- ಭಾಷೆ, ಟೆಕ್ನಾಲಜಿ, ಜಾಣ್ಮೆ ಗೊತ್ತಿದ್ದವನೇ ಈಗ ಗುರು
- ಕರೋನಾ ತುರ್ತು ಕಾರಣ ಆನ್ಲೈನ್ ಶಿಕ್ಷಣಕ್ಕೆ ಮಾರುಕಟ್ಟೆ
ಕರೋನಾ ತುರ್ತು ಸಮಯದಲ್ಲಿ ಮಕ್ಕಳಿಗೆ ಟ್ಯೂಷನ್, ಎಜುಕೇಶನ್, ಸ್ಕಿಲ್ಸ್, ಹೊಸ ಕೋಸ್ರ್ಗಳ ಕಲಿಕೆ ಇತ್ಯಾದಿಗಳಿಗೆ ಆನ್ಲೈನ್ ಕ್ಲಾಸ್ ಮೊರೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಕಲಿಕೆ ಹಂಬಲ ಇದೆ. ಆದ್ದರಿಂದ ಹೊಸ ಮಾದರಿಯ ಶಿಕ್ಷಣ ಮತ್ತು ತರಬೇತಿ ಶುರುವಾಗುತ್ತಿದೆ.ಇದರಿಂದ ಸಹಜವಾಗಿ ಆನ್ಲೈನ್ ಟ್ಯೂಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವ ಅವಕಾಶ ದೊರಕುವುದರಿಂದ ಗೃಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾಟ್ಟೈರ್ಂ ಉದ್ಯೋಗವಾಗುತ್ತದೆ. ಈಗ ಆನ್ಲೈನ್ನಲ್ಲಿ ಹೊಸ ಹೊಸ ಕೋಸ್ರ್ಗಳನ್ನು ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆನ್ಲೈನ್ ಟ್ಯೂಟರ್ಗಳಿಗೆ ಉದ್ಯೋಗವಕಾಶ ಹೆಚ್ಚಾಗುತ್ತಿದೆ. ಆನ್ಲೈನ್ ಕೋರ್ಸ್ ನೀಡುವ ವಿವಿಧ ತಾಣಗಳಲ್ಲಿಜನರು ಹೊಸ ಹೊಸ ಕೋಸ್ರ್ಗಳನ್ನು ಕಲಿಯುತ್ತಿದ್ದಾರೆ. ಕೆಲವರು ಯೂಟ್ಯೂಬ್ ಟ್ಯುಟೋರಿಯಲ್ಗಳಿಗೆ ಭೇಟಿ ನೀಡುತ್ತಾರೆ. ಇನ್ನು ಕೆಲವರು ಲೈವ್ ಆನ್ಲೈನ್ ಕ್ಲಾಸ್ಗಳಲಿ ್ಲಕಲಿಯುತ್ತಾರೆ.
ಕಲಿಕೆಗೆ ಇಂಟರ್ನೆಟ್ ಅನ್ನು ಅವಲಂಬಿಸುವವರು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಲ್ಲಿ ಬೋಧನೆ ಮಾಡುವ ‘ಆನ್ಲೈನ್ ಟ್ಯೂಟರ್’ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಆನ್ಲೈನ್ ಟ್ಯೂಟರ್ ಎಂದು ಜಾಬ್ ವೆಬ್ಸೈಟ್ಗಳಲ್ಲಿ ಹುಡುಕಿದರೆ ಸಾಕಷ್ಟು ಜಾಬ್ ಆಫರ್ ಕಾಣ ಸಿಗುತ್ತವೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವುದರಿಂದ ಗ್ರಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾಟ್ಟೈರ್ಂ ಕೆಲಸವಾಗುತ್ತದೆ. ಬೇರೆ ಉದ್ಯೋಗದಲ್ಲಿದ್ದುಕೊಂಡು ಅಥವಾ ಯಾವುದಾದರೂ ಕಾಲೇಜುಗಳಲ್ಲಿ ಬೋಧಕರಾಗಿದ್ದುಕೊಂಡು ಇರುವವರು ಸಹ ಬಿಡುವಿನ ವೇಳೆಯಲ್ಲಿ ಆನ್ಲೈನ್ ಮಾಸ್ಟರ್ ಆಗಬಹುದಾಗಿದೆ.
ಆನ್ಲೈನ್ ಟ್ಯೂಟರ್ಗಳು ಕ್ಲಾಸ್ ರೂಂನಲ್ಲಿ ಪಾಠ ಮಾಡುವ ಕೆಲಸವನ್ನೆ ಇಲ್ಲಿ ಮಾಡುತ್ತಾರೆ. ಆದರೆ, ಆನ್ಲೈನ್ನಲ್ಲಿ ಕೇವಲ ಬೋಧನೆ ಮಾಡುತ್ತ ಇದ್ದರೆ ಸಾಲದು. ಇಂಟರ್ನೆಟ್ ತಂತ್ರಜ್ಞಾನದ ವೆಬ್ ಕ್ಯಾಮೆರಾ, ಫೆÇೀರಂಗಳು, ಸೋಷಿಯಲ್ ಮೀಡಿಯಾ, ಬ್ಲಾಗಿಂಗ್ ತಾಣಗಳು, ಚಾಟ್ ರೂಂ ಇತ್ಯಾದಿಗಳನ್ನು ಬಳಸಿ ಪಾಠ ಮಾಡಬೇಕಾಗುತ್ತದೆ. ಇಮೇಲ್, ಚಾಟ್ ರೂಂ ಅಥವಾ ಮೆಸೆಜ್ ಬೋರ್ಡ್ ಮೂಲಕ ವಿದ್ಯಾರ್ಥಿಯೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ. ಆನ್ಲೈನ್ ಟ್ಯೂಟರ್ ಆಗಲು ಉಳಿದ ಟೀಚಿಂಗ್ ಪೆÇೀಸ್ಟ್ಗಳಿಗೆ ಇರುವಂತೆ ಟೀಚಿಂಗ್ ಶಿಕ್ಷಣ, ಸ್ನಾತಕೋತ್ತರ ಇತ್ಯಾದಿ ವಿದ್ಯಾರ್ಹತೆ ಇರಬೇಕು. ತಂತ್ರಜ್ಞಾನದ ಸಮರ್ಪಕ ಬಳಕೆ ತಿಳಿದರಬೇಕಾಗುತ್ತದೆ. ಹೆಚ್ಚಿನ ಟ್ಯೂಟರ್ ಸಂಸ್ಥೆಗಳು ಉತ್ತಮ ಸಂವಹನ ಕೌಶಲ ಇರುವವರಿಗೆ ಆದ್ಯತೆ ನೀಡುತ್ತವೆ.
ಸಾಂಪ್ರದಾಯಿಕ ಟೀಚಿಂಗ್ ಪೆÇೀಸ್ಟ್ಗಳಿಗೆ ಇರಬೇಕಾದ ಅರ್ಹತೆಗಳಂತೆ, ಆನ್ಲೈನ್ ಟ್ಯೂಟರ್ ಆಗಲು ಸಹ ಬಿಎಡ್, ಎಂಎ ಇತ್ಯಾದಿ ವಿದ್ಯಾರ್ಹತೆ ಇರಬೇಕು. ಇತರೆ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಗೂ ಇಲ್ಲಿ ಅವಕಾಶ ದೊರಕುತ್ತದೆ. ತಂತ್ರಜ್ಞಾನದ ಸಮರ್ಪಕ ಬಳಕೆ ತಿಳಿದಿರಬೇಕಾಗುತ್ತದೆ.
ಉದ್ಯೊಗ ಕ್ಲಾಸ್ ರೂಂ ಶಿಕ್ಷಣಕ್ಕಿಂತ ಕೊಂಚ ಭಿನ್ನವಾಗಿರುತ್ತದೆ. ಕ್ಲಾಸ್ನಲ್ಲಿ ಆದರೆ ವಿದ್ಯಾರ್ಥಿಗಳು ನಿಮ್ಮ ಮುಂದೆ ಇರುತ್ತಾರೆ. ಇಲ್ಲಿ ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿಯು ಕಂಪ್ಯೂಟರ್ ಪರದೆಯ ಮೇಲೆ ಕಾಣಿಸುತ್ತಾರೆ. ಇಂಟರ್ನೆಟ್ ಉತ್ತಮವಾಗಿರಬೇಕು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ತಕ್ಷಣ ಮಾಹಿತಿ ಸಂಗ್ರಹಿಸಿ ಸಮರ್ಪಕವಾಗಿ ಉತ್ತರಿಸಬೇಕು.
ಆನ್ಲೈನ್ನಲ್ಲಿ ಏನು ಪಾಠ ಮಾಡಬೇಕೆಂದು ಮೊದಲೇ ರೂಪುರೇಷೆ ಸಿದ್ಧವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಪ್ರಸಂಟೇಷನ್ ಮಾಡುವ ಕಲೆ ನಿಮಗಿರಬೇಕು. ವಿದ್ಯಾರ್ಥಿಗಳು ತಕ್ಷಣ ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವ ಜ್ಞಾನ ನಿಮ್ಮಲ್ಲಿ ಇರಬೇಕು. ಇದಕ್ಕಾಗಿ ಆನ್ಲೈನ್ನಲ್ಲಿ ವಿದ್ಯಾರ್ಥಿಗಳಿಗೆ ಇಂಪ್ರೆಷನ್ ಮಾಡುವಂತಹ ಗುಣ ಬೆಳೆಸಿಕೊಳ್ಳಿ. ನಿಗದಿತ ಸಮಯದಲ್ಲಿಇಂತಿಷ್ಟು ವಿಷಯಗಳನ್ನು ಬೋಧಿಸುವ ಅನಿವಾರ್ಯತೆ ಇರುತ್ತದೆ. ಈ ಸಮಯದಲ್ಲಿವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ ಎಂದು ತಿಳಿದುಕೊಂಡೇ ಮುಂದುವರೆಯಿರಿ. ಅಂದರೆ, 30 ಗಂಟೆಗಳ, 100 ಗಂಟೆಗಳ ಕೋರ್ಸ್ ಇತ್ಯಾದಿ ಮಿತಿಗಳು ಇರುತ್ತವೆ. ಇದಕ್ಕೆ ತಕ್ಕಂತೆ ನೀವು ಬೋಧನೆ ಮಾಡಬೇಕಾಗುತ್ತದೆ. ಆನ್ಲೈನ್ ಬೋಧಕರಾಗುವುದು ಹೇಗೆ ಎಂದು ಕಲಿಸಲು ಸಹ ಆನ್ಲೈನ್ ಕೋಸ್ರ್ಗಳಿವೆ. ಟೀಚರ್ ಫೌಂಡೇಷನ್, ಟೆಸೊಲ್, ಟ್ಯೂಟರ್ ಇಂಡಿಯಾ ಮುಂತಾದ ವೆಬ್ಸೈಟ್ಗಳಲ್ಲಿ ನಿಮಗೆ ಸೂಕ್ತವಾದ ಕೋಸ್ರ್ಗಳನ್ನು ಕಲಿಯಬಹುದು.