ರೋಗ ನಿರೋಧಕ ಶಕ್ತಿ ಕಡಿಮೆ ಇರೋದ್ರಿಂದ ರೋಗ ಸಾಧ್ಯತೆ
ಬೆಂಗಳೂರು: ಧೂಮಪಾನ ಮಾಡುವವರು ಕರೋನಾ ಸೋಂಕಿಗೆ ತುತ್ತಾಗಬಹುದಾದ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಇದು ಚಟ ತ್ಯಜಿಸಲು ಸೂಕ್ತ ಸಮಯ ಎಂದು ವರದಿ ಹೇಳಿದೆ. ಧೂಮಪಾನ ಮುಕ್ತ ನಗರ ಬೆಂಗಳೂರು ಅಭಿಯಾನದ ಯೋಜನೆಯ ಮುಖ್ಯಸ್ಥರು ಹಾಗು ರಾಜ್ಯ ಎನ್.ಸಿ.ಡಿ. ಪ್ರ್ರಿವೆನ್ಷನ್ ಟಾಸ್ಕ್ ಪೆÇೀರ್ಸ್ನ ಸದಸ್ಯರೂ ಆಗಿರುವ ಡಾ.ತ್ರಿವೇಣಿ ಅವರು ತಂಬಾಕು ಬಳಕೆಯು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಹಾಗೂ ಕೊರೋನಾ ಸೋಂಕಿನ ಭೀತಿಯನ್ನು ಹೆಚ್ಚಿಸುತ್ತದೆ.
ಹೀಗಾಗಿ ಧೂಮಪಾನ ಮಾಡುವವರು ಕರೋನಾಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಧೂಮಪಾನವನ್ನು ತ್ಯಜಿಸಲು ಹಾಗೂ ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಲು ಇದು ಉತ್ತಮ ಸಮಯ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ 80 ಲಕ್ಷ ಜನರು ತಂಬಾಕಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಇವರಲ್ಲಿ 7 ಲಕ್ಷ ಜನರು ಪ್ರತ್ಯಕ್ಷ ತಂಬಾಕು ಬಳಕೆಯಿಂದ ಹಾಗೂ 1 ಲಕ್ಷ ಜನರು ಪರೋಕ್ಷ ಧೂಮಪಾನದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗಂತೂ ಧೂಮಪಾನ ಮಾಡುವವರಿಗೆ ರೋಗ ನಿರೋಧಕ ಶಕ್ತಿ ಕ್ಷಿಣಿಸಿ ಕರೋನಾಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಧೂಮಪಾನ ಹಾಗು ತಂಬಾಕು ಬಳಕೆಯು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕ್ಷೀಣ ಮಾಡುತ್ತದೆ. ಈ ಮೂಲಕ ಶ್ವಾಸಕೋಶಕ್ಕೆ ಸಂಬಂಧಿಸಿದ ಸಿಒಪಿಡಿ, ಹೃದಯ ಸಂಬಂಧಿ ಖಾಯಿಲೆ ಹಾಗೂ ಮಧುಮೇಹ ದಂತಹ ತೊಂದರೆಗಳಿಗೆ ಎಡೆಮಾಡುತ್ತದೆ. ಈ ಎಲ್ಲಾ ಸಮಸ್ಯೆಗಳು ಕೋವಿಡ್ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮುಂದುವರಿದಂತೆ, ಧೂಮಪಾನಿಗಳು ಸತತವಾಗಿ ಕೈಯನ್ನು ಬಾಯಿಯ ಸಂಪರ್ಕಕ್ಕೆ ತರುವುದು ಹಾಗು ಸಿಗರೇಟು ಹಂಚಿಕೊಳ್ಳುವುದರಿಂದ ಕೊರೋನಾ ಸೋಂಕು ತಗಲುವಿಕೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ತಂಬಾಕು ಬಳಕೆದಾರರು ಅದರ ಅಭ್ಯಾಸವನ್ನು ಬಿಡಲು ಬಯಸಿದ್ದಲ್ಲಿ ರಾಷ್ಟ್ರೀಯ ತಂಬಾಕು ಕ್ವಿಟ್ ಲೈನ್ ಸಂಖ್ಯೆಯಾದ 1800-11-2356ಗೆ ಕರೆಮಾಡಿ ಉಚಿತ ಆಪ್ತ ಸಮಾಲೋಚನೆ ಪಡೆದುಕೊಳ್ಳಬಹುದಾಗಿದೆ. ತಂಬಾಕು ತ್ಯಜಿಸಲು ದಿನಾಂಕ ನಿಗದಿಪಡಿಸುವುದು, ವೈಯಕ್ತಿಕ ಯೋಜನೆಯನ್ನು ರೂಪಿಸಲು ಹಾಗು ಅದರ ಫಾಲೋ-ಅಪ್ಗಾಗಿ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಇದರ ಪ್ರಯೋಜನವನ್ನು ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಇಂಗ್ಲಿμï, ಹಿಂದಿ ಮತ್ತು ಪ್ರಾದೇಶಿಕ ಭಾμÉಗಳಲ್ಲಿ ತರಬೇತಿ ಪಡೆದ ಸಮಾಲೋಚಕರ ಮೂಲಕ ಪಡೆಯಬಹುದಾಗಿದೆ. ಎಲ್ಲಾ ಕರೆಗಳು, ಸಂಭಾಷಣೆಯು ಹಾಗು ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುತ್ತದೆ.ತಂಬಾಕು ಬಳಕೆದಾರರು 011-22901701ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಸಹಾ ತಂಬಾಕು ವ್ಯಸನ ಮುಕ್ತಿ ಸೇವೆಯನ್ನು ಉಚಿತವಾಗಿ ಬಳಸಬಹುದಾಗಿದೆ.