- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ನಿಯ ಕಂಪನಿ
- ಹುಬ್ಬಳ್ಳಿಯಲ್ಲಿ ನಡೆದ ಘಟನೆ: ಕಾರ್ಮಿಕರು ಪಾರು!
ನಮ್ಮೂರ್ ಎಕ್ಸ್ಪ್ರೆಸ್ ನ್ಯೂಸ್ ನೆಟ್ವರ್ಕ್
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪತ್ನಿ ಸೇರಿದಂತೆ ನಾಲ್ವರು ಪಾಲುದಾರಿಕೆಯ ಹುಬ್ಬಳ್ಳಿಯ ವಿಭವ ಇಂಡಸ್ಟ್ರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸುಮಾರು 3 ಕೋಟಿ ರೂ. ಹೆಚ್ಚು ಮೌಲ್ಯದ ನಷ್ಟ ಉಂಟಾಗಿದೆ.
ಹುಬ್ಬಳ್ಳಿ ತಾಲೂಕಿನ ಶೆರೆವಾಡ ಗ್ರಾಮದಲ್ಲಿರುವ ವಿಭವ ಇಂಡಸ್ಟ್ರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ.
ಕೇಂದ್ರದ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ಸಹೋದರ ನಂದಕುಮಾರ್, ಅಚುತ್ ಲಿಮ್ಹೆ, ಉದಯ ಬಾಡಕ ಸೇರಿದಂತೆ ಕೇಂದ್ರ ಸಚಿವ ಜೋಶಿಯವರ ಪತ್ನಿ ಜ್ಯೋತಿ ಜೋಶಿಯವರು ಈ ಸಂಸ್ಥೆಯ ಪಾಲುದಾರರಾಗಿದ್ದಾರೆ. ಅಂದಾಜು 10 ಸಾವಿರ ಚದರ ಅಡಿಯಲ್ಲಿ ಹಬ್ಬಿರುವ ಈ ಕಾರ್ಖಾನೆಯ ಗೋದಾಮಿನಲ್ಲೇ ಸಂಭವಿಸಿದ್ದ ಬೆಂಕಿ ಅನಾಹುತದಲ್ಲಿ ಕಚ್ಚಾ ವಸ್ತುಗಳಿಗೆ ಮೊದಲು ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಗಳು ಬೃಹತ್ ಪ್ರಮಾಣದ ಪಸರಿಸಿಕೊಂಡು ಭಾರಿ ಪ್ರಮಾಣದ ನಷ್ಟವನ್ನುಂಟು ಮಾಡಿದೆ.
ಕಸಬರಗಿ, ಫಿನಾಯಲ್ ಸೇರಿದಂತೆ ಮತ್ತಿತರ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಕಾರ್ಖಾನೆಯಲ್ಲಿ ಬೆಂಕಿ ಹತ್ತಿಕೊಂಡ ಸುದ್ದಿ ತಕ್ಷಣವೇ ಗಮನಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಕೆಲವೇ ಹೊತ್ತಿನಲ್ಲಿ ಇಡೀ ಕಾರ್ಖಾನೆಯಲ್ಲಿ ಬೆಂಕಿ ಹಬ್ಬಿಕೊಳ್ಳಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಹಾಗೂ ಪೊಲೀಸ್ ಬೆಂಕಿ ನಂದಿಸಲು 10 ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಡುವಂತಾಯಿತು. ಬೆಂಕಿ ಕೆನ್ನಾಲೆ ಬಹಳ ದೂರದವರೆಗೂ ಹಬ್ಬಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕೇಂದ್ರ ಸಚಿವ ಜೋಶಿ ಭೇಟಿ: ಕಾರ್ಖಾನೆಗೆ ಬೆಂಕಿ ಹತ್ತಿಕೊಂಡ ಸುದ್ದಿ ತಿಳಿದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪೆÇಲೀಸ್ ಹಾಗೂ ಹೆಸ್ಕಾಂನ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ, ಮಾತನಾಡಿದ ಜೋಶಿ, ಈ ಕಾರ್ಖಾನೆಯಲ್ಲಿ 555 ಮಂಕಿ ಪೆÇರಕೆ ಹಾಗೂ ಫೀನಾಯಿಲ್ ಉತ್ಪಾದನೆ ಮಾಡಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಘಟನೆ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ ಎಂದ ಅವರು, ಇಂತಹ ಅವಘಡಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.