ಮಲೆನಾಡಿಗೆ ಕಾಲಿಟ್ಟ ಹನಿಟ್ರ್ಯಾಪ್ ಗ್ಯಾಂಗ್!
– ಭದ್ರಾವತಿ ಯುವಕನಿಗೆ ವಂಚನೆ: ಮೈಸೂರಿನ ಗ್ಯಾಂಗ್ ಅರೆಸ್ಟ್
– ಯುವಕ ಆತ್ಮಹತ್ಯೆ: ಪ್ರೇಮ ವೈಫಲ್ಯ ಕಾರಣ ಅಯ್ತೆ?
NAMMUR EXPRESS NEWS
ಶಿವಮೊಗ್ಗ: ಯುವಕರನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಶ್ವೇತಾ, ವಿನಾಯಕ, ಮಹೇಶ್,ಅರುಣ್ ಕುಮಾರ್ ಹಾಗೂ ಹೇಮಂತ್ ಕಾರು ಸೇರಿದಂತೆ 7 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಏನಿದು ಘಟನೆ?:
ಭದ್ರಾವತಿ ಮೂಲದ ಶರತ್ ಎಂಬುವರ ದೂರು ಆಧರಿಸಿ, ಗ್ಯಾಂಗ್ ಅನ್ನು ಸೆರೆ ಹಿಡಿಯಲಾಗಿದೆ. ಭದ್ರಾವತಿಯ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಶರತ್ ಕುಮಾರ್ ಗೆ ವಾಟ್ಸಪ್ ನಲ್ಲಿ ಬೆತ್ತಲೆಯಾಗಿ ಮಹಿಳೆಯೋರ್ವಳು ವಿಡಿಯೋ ಕಾಲ್ ಮಾಡಿದ್ದಳು. ಬಳಿಕ 20 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದರು. ಮೈಸೂರಿನ ಹನಿಟ್ರ್ಯಾಪ್ ಗ್ಯಾಂಗ್ ಶರತ್ ಬಳಿ 1 ಲಕ್ಷ ಹಣವನ್ನು ಹೆದರಿಸಿ ಕಿತ್ತುಕೊಂಡಿದ್ದರು. ಮೈಸೂರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಶರತ್ ಅನ್ನು ಶ್ವೇತಾ ಪರಿಚಯ ಮಾಡಿಕೊಂಡಿದ್ದಳು. ಬಳಿಕ ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಹೆದರಿಸುತ್ತಿದ್ದ ಗ್ಯಾಂಗ್ ಶರತ್ ಗೆ ಹಲ್ಲೆ ನಡೆಸಿ ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದರು.
ಅಲ್ಲದೆ ಒತ್ತಾಯಪೂರ್ವಕವಾಗಿ 25 ಲಕ್ಷ ಸಾಲ ಪಡೆದುಕೊಂಡಿರುವುದಾಗಿ ಸಹಿ ಹಾಕಿಸಿಕೊಂಡಿದ್ದರು. ಮೈಸೂರಿನಲ್ಲಿ ಶರತ್ ನನ್ನು ಎರಡು ದಿನಗಳ ಕಾಲ ಕೂಡಿ ಹಾಕಿ ಹಲ್ಲೆ ಮಾಡಿದ್ದರು. ತಪ್ಪಿಸಿಕೊಂಡು ಭದ್ರಾವತಿ ಹೊಸಮನೆ ಠಾಣೆಯಲ್ಲಿ ಶರತ್ ದೂರು ದಾಖಲಿಸಿದ್ದರು. ಶರತ್ ದೂರಿನ ಆಧರಿಸಿ, ಹಣ ವರ್ಗಾವಣೆಯ ಡೀಟೈಲ್ಸ್ ತೆಗದುಕೊಂಡು ಪೊಲೀಸರ ಕಾರ್ಯಚರಣೆ ನಡೆಸಿದ್ದರು. ಹನಿಟ್ರ್ಯಾಪ್ ಗ್ಯಾಂಗ್ ಲೀಡರ್ ಶ್ವೇತಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು.
ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ!
ಶಿವಮೊಗ್ಗ: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಲವ್ ವಿಷಯದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ಸಂಜೆ ವಿನೋದ್(21) ಎಂಬ ಯುವಕ ಆಡುಗೋಡಿ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಜಮೀನಿಗೆ ಹೋಗಿ ಬಂದ ವಿನೋದ್ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಬಿಎ ಪದವಿ ಪಾಸ್ ಆಗಿದ್ದ.. ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಸ್ವಭಾವಿಕ ಸಾವಿನ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿದೆ.