ಹೊಸನಗರ: ಕಾಲುವೆಯಲ್ಲಿ ಕಾಡಮ್ಮೆ ಸಾವು
– ಸರ್ಕಾರದ ಹೊಸ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ
– ಕಾಡೆಮ್ಮೆ ಸಾವು ಕಂಡಿದ್ದು ಹೇಗೆ..?
NAMMUR EXPRESS NEWS
ಹೊಸನಗರ: ಕಾಡೆಮ್ಮೆಯೊಂದು ಕಂದಕವೊಂದರಲ್ಲಿ ಬಿದ್ದು ಸಾವನಪ್ಪಿದ ಘಟನೆ ತಾಲೂಕಿನ ಬ್ರಾಹ್ಮಣವಾಡ ಗ್ರಾಮದಲ್ಲಿ ಸೋಮವಾರ ನಡೆದಿದೆ. ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣವಾಡ ಗ್ರಾಮದ ಸನಂ 50/52 ರ ನಾಗರಾಜಭಟ್ಟರಿಗೆ ಸೇರಿದ ಜಮೀನಿನ ಕಾಲುವೆಯೊಂದರಲ್ಲಿ ಸಾವನಪ್ಪಿದ ಸ್ಥಿತಿಯಲ್ಲಿ ಕಾಡೆಮ್ಮೆ ಪತ್ತೆಯಾಗಿತ್ತು. ಅರಣ್ಯಾಧಿಕಾರಿಗಳು ಪರಿಶೀಲಿಸಿದ ಬಳಿಕ ಪಶು ವೈದ್ಯಾಧಿಕಾರಿ ಅವಿನಾಶ್ ಮರಣೋತ್ತರ ಪರೀಕ್ಷೆ ನಡೆಸಿದ್ದು ಕಾಡೆಮ್ಮೆ ವಯೋಸಹಜ ಸಾವನಪ್ಪಿದ ಬಗ್ಗೆ ದೃಢಪಡಿಸಿದ್ದಾರೆ.
ನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇತ್ತೀಚಿನ ನಿಯಮಾವಳಿ ಪ್ರಕಾರ ಕಾಡೆಮ್ಮೆ ಕೋಡುಗಳನ್ನು ಭಾಗಶಃ ನಾಶಪಡಿಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಹೊಸನಗರ ಎಸಿಎಫ್ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಸಂಜಯ್, ಉಪವಲಯ ಅರಣ್ಯಾಧಿಕಾರಿ ಅಮೃತ್ ಸುಂಕದ್, ಗ್ರಾಪಂ ಸದಸ್ಯ ರಾಜಶೇಖರ್ ಕುಂದಗಲ್, ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.