- ಎಲ್ಲೆಲ್ಲೂ ನೀರು: ಐಟಿ ಸಿಟಿಗೆ ಕಂಟಕ
- ಪ್ಲಾನ್ ಇಲ್ಲದ ಸಿಟಿ ಎಷ್ಟು ಸೇಫ್..?
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಎಲ್ಲರೂ ಸೇಫ್ ಅಂತಾರೆ..ಆದರೆ ಸ್ಮಾರ್ಟ್ ಸಿಟಿ ಬೆಂಗಳೂರು ಒಂದು ಕಡೆ ಕರೋನಾ ಇನ್ನೊಂದು ಕಡೆ ಮಳೆಯಿಂದ ನಲಗುತ್ತಿದೆ. ಬೆಂಗಳೂರು ಹೆಸರು ಕೂಡ ನೀರಿನಲ್ಲಿ ಕೊಚ್ಚಿ ಹೋಗುತತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಂತೆ ಬೆಂಗಳೂರಲ್ಲೂ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ತೀವ್ರ ಮಟ್ಟದಲ್ಲಿ ಹಾನಿಯಾಗಿದೆ. ಎಲ್ಲಾ ಕಡೆ ನರಕದರ್ಶನವಾಗುತ್ತಿದೆ. ಗಲೀಜು, ಕೊಳೆ ಕಾಣುತ್ತಿದೆ.
ಮಳೆಗಾಲದಲ್ಲಿ ತೀವ್ರ ಮಳೆಗೆ, ಪ್ರವಾಹ ಉಂಟಾದರೆ ಏನು ಮಾಡಬೇಕು, ಯಾವ ರೀತಿ ಸಜ್ಜಾಗಬೇಕು ಎಂದು ಅಧಿಕಾರಿಗಳು, ಸರ್ಕಾರ ಯೋಚಿಸಿ ಅದರಂತೆ ನಡೆದುಕೊಂಡರೆ ನಿಜವಾದ ಸ್ಮಾರ್ಟ್ ಸಿಟಿಯಾಗುತ್ತದೆ. ಆದರೆ ಎಲ್ಲಾ ಕಡೆ ಕಟ್ಟಡ, ರಾಜಕಾಲುವೆ ಒತ್ತುವರಿ ಇದೀಗ ನಗರವನ್ನೇ ನುಂಗುವ ಹಂತಕ್ಕೆ ತಂದು ನಿಲ್ಲಿಸಿದೆ.
ಬಟ್ಟೆಬರೆ, ಆಹಾರ ಪದಾರ್ಥಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.ನಮ್ಮಲ್ಲೀಗ ಏನೂ ಉಳಿದಿಲ್ಲ, ಸರ್ಕಾರ ಏನು ಮಾಡುತ್ತದೆ, ಅಕ್ರಮ ಲೇ ಔಟ್ಗಳು ಕಟ್ಟುವಾಗಲೇ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮತ್ತೆ ಮಳೆ?: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಮಹತ್ವದ ಸಭೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ ಉನ್ನತಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಮಳೆಯಿಂದ ತೀವ್ರ ಬಾಧಿತವಾಗಿರುವ ಹೊಸಕೆರೆಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಅವರು,ಕಂದಾಯ ಸಚಿವ ಆರ್. ಅಶೋಕ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರ ಜತೆ ಭೇಟಿ ನೀಡಿ, ಪರಿಶೀಲಿಸಿದರು.
ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಕ್ಷಣ ತಲಾ 25 ಸಾವಿರ ರೂ.ಚೆಕ್ ವಿತರಣೆ ಮಾಡಲಾಗುವುದು. ಶೀಘ್ರದಲ್ಲೇ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುವುದು. ಸಮೀಕ್ಷೆ ನಡೆಸಿ ಪರಿಹಾರವನ್ನು ಹಸ್ತಾಂತರಿಸುವಾಗ ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕು. ಯಾವುದೇ ಹಣದ ದುರುಪಯೋಗ ಇರಬಾರದು. ನನಗೆ ನೀಡಿದ ಮಾಹಿತಿಯ ಪ್ರಕಾರ, ಸುಮಾರು 650-800 ಮನೆಗಳಿಗೆ ಪ್ರವಾಹದ ನೀರು ಹರಿಯುತ್ತಿರುವುದನ್ನು ಕಂಡು ಬಂದಿದೆ ಎಂದು ಸಿಎಂ ಹೇಳಿದರು.