ಮೂಡಿಗೆರೆಯಲ್ಲಿ 3ನೇ ಬಲಿ ಪಡೆದ ಕಾಡಾನೆ!
– ಆನೆ ಹಿಡಿಯಲು ಹೋದವನನ್ನೇ ತುಳಿದು ಸಾಯಿಸಿತು
– ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದ ಜನ
– ಶಿವಮೊಗ್ಗ ಜಿಲ್ಲೆಯಲ್ಲೂ ಕಾಡಾನೆ ಕಾಟ!
NAMMUR EXPRESS NEWS
ಮೂಡಿಗೆರೆ: ಸರಿ ಸುಮಾರು ಒಂದು ತಿಂಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ 3 ಮಂದಿ ಬಲಿಯಾದ ಘಟನೆ ಘಟನೆ ಕಾಫಿ ನಾಡು ಚಿಕ್ಕಮಗಳೂರಲ್ಲಿ ನಡೆದಿದೆ. ಆನೆ ತುಳಿತಕ್ಕೆ ಆನೆ ನಿಗ್ರಹ ಪಡೆಯ ಸದಸ್ಯನೇ ಬಲಿಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದ ಕಾರ್ತಿಕ್ ಗೌಡ (26) ಆನೆ ತುಳಿತಕ್ಕೆ ಮೃತ ದುರ್ದೈವಿ. ಕಾರ್ತಿಕ್ ಗೌಡ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದು, ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದ.
ಆನೆ ದಾಳಿ ಮಾಡಿದ್ದು ಹೇಗೆ?
ಬೈರಾಪುರದಲ್ಲಿ ಆನೆ ಓಡಿಸುವಾಗ ಆನೆ ದಾಳಿಗೆ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎಂಬ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಳು, ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎಂಬುವರು ಸಾವನ್ನಪ್ಪಿದ್ದರು. ಇದೀಗ ಆನೆ ನಿಗ್ರಹ ಪಡೆಯ ಸದಸ್ಯನೇ ಆನೆ ದಾಳಿಗೆ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳಿಯರ ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲೂ ಆನೆ ಕಾಟ!
ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಗಡಿ ಭಾಗದ ಹಣಗೆರೆಕಟ್ಟೆ ಭಾಗದಲ್ಲಿ ಆನೆಗಳ ಹಾವಳಿಯಿಂದ ರೈತರ ಬೆಳೆ ಹಾನಿಯಾಗುತ್ತಿದ್ದು, ಆನೆಗಳನ್ನ ಓಡಿಸಲು ಕಾರ್ಯಾಚರಣೆ ಆರಂಭವಾಗಿದೆ. ಆದರೆ ಇಲ್ಲಿಗೆ ಇನ್ನು ತಂಡ ಬಂದಿಲ್ಲ.
ಇತ್ತ ಭದ್ರಾವತಿ ತಾಲೂಕಿನ ಉಂಬ್ಳೆಬೈಲಿನಲ್ಲಿ ಆನೆಗಳ ಹಾವಳಿ ಕೂಡ ಹೆಚ್ಚಾಗಿದೆ. ತಾಲೂಕಿನ ಮಂಜರಿಕೊಪ್ಪ, ಮಲೆಶಂಕರ, ಸಂಪಿಗೆಹಳ್ಳ, ತಮ್ಮಡಿಹಳ್ಳಿ,ಕೂಡಿ, ಎರೆಬೀಸು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಉಂಟಾಗಿದ್ದು, ಇತ್ತೀಚೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಸಹ ಭೇಟಿ ನೀಡಿ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಸ್ಥಳದಿಂದಲೇ ಕರೆ ಮಾಡಿ ಕ್ರಮಕ್ಜೆ ಸೂಚಿಸಿದ್ದರು. ಈ ಬೆನ್ನಲ್ಲೇ ಸಕ್ರೆಬೈಲಿನ ಆನೆಬಿಡಾರದಿಂದ ಆನೆ, ಮಾವುತ ಮತ್ತುಕಾವಾಡಿಗಳನ್ನ ಕಳುಹಿಸಲಾಗಿದೆ.