ಗೋವಾ, ಹೈದ್ರಾಬಾದ್,ತಿರುಪತಿಗೆ ಶಿವಮೊಗ್ಗದಿಂದ ವಿಮಾನ!
– 400 ಜನ ಇಂದು ಒಂದೇ ದಿನ ಪ್ರಯಾಣ
– ಯಾವತ್ತು ಎಲ್ಲೆಲ್ಲಿಗೆ ವಿಮಾನ ಸೇವೆ?!
NAMMUR EXPRESS NEWS
ಶಿವಮೊಗ್ಗ: ಮಂಗಳವಾರದಿಂದ ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ, ಗೋವಾ ರಾಜ್ಯಗಳಿಗೆ ವಿಮಾನಯಾನ ಪ್ರಾರಂಭವಾಗಲಿದೆ. ಬುಧವಾರ ಸ್ಟಾರ್ ಏರ್ ಲೈನ್ಸ್ ಹೈದರಾಬಾದ್ ನಿಂದ. ಬೆಳಗ್ಗೆ 9:30 ಕ್ಕೆ ಹೊರಟು ಶಿವಮೊಗ್ಗಕ್ಕೆ 10:35 ಕ್ಕೆ ಆಗಮಿಸಿದೆ. ಹೈದರಬಾದ್ ಗೆ ಮಂಗಳವಾರ, ಬುಧವಾರ ಗುರುವಾರ ಹಾಗೂ ಶನಿವಾರ ಸೇವೆ ನೀಡಲಿದೆ.
ಶಿವಮೊಗ್ಗದಿಂದ ಗೋವಾಕ್ಕೆ:
ಶಿವಮೊಗ್ಗದಿಂದ 13.55 ಕ್ಕೆ ಹೊರಟು ಗೋವಾಕ್ಕೆ 14.45 ಕ್ಕೆ ಗೋವಾದಲ್ಲಿ ವಿಮಾನ ಇಳಿಯಲಿದೆ. ಶಿವಮೊಗ್ಗದಿಂದ ಗೋವಾಕ್ಕೆ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಸ್ಟಾರ್ ಏರ್ ಲೈನ್ಸ್ ತನ್ನ ಸೇವೆಯನ್ನು ನೀಡಲಿದೆ.
ಶಿವಮೊಗ್ಗ- ತಿರುಪತಿ ಸೇವೆ:
ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ. ಈ ಸೇವೆಯು ಮಂಗಳವಾರ, ಗುರುವಾರ ಹಾಗೂ ಶನಿವಾರ ಇರಲಿದೆ. ಮಂಗಳವಾರ, ಗುರುವಾರ ಹಾಗೂ ಶನಿವಾರ ವಿಮಾನವು ಬೆಳಗ್ಗೆ 12.35 ಕ್ಕೆ ತಿರುಪತಿಯಿಂದ ಹೊರಟು ಶಿವಮೊಗ್ಗಕ್ಕೆ 13.40 ಕ್ಕೆ ಬರಲಿದೆ. ಬುಧವಾರ ಶಿವಮೊಗ್ಗದಿಂದ ವಿಮಾನ 13.:40 ಕ್ಕೆ ಹೊರಟ ವಿಮಾನವು ಮಧ್ಯಾಹ್ನ 14:35 ಕ್ಕೆ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 15:05 ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 15.55 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ಮೂರು ಕಡೆ ವಿಮಾನ ಹಾರಾಟ ಆರಂಭವಾಗಿದೆ. ಮೂರು ಕಡೆ ಪ್ರಯಾಣಿಸಲು 1999 ರೂ. ನಿಗದಿ ಪಡಿಸಲಾಗಿದೆ. ಹೈದರಾಬಾದ್ ನಿಂದ ಬಂದ ಸ್ಟಾರ್ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮಾಡಲಾಯಿತು. ಮತ್ತೆ ವಿಸಿಬಿಲಿಟಿ ಕಂಡ ಬಂದ ಕಾರಣ ಭದ್ರಾವತಿ ಸುತ್ತಿಕೊಂಡು ವಾಪಾಸ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದೆ.
ಉದ್ಘಾಟಿಸಿದ ಸಂಸದ:
ಚಾಲನೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಕಾಂಕ್ರಿಟ್ ಮ್ಯೂಸಿಯಂ ಆಗ್ತಾ ಇತ್ತು. ಉಡಾನ್ ಯೋಜನೆ ಅಡಿ ಈ ಗೋವಾ, ಹೈದ್ರಾಬಾದ್ ಮತ್ತು ತಿರುಪತಿ ವಿಮಾನ ಹಾರಾಟ ಪ್ರಾರಂಭವಾಗಿದೆ. 400 ಜನ ಪ್ರಯಾಣಿಕರು ಇಂದು ಒಜದೇ ದಿನ ಪ್ರಯಾಣದ ಲಾಭ ಪಡೆದಿದ್ದಾರೆ.63 ಜನ ತಿರುಪತಿಗೆ, ಹೈದ್ರಾಬಾದ್ ನಿಂದ 63, ಶಿವಮೊಗ್ಗದಿಂದ 41 ಜನ ಹೋಗ್ತಾ ಇದ್ದಾರೆ. ಒಟ್ಟು 400 ಜನ ಸ್ಟಾರ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.
ಬೆಂಗಳೂರು -ಶಿವಮೊಗ್ಗ ಸಕ್ಸಸ್
ಬೆಂಗಳೂರು ಮತ್ತು ಶಿವಮೊಗ್ಗದ ನಡುವೆ ಹಾರಾಡುತ್ತಿದ್ದಾರೆ. ಇಂಡಿಗೋ 78% ಜನ ಪ್ರಯಾಣಿಸಿದ್ದಾರೆ. ಮಧ್ಯಕರ್ನಾಟಕಕ್ಕೆ ಈ ವಿಮಾನ ನಿಲ್ದಾಣ ಉತ್ತಮವಾಗಿದೆ. ಇಂಡಿಗೋ ಮತ್ತು ಸ್ಟಾರ್ ಹಾರಾಟವಾಗುತ್ತಿದೆ. ಶಿವಮೊಗ್ಗ ಮತ್ತು ದೆಹಲಿ ಏರ್ ಇಂಡಿಯಾ, ಸ್ಟಾರ್ ಜೆಟ್ ಸಹ ಕೆಲ ದಿನಗಳಲ್ಲಿ ಹಾರಾಟ ನಡೆಸಲಿವೆ.