ಜಿಲ್ಲಾ ಅಡಿಕೆ ವರ್ತಕರ ಸಂಘದ ವಿವಿಧ ಸ್ಥಾನಗಳಿಗೆ ಆಯ್ಕೆ
– ಸಂಘದ ಅಧ್ಯಕ್ಷರಾಗಿ ಮಾದೇಶ್ ಹೆಗ್ಡೆ ಆಯ್ಕೆ
– ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಆಯ್ಕೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಕಾರ್ಯಕಾರಿ ಮಂಡಳಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮಾದೇಶ್ ಹೆಗ್ಡೆ ಎನ್.ಎ ಹಾಗೂ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ, ಸಹಕಾರ್ಯದರ್ಶಿ- ಅನೂಪ ಪ್ರಸಾದ್, ಖಜಾಂಚಿ- ವಿಜಯ್ ಕುಮಾರ್, ನಿರ್ದೇಶಕರಾಗಿ ಶಂಕರಪ್ಪ, ಜಯರಾಮ್ ಜಿ ಕಿಮ್ಮನೆ, ಸತೀಶ, ಅನಿಲ್ ಕುಮಾರ್, ಶರತ್, ಸಿದ್ದಾರ್ಥ್ ಪಿ ಶಾಸ್ತಿ ಆಯ್ಕೆಯಾಗಿದ್ದಾರೆ. ಈ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದ್ದು ಮುಂಬರುವ ವರ್ಷಗಳಲ್ಲಿ ಇವರು ಕಾರ್ಯ ನಿರ್ವಹಿಸಲಿದ್ದಾರೆ.