ಭಾರತದಲ್ಲಿ ವಿಶ್ವದ ಮೊದಲ 3ಡಿ ಮುದ್ರಿತ ದೇಗುಲ!
– ತೆಲಂಗಾಣದಲ್ಲಿದೆ ನ.24ರಿಂದ ದರುಶನಕ್ಕೆ ಮುಕ್ತ
– ಮಾನವನ ಭಕ್ತಿಗೆ ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿ
NAMMUR EXPRESS NEWS
ತೆಲಂಗಾಣದಲ್ಲಿ ತಲೆಯೆತ್ತಿರುವ ವಿಶ್ವದ ಮೊದಲ 3ಡಿ ಮುದ್ರಿತ ದೇವಾಲಯ ಉದ್ಘಾಟನೆಗೊಂಡಿದೆ. ವಾಸ್ತುಶಿಲ್ಪದ ಸೌಂದರ್ಯ ಮತ್ತು ತಾಂತ್ರಿಕ ಜ್ಞಾನದೊಂದಿಗೆ ಅಸಾಧಾರಣ ರೀತಿಯಲ್ಲಿ ನಿರ್ಮಿಸಲಾದ ಆಧ್ಯಾತ್ಮಿಕ ಅದ್ಭುತವೇ ಸಿದ್ದಿಪೇಟೆಯಲ್ಲಿನ ಶ್ರೀಪಾದ ಕಾರ್ಯ ಸಿದ್ದೇಶ್ವರ ಸ್ವಾಮಿ ದೇವಸ್ಥಾನ. ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಸಹಯೋಗದಲ್ಲಿ ಅಪ್ಪುಜಾ ಇನ್ಸಾಟೆಕ್ ಅವರಿಂದ ಈ ವಿನೂತನ ದೇವಾಲಯವನ್ನು ನಿರ್ಮಿಸಲಾಗಿದ್ದು, ಸಿದ್ದಿಪೇಟೆಯ ಹೃದಯಭಾಗದಲ್ಲಿರುವ ಬೂರುಗಪಲ್ಲಿ ಮತ್ತು ವಾಯಪುರಿ ಎಂದು ಕರೆಯಲ್ಪಡುವ ಈ ದೇವಾಲಯವು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ.
ಈ ಭವ್ಯವಾದ ರಚನೆಯು 35.5 ಅಡಿ ಎತ್ತರ ಮತ್ತು 4,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಮಾನವನ ಭಕ್ತಿಗೆ ಒಂದು ವಿಸ್ಮಯ-ಸ್ಫೂರ್ತಿದಾಯಕ ಸಾಕ್ಷಿಯಾಗಿದೆ. ಪ್ರತಿಷ್ಠಾಪನೆ ಪೂರ್ಣಗೊಂಡ ನಂತರ ನವೆಂಬರ್ 24 ರಿಂದ ಮೂರ್ತಿಗಳು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ಸಂಪೂರ್ಣ 3 ಡಿ ಪ್ರಿಂಟಿಂಗ್ ಅಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ.