ಹೊಸ ನಗರದ ಲೋಹಿತ್ ನಾಯ್ಕ್ ಅವರಿಗೆ ಮಹತ್ವದ ಹುದ್ದೆ!
– ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ನೇಮಕ
– ಕನ್ನಡ ನಾಡು ನುಡಿಯ ಸೇವೆಗೆ ಸಿದ್ಧವಾದ ಹುಡುಗ
NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ಬುಕ್ಕಿವರೆಯ ಯುವಕ ಲೋಹಿತ್ ನಾಯ್ಕ್ ಅವರು ಕರ್ನಾಟಕ ರಾಜ್ಯ ಯುವ ರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ್ದು, ರಾಜ್ಯ ಅಧ್ಯಕ್ಷರಾದ ಸುನೀಲ್ ಎಂ.ಎಸ್., ರಾಜ್ಯ ಸಹ ಸಂಚಾಲಕರಾದ ಭರತ ಚಿತ್ರದುರ್ಗ ಅಧಿಕಾರ ಹಸ್ತಾಂತರ ಮಾಡಿದರು.
ಯುವ ಸಂಘಟಕನಿಗೆ ಒಲಿದ ಹುದ್ದೆ
ಹೊಸನಗರ ತಾಲೂಕಿನ ಬುಕ್ಕಿವರೆ ಸಮೀಪದ ಲೋಹಿತ್ ನಾಯ್ಕ್ ಅವರು ಹಳ್ಳಿಯಿಂದ ತಮ್ಮ ಸಂಘಟನೆ ಆರಂಭಿಸಿದ್ದು, ಈಗಾಗಲೇ ರಕ್ತದಾನಿಯಾಗಿ ಸೇವೆ ಮಾಡಿದ್ದಾರೆ. ದರ್ಶನ್ ತೂಗುದೀಪ ಅಭಿಮಾನಿ ಬಳಗ ಹೊಸನಗರ ತಾಲೂಕು ಅಧ್ಯಕ್ಷರಾಗಿದ್ದಾರೆ. ಜೊತೆಗೆ ರಾಜಧಾನಿಯಲ್ಲಿ ಕನ್ನಡ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅಕ್ಕಸಾಲಿಗದ್ದೆ ದೋಬೈಲ್ ಗ್ರಾಮದ ತಂದೆ ಸುರೇಶ ನಾಯ್ಕ್, ತಾಯಿ ರೇಣುಕಾ ನಾಯ್ಕ್ ಅವರ ಪುತ್ರ.
ಹೊಸನಗರ ತಾಲೂಕಿನ ಅನೇಕ ಜನಪರ ಹೋರಾಟಗಳಲ್ಲಿ, ಸಾಮಾಜಿಕ ಕೆಲಸಗಳಲ್ಲಿ, ಸಂಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಯುವಕರಿಗೆ ಸ್ಪಂದನೆ ನೀಡಿ ಪ್ರೇರಣೆಯಾಗುತ್ತಿರುವ ಲೋಹಿತ್ ನಾಯ್ಕ್ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟನೆಗಳನ್ನು ಕಟ್ಟುವ ಮತ್ತು ಬಲಪಡಿಸುವ ಜವಾಬ್ದಾರಿ ಮತ್ತು ಇಚ್ಛೆಯನ್ನು ಹೊಂದಿದ್ದಾರೆ. ನೂತನವಾಗಿ ಆಯ್ಕೆಯಾದ ಇವರಿಗೆ ಸ್ನೇಹಿತರು ಮತ್ತು ಬಂಧುಗಳು ಶುಭಾಶಯಗಳನ್ನು ಕೋರಿದ್ದಾರೆ