ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆಯಿಂದ ವೈರಸ್ ನಾಶ
ನವ ದೆಹಲಿ: ಕರೋನಾ ವೈರಸ್ ನಮ್ಮ ಚರ್ಮಕ್ಕೆ ಅಂಟಿಕೊಂಡರೆ ಅನೇಕ ಗಂಟೆಗಳ ಕಾಲ ಬದುಕಿ ಇರಬಲ್ಲದು ಎಂದು ಸಂಶೋಧನೆ ಹೇಳಿದೆ. ಕೋವಿಡ್-19ಗೆ ಕಾರಣವಾಗುವ ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು, Flow ವೈರಸ್ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.
ಹೀಗಾಗಿಯೇ ಮನೆಯಿಂದ ಹೊರಗೆ ಹೋದರೆ, ಮನೆಯಲ್ಲಿ ಪದೇ ಪದೇ ಬಿಸಿ ನೀರಿನಿಂದ ಕೈಕಾಲು ಮುಖ ತೊಳೆಯಬೇಕು!.ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಜರ್ನಲ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ವೈರಸ್ ವೇಗವಾಗಿ ನಿಷ್ಕ್ರೀಯಗೊಳಿಸಬಹುದು.ಕೋವಿಡ್-19 ಹರಡುವುದನ್ನು ತಡೆಗಟ್ಟಲು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಈ ಸಂಶೋಧನೆಯು ಒತ್ತಿಹೇಳುತ್ತದೆ.ಸ್ಟೇನ್ಲೆಸ್ ಸ್ಟೀಲ್, ಗಾಜುಗಳು ಮತ್ತು ಪ್ಲಾಸ್ಟಿಕ್ನಂತಹ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲ್ಮೈಗಳಲ್ಲಿ ಸಾರ್ಸ್- ಕೋವ್-2 ಮತ್ತು ಐಎವಿ ವೈರಸ್ನ್ನು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅಧ್ಯಯನ ಕಂಡುಹಿಡಿದಿದೆ.