- ಹೊಸ ತಂತ್ರಜ್ಞಾನ, ಕಾರ್ಯಕ್ಷಮತೆ, ಕೌಶಲ್ಯ ಇದ್ದವರಿಗೆ ಕೆಲಸ
- ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಸ್ಕಿಲ್ ಟ್ರೈನಿಂಗ್
ನವ ದೆಹಲಿ: ಒಂದ್ ಒಳ್ಳೆ ಕಂಪನಿಯಲ್ಲಿ ಕೆಲಸ ಬೇಕಾ…?. ಬರೀ ಮಾಕ್ರ್ಸ್, ರ್ಯಾಂಕ್ ಇದ್ರೆ ಸಾಲದು. ಹೊಸ ತಂತ್ರಜ್ಞಾನ, ಕಾರ್ಯಕ್ಷಮತೆ, ಕೌಶಲ್ಯ ಇರಬೇಕು. ಕಂಪನಿಯ ಟಾರ್ಗೆಟ್ ಜಾಣ್ಮೆಯಿಂದ ನಿಭಾಯಿಸಬೇಕು. ಉದಯೋನ್ಮುಖ ಟ್ರೆಂಡ್ ತಕ್ಕಂತೆ ಕೆಲಸ ಮಾಡಬೇಕು. ಇದು ಈಗ ಕಂಪನಿಗಳ ಬೇಡಿಕೆ.
ಹೌದು. ಆಕ್ಸೆಂಚರ್, ಇನ್ಫೋಸಿಸ್, ಕಾಗ್ನಿಜೆಂಟ್, ಟೆಕ್ ಮಹೀಂದ್ರಾ, ಎಂಫಾಸಿಸ್ ಸೇರಿದಂತೆ ಹಲವಾರು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಭವಿಷ್ಯದ ತಂತಜ್ಞಾನಕ್ಕೆ ತಕ್ಕಂತೆ ಸಜ್ಜುಗೊಳಿಸುತ್ತಿವೆ. ಗ್ಲೋಬಲ್ ಟೆಕ್ನಾಲಜಿ ಕಂಪನಿ ಆಕ್ಸೆಂಚರ್ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿನ ತನ್ನ ಶಾಖೆಯಲ್ಲಿ ಶೇ.85ರಷ್ಟು ಉದ್ಯೋಗಿಗಳ ಕೌಶಲವನ್ನು ಮೇಲ್ದರ್ಜೆಗೇರಿಸಿದೆ. ಆಕ್ಸೆಂಚರ್ ಉದ್ಯೋಗಿಗಳು ಡಿಜಿಟಲ್, ಕ್ಲೌಡ್, ಸೆಕ್ಯೂರಿಟ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಂತಹ ಹೊಸ ಐಟಿ ಸ್ಕಿಲ್ಸ್ ಕಲಿಯುತ್ತಿದ್ದಾರೆ. ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಉಳಿತಾಯವನ್ನು ಸ್ಕಿಲ್ ಕಲಿಕೆ ಮೇಲೆ ಹೂಡುವುದನ್ನು ಐಟಿ ಕಂಪನಿಗಳು ಅನುಸರಿಸುತ್ತಿವೆ. ಹೀಗಾಗಿ ಹೊಸ ತಲೆಮಾರಿನ ಉದ್ಯೋಗ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.
ಬಂಡವಾಳ ಹೂಡಿಕೆ: ಆಕ್ಸೆಂಚರ್ ಕಂಪನಿಯು ಆಟೋಮೇಷನ್ನಿಂದ ಉಳಿತಾಯವಾಗುವ ಶೇ.60ರಷ್ಟು ಹಣವನ್ನು ಉದ್ಯೋಗಿಗಳ ರೀಸ್ಕಿಲ್ಗೆ ಬಳಸುತ್ತಿವೆ. ಈ ಮೂಲಕ ಹೊಸ ತಂತ್ರಜ್ಞಾನಗಳು ಮತ್ತು ವೃತ್ತಿಪರ ಕೌಶಲಗಳನ್ನು ಕಲಿಸಲು ಜಾಗತಿಕವಾಗಿ 1 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತಿದೆ. ಆಕ್ಸೆಂಚರ್ ಭಾರತದಲ್ಲಿ 170,000 ಉದ್ಯೋಗಿಗಳನ್ನು ಹೊಂದಿದೆ. ಭಾರತದ ಒಟ್ಟು ಐಟಿ ನೌಕರರಲ್ಲಿ ಶೇ. 40ರಷ್ಟು ಮಂದಿ ಮುಂದಿನ ಐದು ವರ್ಷಗಳಲ್ಲಿ ಉದಯೋನ್ಮುಖ ಟ್ರೆಂಡ್ಗಳಾದ ಎಐ, ಐಒಟಿ, ಮೆಷಿನ್ ಲನಿರ್ಂಗ್ ಮತ್ತು ಬ್ಲಾಕ್ಚೇನ್ ಕೌಶಲಗಳನ್ನು ಕಲಿಯಲಿದ್ದಾರೆ ಎಂದು ಭಾರತೀಯ ಸಾಫ್ಟ್ವೇರ್ ಸೇವಾ ಸಂಸ್ಥೆಗಳ ಒಕ್ಕೂಟ ನಾಸ್ಕಾಂ ತಿಳಿಸಿದೆ.
ಕೌಶಲಗಳಿಗೆ ಬೇಡಿಕೆ: ಬಿಗ್ ಡೇಟಾ ಅನಾಲಿಟಿಕ್ಸ್, ಎಐ/ಎಂಎಲ್, ಸೈಬರ್ ಸೆಕ್ಯೂರಿಟಿ, ಐಒಟಿ, ರೊಬಾಟಿಕ್ಸ್ನಂತ ಉದಯೋನ್ಮುಖ ತಂತ್ರಜ್ಞಾನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಐಟಿ ಮಾರುಕಟ್ಟೆಯಲ್ಲಿ ರೀಸ್ಕಿಲ್ಲಿಂಗ್ ಪ್ರಥಮ ಆದ್ಯತೆಯಾಗಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯು ಈಗಿರುವ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸುತ್ತಿವೆ ಎಂದು ನಾಸ್ಕಾಂನ ಅಮಿತ್ ಅಗರ್ವಾಲ್ ತಿಳಿಸಿದ್ದಾರೆ. ನಾಸ್ಕಾಂನ ಫ್ಯೂಚರ್ ಸ್ಕಿಲ್ಸ್ ಪ್ಲಾಟ್ಫಾರ್ಮ್ 20 ಲಕ್ಷ ಉದ್ಯೋಗಿಗಳ ಕೌಶಲವನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ಹೊಂದಿದೆ.
ಐಟಿ ವಲಯದ ದೈತ್ಯ ಕಂಪನಿ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ 75 ಹೊಸ ಕೋಸ್ರ್ಗಳನ್ನು ರೂಪಿಸಿದೆ. ಎಂಫಾಸಿಸ್ ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಕೌಶಲ್ಯದ ತರಬೇತಿ ನೀಡುತ್ತಿದೆ. ಕಾಗ್ನಿಜೆಂಟ್ ಕಂಪನಿ ಕಳೆದ 18 ತಿಂಗಳಿನಲ್ಲಿ 110,000 ಮಂದಿ ಉದ್ಯೋಗಿಗಳಿಗೆ ಕಾಗ್ನಿಜೆಂಟ್ ಅಕಾಡೆಮಿ ಮೂಲಕ ಸ್ಕಿಲ್ಸ್ ತರಬೇತಿ ನೀಡಿದೆ.
ಯಾವ್ಯಾವ ಸ್ಕಿಲ್ಗಳಿಗೆ ಟ್ರೇನಿಂಗ್: ಡೇಟಾ ಸೈನ್ಸ್, ಡಿಸೈನ್ ಥಿಂಕಿಂಗ್, ಸೈಬರ್ ಸೆಕ್ಯೂರಿಟಿ, ಇಂಟರ್ಯಾಕ್ಟಿವಿಟಿ, ಇಂಟನೆರ್ಂಟ್ ಆಫ್ ಥಿಂಗ್ಸ್, ಅನಾಲಿಟಿಕ್ಸ್, ಕ್ಲೌಡ್ ಟೆಕ್ನಾಲಜೀಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮೆಷಿನ್ ಲನಿರ್ಂಗ್, ಎಂಟಪ್ರ್ರೈಸ್ ಟೆಕ್ನಾಲಜೀಸ್ ಮುಂತಾದವು ಇದೀಗ ಹೆಚ್ಚು ಬೇಡಿಕೆ ಪಡೆದಿವೆ.