ಖಾಂಡ್ಯದಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ
– ಧರ್ಮಸ್ಥಳ ಯೋಜನೆಯ ಆಶ್ರಯದಲ್ಲಿ ತಪಾಸಣೆ
– ಯಾರು ತಪಾಸಣೆ ಮಾಡಿಸಿಕೊಳ್ಳಬೇಕು…?
NAMMUR EXPRESS NEWS
ಖಾಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಇವರ ಸಹಯೋಗದೊಂದಿಗೆ ಉಚಿತ ಮ್ಯಾಮೊಗ್ರಫಿ ತಪಾಸಣಾ ಶಿಬಿರ ಸ್ತನ ಕ್ಯಾನ್ಸರ್ (ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ನ.7ಕ್ಕೆ ನಡೆಯಲಿದೆ. ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚುವುದೇ ಸೂಕ್ತ ಎಂಬ ಜಾಗೃತಿಯಡಿ 7ನೇ ನವೆಂಬರ್ 2023 (ಮಂಗಳವಾರ) 1 ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ವರೆಗೆ ನೆಡೆಯುತ್ತದೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಖಾಂಡ್ಯ ಹೋಬಳಿ ಆಶ್ರಯದಲ್ಲಿ ನಡೆಯುತ್ತಿದೆ.
ಯಾರು ತಪಾಸಣೆ ಮಾಡಿಸಿಕೊಳ್ಳಬೇಕು
ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಉಚಿತ ತಪಾಸಣೆ ಮಾಡಿಸಿಕೊಳ್ಳಿ ನಿಮ್ಮ ವಯಸ್ಸು 40 ದಾಟಿದ್ದರೆ | ಸ್ತನ ಕ್ಯಾನ್ಸರ್ನ ಮೊದಲ ಹಂತದ ಸಂಬಂಧವನ್ನು ಹೊಂದಿದ್ದರೆ ಹಾಗೂ ಸ್ತನ ಭಾಗದಲ್ಲಿ ಗಟ್ಟಿಯಾಗುವಿಕೆ ಅಥವಾ ಗಂಟು ಇದ್ದರೆ 1 ಸ್ತನದ ಆಕಾರದಲ್ಲಿ ಅಥವಾ ಗಾತ್ರದಲ್ಲಿ ಬದಲಾವಣೆ ನಿರ್ದಿಷ್ಟವಾಗಿ ಒಳಹೋದಂತೆ ಆಗುವುದು ಅಥವಾ ಅನಿಯಮಿತ ಆಕಾರ ಹೊಂದಿದ್ದರೆ ಸ್ತನದಿಂದ ರಕ್ತಸಾವ ಕಂಡುಬಂದರೆ | ಸ್ತನ ತೊಟ್ಟುಗಳಲ್ಲಿ ಅಥವಾ ಅದರ ಸುತ್ತ ಬಿರುಕುಗಳು ಇದ್ದರೆ ಕಂಕುಳಿನ ಭಾಗದಲ್ಲಿ ಊತ ಅಥವಾ ಗಂಟು ಕಂಡುಬಂದರೆ ಉಚಿತ ಚಿಕಿತ್ಸೆ ಪಡೆಯಿರಿ
ಹೆಚ್ಚಿನ ಮಾಹಿತಿಗಾಗಿ: – 94825 33816, 9481577101, 9980948895