ಮಲೆನಾಡು ಮಿತ್ರ ವೃಂದಕ್ಕೆ ಪ್ರದೀಪ್ ಹೆಗ್ಗೋಡು ಸಾರಥಿ!
– ಬೆಂಗಳೂರಿನ ಮಲೆನಾಡು ಸಂಘಟನೆಯ ಸಂಸ್ಥೆ
– ಮಲೆನಾಡಿಗರ ದನಿಯಾಗಿ, ಸಾಂಸ್ಕೃತಿಕ, ಕ್ರೀಡಾ ಕೆಲಸ
– ಜ.14ಕ್ಕೆ ಮಲೆನಾಡಿಗರ ಕ್ರೀಡಾಕೂಟ: ಸರ್ವರಿಗೂ ಸ್ವಾಗತ
NAMMUR EXPRESS NEWS
ಬೆಂಗಳೂರು: ಮಲೆನಾಡಿಗರ ದನಿಯಾಗಿ, ಸಾಹಿತ್ಯ, ಸಾಂಸ್ಕೃತಿಕ , ಸಂಘಟನೆ, ಕ್ರೀಡೆ ಹೀಗೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಲೆನಾಡಿಗರ ಸಂಘಟನೆ ಮಲೆನಾಡು ಮಿತ್ರವೃಂದದ ನೂತನ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಸಮಾಜಪರ ಚಿಂತನೆಯುಳ್ಳ ಪ್ರದೀಪ್ ಹೆಗ್ಗೋಡು ಆಯ್ಕೆಯಾಗಿದ್ದಾರೆ. ಮಲೆನಾಡಿನ ಜನರ ಪರವಾಗಿ ಬೆಂಗಳೂರಿನಲ್ಲಿ ಮಲೆನಾಡು ಮಿತ್ರ ವೃಂದ ಕೆಲಸ ಮಾಡುತ್ತಿದೆ. ಈ ಹಿಂದೆ ಅನೇಕರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಪ್ರದೀಪ್ ಹೆಗ್ಗೋಡು ಅಧ್ಯಕ್ಷರಾಗಿದ್ದಾರೆ.
ಉದ್ಯಮಿಯ ಸಾಮಾಜಿಕ ಹೆಜ್ಜೆ…!
ಪ್ರದೀಪ್ ಹೆಗ್ಗೋಡು ಕೊಡಚಾದ್ರಿ ಚಿಟ್ಸ್ ಸಂಸ್ಥೆ ಮಾಲೀಕರಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೊಸ ಛಾಪು ಮೂಡಿಸಿದ್ದಾರೆ. ಕೊಡಚಾದ್ರಿ ಚಿಟ್ಸ್, ಆಸರೆ ಹೋಟೆಲ್ ಸೇರಿ ಅನೇಕ ಉದ್ಯಮ ಸಂಸ್ಥೆಗಳನ್ನು ತೆರೆದು ಸಾವಿರಾರು ಮಂದಿಗೆ ಬದುಕು ನೀಡಿದ್ದಾರೆ. ರಾಜ್ಯದೆಲ್ಲೆಡೆ ತಮ್ಮ ಚಿಟ್ಸ್ ಸಂಸ್ಥೆಯ ಮೂಲಕ ಸಾವಿರಾರು ಮಂದಿಗೆ ಕೆಲಸವನ್ನು ನೀಡಿದ್ದಾರೆ. ತೀರ್ಥಹಳ್ಳಿಯ ಹೆಮ್ಮೆಯ ಉದ್ಯಮಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ಸಂಘಟನೆಗೆ ಮತ್ತಷ್ಟು ಬಲ ಬಂದಿದೆ.
ನೂತನ ತಂಡಕ್ಕೆ ಯುವ ಸಂಘಟಕರು
ಬೆಂಗಳೂರಿನ ಮಲೆನಾಡ ಸಂಘಟನೆ ಮಲೆನಾಡು ಮಿತ್ರವೃಂದದ ಅಧ್ಯಕ್ಷರಾಗಿ ಪ್ರದೀಪ್ ಹೆಗ್ಗೋಡು, ಉಪಾಧ್ಯಕ್ಷರಾಗಿ ಹರೀಶ್ ಹಿಂಬರವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಂದೇಶ್ ಹಂದಿಗೋಡು, ಖಜಾಂಚಿಯಾಗಿ ಸುಧಾಕರ್ ಯಡದಾಳು,
ಸಹ ಕಾರ್ಯದರ್ಶಿಯಾಗಿ ಕೃಷ್ಣ ಮೂರ್ತಿ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಸ್ಲೆ ಹಾಗೂ ದಿನೇಶ್ ಹೊಸನಗರ ಆಯ್ಕೆಯಾಗಿದ್ದಾರೆ. ಈ ಎಲ್ಲರೂ ದಶಕಗಳಿಂದ ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಲೆನಾಡಿನ ಮೂಲದ ಉದ್ಯಮಿಗಳು, ಸಂಘಟಕರು ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಅವರು ಕೂಡ ಮಲೆನಾಡಿನ ಜನರ ದನಿಯಾಗಿ ರಾಜಧಾನಿಯಲ್ಲಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸಮಸ್ತ ಮಲೆನಾಡಿಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಜ.14ಕ್ಕೆ ಮಲೆನಾಡು ಮಿತ್ರ ವೃಂದದ ಕ್ರೀಡಾಕೂಟ
ಜನವರಿ 14,2024 ಭಾನುವಾರದಂದು ಪ್ರತಿ ವರ್ಷದಂತೆ ಬೆಂಗಳೂರಿನ ಹೆಚ್ಎಂಟಿ ಆಟದ ಮೈದಾನದಲ್ಲಿ ಮಲೆನಾಡಿಗರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಮಲೆನಾಡಿಗರು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ನೀವು ಬನ್ನಿ ಸ್ನೇಹಿತರನ್ನು ಕರೆತನ್ನಿ. 2024ರ ಕ್ಯಾಲೆಂಡರ್ ಅನ್ನು ವಿತರಿಸಲಾಗುವುದು ಎಂದು ನೂತನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.