ಹೊಸನಗರ ಮಾರಿಕಾಂಬಾ ದೇವಿಅದ್ಧೂರಿ ಜಾತ್ರೆ
– ಫೆಬ್ರವರಿ 6ರಿಂದ ಫೆಬ್ರವರಿ 14ರವರೆಗೆ ಜಾತ್ರೆ
– ವಿಶೇಷ ಪೂಜೆ…ಮನರಂಜನೆಗಳ ಹಬ್ಬ
NAMMUR EXPRESS NEWS
ಹೊಸನಗರ: ಹೊಸನಗರ ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬದೇವಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವವನ್ನು 2024ರ ಫೆಬ್ರವರಿ 6ರಿಂದ ಫೆಬ್ರವರಿ 14ರವರೆಗೆ ಅದ್ಧೂರಿಯಾಗಿ ನಡೆಸಲು ಜಾತ್ರಾಸಮತಿ ನಿರ್ಧರಿಸಿದೆ. ಗ್ರಾಮ ದೇವತೆಯಾದ ಶ್ರೀದೇವಿ ಮಾರಿಕಾಂಬ ಅಮ್ಮನವರಿಗೆ ಫೆಬ್ರವರಿ 6ರಂದು ತವರುಮನೆ ಹಳೆಯ ಸಾಗರ ರಸ್ತೆಯ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ವಿಶೇಷ ಪ್ರತಿಷ್ಠಾಪನಾ ಪೂಜೆ ಹಾಗೂ ಫೆಬ್ರವರಿ 14ರಂದು ರಾತ್ರಿ ಗಂಡನ ಮನೆಯಾದ ಮಾರಿಗುಡ್ಡದ ಈ ಮಾರಿಕಾಂಬ ದೇವಸ್ಥಾನದಲ್ಲಿ ರಾತ್ರಿ 12:00 ಗಂಟೆಗೆ ವಿಶೇಷ ವಿಸರ್ಜನಾ ಪೂಜೆಯ ನಂತರ ಜಾತ್ರೆಯು ಸಂಪನ್ನಗೊಳ್ಳಲಿದೆ. ಈ ಅದ್ಧೂರಿ ಜಾತ್ರೆ ಪ್ರಯುಕ್ತ ಮನರಂಜನೆಗಾಗಿ, ಅಮ್ಯೂಸ್ಮೆಂಟ್ ಅವರಿಂದ ಜಾಯಿಂಟ್ ವೀಲ್ ಕೊಲಂಬಸ್ ಬ್ರೇಕ್ ಡ್ಯಾನ್ಸ್, ಡ್ಯೂಮ್ ಡ್ರ್ಯಾಗನ್ ಟ್ರೈನ್ ಮಕ್ಕಳ ರೈಲು ನೃತ್ಯ ಸಂಗೀತ, ನಾಟಕ, ಆರ್ಕೆಸ್ಟ್ರಾ ಮೊದಲಾದ ವಿಶೇಷ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದಾಗಿ ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.
ಹೊಸನಗರದಲ್ಲಿ ಹೊಸ ವರ್ಷದ ಫೆಬ್ರುವರಿ 6ರ ಮಂಗಳವಾರದಿಂದ ಆರಂಭವಾಗುವ ಪೂಜೆ ಮತ್ತು ಜಾತ್ರೆ, ಫೆಬ್ರವರಿ 14ರ ಬುಧವಾರದವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಶ್ರೀದೇವಿಗೆ ವಿಶೇಷ ಪೂಜೆ ಪುರಸ್ಕಾರ ಸೇವೆಗಳು ನಡೆಯಲಿವೆ. ಜಾತ್ರೆ ಪೂರ್ವಭಾವಿ ಸಮಿತಿಯ ಸಭೆಯು ಡಿ.27ರಂದು ನಡೆದಿದ್ದು ಈ ಮೇಲಿನ ತೀರ್ಮಾನ ಕೈಗೊಂಡಿರುತ್ತಾರೆ. ಈ ಸಭೆಯಲ್ಲಿ ಜಾತ್ರಾ ಸಮಿತಿಯ ಹೆಚ್ ಜಿ ಲಕ್ಷ್ಮಿ, ನಾರಾಯಣ ರಾವ್ ಪಿ, ಮನೋಹರ ಟಿ ಆರ್, ಸುನಿಲ್ ಎಚ್, ಶ್ರೀನಿವಾಸ ಕಾಮತ್ ಎಚ್ಎನ್, ಶ್ರೀಪತಿ ರಾವ್ ಎನ್, ಶ್ರೀಧರ್ ಉಡುಪ ಎನ್, ವಿಜೇಂದ್ರ ಶೇಟ್, ವಾದಿರಾಜ್ ಕೆ ಎಸ್, ಗುರುರಾಜ ಡಿ ಎಂ, ಸದಾಶಿವ ಶೆಟ್ಟಿ ಟಿ ಎನ್, ಪ್ರಕಾಶ್ ಕುಮಾರ ಗೌಡ ಹೆಚ್, ಆರ್ ವಿಜಯಾನಂದ, ನಿತ್ಯಾನಂದ ಎಚ್ ಎಲ್, ದತ್ತಾತ್ರೇಯ ನಾಗರಾಜ, ದತ್ತಾತ್ರೀ ಉಡುಪ ಏವಿ, ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು.