ಕುಂಟುವಳ್ಳಿ ವಿಶ್ವನಾಥ್ ಅವರಿಗೆ ರಾಜ್ಯ ಮಟ್ಟದಲ್ಲಿ ಗೌರವ!
– ರಾಜಧಾನಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ
– ತೀರ್ಥಹಳ್ಳಿ ಸಾಧಕನಿಗೆ ಒಲಿದ ಗೌರವ
– ನ.29ಕ್ಕೆ ತೀರ್ಥಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಸನ್ಮಾನ
NAMMUR EXPRESS NEWS
ಶಿವಮೊಗ್ಗ: ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ಶ್ರೀ ಕುಂಟವಳ್ಳಿ ವಿಶ್ವನಾಥ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಬೆಂಗಳೂರಿನ ಟೌನ್ ಹಾಲ್ ಅಲ್ಲಿ ಸೋಮವಾರ ಕಾರ್ಯಕ್ರಮ ನಡೆಯಲಿದೆ. ಕೃಷಿ ಉಪಕರಣ ಉತ್ಪಾದನೆ ಮೂಲಕ ಕೃಷಿಕರ ಬೆನ್ನೆಲುಬಾಗಿರುವ ಇವರ ಗುರುತಿಸಿ ಸಾಧನೆ ಸನ್ಮಾನ ಮಾಡಲಾಗುತ್ತಿದೆ.
ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟುವಳ್ಳಿಯ ಪ್ರಗತಿಪರ ಕೃಷಿಕ ಕುಂಟುವಳ್ಳಿ ದತ್ತಾತ್ರಿ ಮತ್ತು ಸರಸ್ವತಿ ದಂಪತಿಗಳ ಪುತ್ರನಾದ ಕುಂಟವಳ್ಳಿ ವಿಶ್ವನಾಥ್ ರವರು ಡಿಪ್ಲೋಮೋ ಇಂಜಿನಿಯರಿಂಗ್ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸ್ವಸ್ಥಳದಲ್ಲಿ ವಿದ್ಯಾಭ್ಯಾಸ ಪೂರೈಸಿ ತಧನಂತರ ತಮ್ಮೂರಿನಲ್ಲೇ ವಿಟೆಕ್ ಇಂಜಿನಿಯರ್ಸ್ ಎಂಬ ಸಂಸ್ಥೆ ಮತ್ತು ಕೈಗಾರಿಕೆಯನ್ನು ಸ್ಥಾಪಿಸಿ ಸುಮಾರು 200 ಜನರಿಗೆ ತಮ್ಮ ಕಾರ್ಖಾನೆಯಲ್ಲಿ ಕೆಲಸ ಒದಗಿಸಿದ್ದಾರೆ. ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ತಯಾರಿಕೆಗೆ ಬಂಡವಾಳ ಹಾಕಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭಿಸಿ ಕೈಯಿಂದ ಅಡಿಕೆ ಸುಲಿಯುವ ಅತಿಯಾದ ಸಂಕಷ್ಟದಿಂದ ರೈತರಿಗೆ ಸಹಾಯಕವಾಗುವುದರ ಜೊತೆ ಜೊತೆಗೆ ವಿದೇಶಕ್ಕೂ ಈ ಯಂತ್ರಗಳನ್ನು ರಫ್ತು ಮಾಡಿದ ಸಾಹಸಿಗರಾಗಿದ್ದಾರೆ.
ರೈತರಿಗೆ ಅವಶ್ಯಕವಾದ ವಾಣಿಜ್ಯ ಉಪಕರಣಗಳ ಉತ್ಪಾದನೆ ಆರಂಭ ಮಾಡಿದವರ ಸಾಲಿನಲ್ಲಿ ವಿಶ್ವನಾಥ್ ಒಬ್ಬರು. ಡಂಪರ್ ಎಸ್ಕವೇಟರ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ 2014ರಲ್ಲಿ ವಿ ಟೆಕ್ ಫುಡ್ ಮತ್ತು ಬೆವರೇಜಸ್ ಇಬ್ಬನಿ ಫುಡ್ ಇಂಡಸ್ಟ್ರೀಸ್ ಆಹಾರೋದ್ಯಮ, ಇಬ್ಬನಿ ಎಂಬ ಹೆಸರಿನಲ್ಲಿ ಪ್ಯಾಕೇಜ್ ಕುಡಿಯುವ ನೀರು, ಮಾಲಿನ್ಯ ಮುಕ್ತ ಕೈಚೀಲ ಡಿಜಿಟಲ್ ಕ್ಯಾಮೆರಾ ಅಳವಡಿಸಿದ್ದ ಅಡಿಕೆ ಮರವೆರುವ ಯಂತ್ರ ಅಭಿವೃದ್ಧಿಪಡಿಸಿರುತ್ತಾರೆ. ಕರೋನ ಸಂಕಷ್ಟ ಕಾಲದಲ್ಲಿ ಕುಂಬಳ ಬೆಳೆಗಾರರ ಸಂಕಷ್ಟಕ್ಕೆ ಆಪದ್ಬಾಂಧವನಂತೆ ನೆರವಿಗೆ ಧಾವಿಸಿದ್ದ ಇದೇ ವಿಶ್ವನಾಥ್ ಕುಂಬಳಕಾಯಿಯಿಂದ ಆರಗ ಪೇಟ ಎಂಬ ಸಿಹಿ ತಿಂಡಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಇದಕ್ಕೂ ಉತ್ತಮ ಬೇಡಿಕೆ ಲಭ್ಯವಾಗುವಂತೆ ಮಾಡಿರುತ್ತಾರೆ. ಇವರ ಈ ಪ್ರಯತ್ನಕ್ಕಾಗಿ ಯುವ ಬ್ರಿಗೇಡ್ ಫಿಫ್ತ್ ಪಿಲ್ಲರ್ ವತಿಯಿಂದ ಕರೋನ ಇನ್ನೋವೇಶನ್ ಅವಾರ್ಡ್ ಮತ್ತು ಹಲವು ಸಂಘ ಸಂಸ್ಥೆಯವರು ಸಾಧಕರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ತೀರ್ಥಹಳ್ಳಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಸನ್ಮಾನ
ನ.29ರಂದು ತೀರ್ಥಹಳ್ಳಿಯಲ್ಲಿ ನಡೆಯಲಿರುವ ತೀರ್ಥಹಳ್ಳಿ ತಾಲೂಕು 10ನೇ ಸಾಹಿತ್ಯ ಸಮ್ಮೇಳನದಲ್ಲೂ ಯುವ ಉದ್ಯಮಿ ವಿಶ್ವನಾಥ್ ಅವರಿಗೆ ಸನ್ಮಾನ ನಡೆಯಲಿದೆ.