ಹಂಚಿನ ಮನೆಗೆ ಡಿಕ್ಕಿ ಹೊಡೆದ ಕಾರು!
– ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಘಟನೆ
– ಮೂಡಿಗೆರೆ: ಅಪಘಾತದಲ್ಲಿ ಯುವಕ ಸಾವು
ಎನ್.ಆರ್.ಪುರ: ಅಪಘಾತ: ಇಬ್ಬರು ಆಸ್ಪತ್ರೆಗೆ ದಾಖಲು
– ಭದ್ರಾವತಿ: ರೈಲಿಗೆ ಸಿಲುಕಿ ವ್ಯಕ್ತಿ ಸಾವು
– ಹೊಸನಗರ: ಆನಂದಪುರ ಸುತ್ತಮುತ್ತ ಆನೆ ಹಾವಳಿ!
NAMMUR EXPRESS NEWS
ತೀರ್ಥಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಗೆ ಡಿಕ್ಕಿ ಘಟನೆ ಪಟ್ಟಣದ ಭಾರತೀಪುರ ತಿರುವಿನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಇಬ್ಬರು ಇಂಜಿನಿಯರ್ ಗಳು ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರತೀಪುರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಕ್ಷ್ಮಣ ಭಟ್ ಎಂಬುವರ ಮನೆಯ ಮುಂಭಾಗದ ಹಂಚಿಗೆ ಡಿಕ್ಕಿ ಹೊಡೆದು ಮನೆಯ ಅಂಗಳದಲ್ಲಿ ಮಹೇಂದ್ರ ನೆಕ್ಸ 300 ಕಾರು ಪಲ್ಟಿ ಹೊಡೆದಿದೆ. ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಈ ಘಟನೆ ಜರುಗಿದ್ದು ನಿದ್ರೆ ಮಂಪರಿನಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮನೆಗೂ ಹಾನಿಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಮೂಡಿಗೆರೆ: ಅಪಘಾತದಲ್ಲಿ ಯುವಕ ಸಾವು!
ಮೂಡಿಗೆರೆ: ಮಾರುತಿ 800 ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಮೃತಪಟ್ಟಿದ್ದಾನೆ. ಮೂಡಿಗೆರೆ ತಾಲೂಕು ಮುತ್ತಿಗೆಪುರ ಎಂಬಲ್ಲಿ ಗುರುವಾರ ನಡೆದ ಅಪಘಾತದಲ್ಲಿ ಬೇಲೂರು ತಾಲೂಕಿನ ಚೀಕನಹಳ್ಳಿ ಕೀರ್ತಿ (21) ಎಂಬ ಯುವಕ ಗಂಭೀರಗೊಂಡಿದ್ದ, ಈತ ಮೂಡಿಗೆರೆ ಸಮೀಪದ ಚಿಕ್ಕಳ್ಳ ಎಂಬಲ್ಲಿ ಕಾಫಿ ಎಸ್ಟೇಟ್ ಒಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಮನೆಯಿಂದ ಚಿಕ್ಕಳ್ಳದ ತೋಟಕ್ಕೆ ಮಾರುತಿ 800 ಕಾರಿನಲ್ಲಿ ತೆರಳುತ್ತಿದ್ದಾಗ ಮೂಡಿಗೆರೆ ಸಮೀಪದ ಮುತ್ತಿಗೆಪುರದಲ್ಲಿ ಎದುರಿನಿಂದ ಬಂದ ಟ್ರ್ಯಾಕ್ಟರ್ ಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು. ಈಗ ಚಿಕಿತ್ಸೆ ಫಲ ನೀಡದೆ ಸಾವು ಕಂಡಿದ್ದಾನೆ.
ನರಸಿಂಹರಾಜಪುರ: ಇಬ್ಬರು ಆಸ್ಪತ್ರೆಗೆ ದಾಖಲು
ನರಸಿಂಹರಾಜಪುರ : ನರಸಿಂಹರಾಜಪುರ ತಾಲೂಕಿನ ಗುಡ್ಡೇಹಳ್ಳ ಸಮೀಪದ ಚಿಟ್ಟೆ ಕೊಡಿಗೆಯಲ್ಲಿ ಅಪಘಾತ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಇದ್ದವರಿಗೆ ಗಂಭೀರ ಗಾಯ ಕಾರಿನಲ್ಲಿದ್ದ ಇಬ್ಬರು ಆಸ್ಪತ್ರೆಗೆ ದಾಖಲು ಕೈಕಾಲುಗಳಿಗೆ ಗಂಭೀರ ಗಾಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹರಾಜಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆನಂದಪುರದ ಬಳಿ ಕಾಡಾನೆ ಹಾವಳಿ!
ಸಾಗರ : ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಹಾಗೂ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಬೈರಾಪುರ ಹಾಗೂ ಕೆರೆಗದ್ದೆ ಗ್ರಾಮಗಳಲ್ಲಿರುವ ತೋಟಗಳ ಮೇಲೆ ಮಧ್ಯರಾತ್ರಿ ಸಮಯದಲ್ಲಿ ಕಾಡಾನೆಗಳು ಬಂದು ಬಾಳೆ ತೆಂಗು ಅಡಿಕೆ ಮರಗಳನ್ನು ಮುರಿದು ಹಾಕುತ್ತಿವೆ. ಬೈರಾಪುರ ಗ್ರಾಮದ ಜಗನ್ನಾಥ, ಅಣ್ಣಪ್ಪ, ದೇವೇಂದ್ರಪ್ಪ ರವರ ತೋಟದ ಮೇಲೆ ಆನೆಗಳು ದಾಳಿ ನಡೆಸಿದ್ದು ಬೆಳೆ ನಷ್ಟವಾಗಿದೆ. ಆನಂದಪುರ ಸುತ್ತಮುತ್ತದ ಗ್ರಾಮಗಳಲ್ಲಿ ಇದೀಗ ಕಾಡಾನೆಗಳ ಹಾವಳಿ ಹೆಚ್ಚಾಗಿದೆ
ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು
ಭದ್ರಾವತಿ: ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಪುರುಷ ರೈಲಿಗೆ ಸಿಕ್ಕು ಮೃತಪಟ್ಟಿರುತ್ತಾರೆ. ಈತನ ಚಹರೆ ಸುಮಾರು 5.5 ಅಡಿ ಎತ್ತರ, ಸಾಧಾಕಪ್ಪು ಮೈ ಬಣ್ಣ, ತಲೆಯಲ್ಲಿ 2 ಇಂಚು ಕಪ್ಪು ಕೂದಲು ಬಿಟ್ಟಿದ್ದು, ಅರ್ಧ ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಗಡ್ಡ, ಮೀಸೆ ಇರುತ್ತದೆ. ಒಂದು ಕೆಂಪು ಬಣ್ಣದ ಕಪ್ಪು ಚುಕ್ಕೆಯುಳ್ಳ ಸ್ಟೇಟರ್, ಒಂದು ಬಿಳಿ ಬಣ್ಣದ ಕಪ್ಪು ಗೆರೆಯುಳ್ಳ ಉದ್ದ ತೋಳಿನ ಶರ್ಟ್, ಸಿಮೆಂಟ್ ಕಲರ್ ಪ್ಯಾಂಟ್, ಒಂದು ಬಣ್ಣದ ಉಡುದಾರ, ಕಪ್ಪು ಬಣ್ಣದ ಚಪ್ಪಲಿಗಳು ಮತ್ತು ಕೆಂಪು, ಬಿಳಿ ಬಣ್ಣದ ಟವೆಲ್ ಧರಿಸಿರುತ್ತಾರೆ. ಮೃತನ ದೇಹವು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿರುತ್ತದೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ..08182-222974, 9480802124 ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.