ಲಿ ಪಲ್ಟಿಯಾದ ಕಾರು!
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸೋಮವಾರ ಎರಡು ಅಪಘಾತ ಪ್ರಕರಣಗಳು ಸಂಭವಿಸಿದೆ. ನಿಂತಿದ್ದ ಕೆಎಸ್ಆರ್ಟಿಸಿ ಬಸ್ಗೆ ಬೈಕ್ವೊಂದು ಗುದ್ದಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ತ್ರಿಬ್ಬಲ್ ರೈಡಿಂಗ್ ಬರುತ್ತಿದ್ದ ವಿದ್ಯಾರ್ಥಿಗಳು ನೇರವಾಗಿ ಬಸ್ಗೆ ಗುದ್ದಿದ್ದರು. ಇ ರಾತ್ರಿ ಸಾಗರ ಪೇಟೆಯ ಗಣಪತಿ ಕೆರೆಯ ಬಳಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಕೋ ಕಾರೊಂದು ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಗಣಪತಿ ಕೆರೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.
ಭದ್ರಾವತಿಯಲ್ಲಿ ಯುವಕನಿಗೆ ಚಾಕು ಇರಿತ
ಭದ್ರಾವತಿ: ನಡೆದುಕೊಂಡು ಹೋಗುತ್ತಿದ್ದ ಯುವನಿಗೆ ಚಾಕುವಿನಿಂದ ಇರಿಯಲಾಗಿದೆ. ಭದ್ರಾವತಿಯ ಹೊನಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಂದ ಕುಮಾರ್ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಹೊಸಮನೆ ಠಾಣೆ ವ್ಯಾಪ್ತಿಯ ಹನುಮಂತ ನಗರದಲ್ಲಿ ಈ ಘಟನೆ ನಡೆದಿದ್ದು ನಂದ ಕುಮಾರ್ ನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಸುತ್ತ ಖಾಕಿ ಸರ್ಪಗಾವಲು ಹೆಣೆಯಲಾಗಿದೆ.
ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಅಪಘಾತ
ಶಿವಮೊಗ್ಗದ ಆಯನೂರು ಸಮೀಪ ಮೂರು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಇವತ್ತು ಬೆಳಗ್ಗೆ ವೀರಣ್ಣನ ಬೆನವಳ್ಳಿ ಸಮೀಪ ಈ ಘಟನೆ ಸಂಭವಿಸಿದೆ. ಆಯನೂರು ಕಡೆಯಿಂದ ಶಿವಮೊಗ್ಗ ಕಡೆ ಬೈಕ್ವೊಂದು ಬರುತ್ತಿತ್ತು. ಅದೇ ಸಂದರ್ಭದಲ್ಲಿ ಶಿವಮೊಗ್ಗದ ಕಡೆಯಿಂದ ಎರಡು ಬೈಕ್ಗಳು ಆಯನೂರು ಕಡೆಗೆ ಹೋಗುತ್ತಿತ್ತು. ಈ ಮಧ್ಯೆ ಒಂದು ಬೈಕ್ ಸವಾರ ಟರ್ನ್ ತೆಗೆದುಕೊಂಡಿದ್ದಾನೆ ಎನ್ನಲಾಗಿದ್ದು, ಹಿಂದಿನಿಂದ ಬರುತ್ತಿದ್ದ ಬೈಕ್ ಮುಂದಿನ ಬೈಕ್ಗೆ ಡಿಕ್ಕಿ ಹೊಡೆದಿದೆ.
ಇದೇ ವೇಳೆ ಆಯನೂರು ಕಡೆಯಿಂದ ಬರುತ್ತಿದ್ದ ಬೈಕ್ ಎದುರು ಆಕ್ಸಿಡೆಂಟ್ ಆದ ಬೈಕ್ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ನಲ್ಲಿದ್ದ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಇನ್ನೂ ಆಯನೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೂ ಗಾಯವಾಗಿದೆ. ವಿಷಯ ತಿಳಿಯುತ್ತಲೇ ಸ್ಥಳದಲಿದ್ದವರು ಆ್ಯಂಬುಲೆನ್ಸ್ಗೆ ಕರೆ ಮಾಡಿ ಮೂವರನ್ನ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಸದ್ಯ ಮೂವರು ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾರೆ