ಸುಧೀರ್ ಕುಮಾರ್ ಮುರೊಳ್ಳಿಗೆ ಟಿಕೆಟ್!?
– ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರಾ ವಾಗ್ಮಿ, ನ್ಯಾಯವಾದಿ?
– ಕಾಂಗ್ರೆಸ್ ಪಕ್ಷದಲ್ಲಿ ಮತ್ಯಾರ ಹೆಸರು ಚಾಲ್ತಿಯಲ್ಲಿ?
– ಬಿಜೆಪಿಯಲ್ಲಿ ಪ್ರಮೋದ್, ಸಿಟಿ ರವಿ, ಶೋಭಾ, ಜೀವರಾಜ್?
NAMMUR EXPRESS NEWS:
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ವಾಗ್ಮಿ, ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಪ್ರಮುಖ ವಿಶ್ಲೇಷಕರಲ್ಲಿ ಒಬ್ಬರಾದ ಕೊಪ್ಪದ ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ರಾಜ್ಯ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ಡಿ ಕೆ ಶಿವಕುಮಾರ್ ಹಾಗೂ ಇತರ ನಾಯಕರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ವೃತ್ತಿಯಲ್ಲಿ ವಕೀಲರಾಗಿರುವ ಸುಧೀರ್ ಕುಮಾರ್ ಮುರೊಳ್ಳಿ ಸಾಮಾಜಿಕ ಚಿಂತಕರಾಗಿ, ಜನಪರ ಕಾಳಜಿಯ ಹೋರಾಟದಿಂದ ರಾಜ್ಯದಲ್ಲಿ ಚಿರಪರಿಚಿತ. ಕಳೆದ ವಿಧಾನ ಸಭಾ ಚುನಾವಣೆ ಸಂಧರ್ಭ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ, ಪಕ್ಷದ ಪರ ಹಗಳಿರುಳು ದುಡಿದಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವ ಹಿಂದೆ, ಮಲೆನಾಡು, ಕರಾವಳಿ ಹಾಗೂ ರಾಜ್ಯದ ಹಲವು ಭಾಗದಲ್ಲಿ ಸುಧೀರ್ ಕುಮಾರ್ ಮುರೊಳ್ಳಿಯವರ ಪಾಲ್ಗೊಳ್ಳುವಿಕೆ ಮಹತ್ತರವಾದುದು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಜನರ ಹೃದಯ ಗೆದ್ದ ಮಲೆನಾಡು ಹುಡುಗ. ಮಲೆನಾಡು- ಕರಾವಳಿ ಒಕ್ಕೂಟ ಸ್ಥಾಪಿಸಿ, ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಬದುಕು, ಭಾವನೆ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಯುವ ನಾಯಕ. ಇನ್ನು ಎಲ್ಲಾ ವಯೋಮಾನದವರ ಪ್ರೀತಿ ಪಡೆದ ನಾಯಕ.
ಸಾಮಾಜಿಕ ಅಸಮತೋಲನ, ಸರಿ ಸಮಾಜದ ಪರಿಕಲ್ಪನೆಯ ಮನಸ್ಥಿತಿ ಹೊಂದಿರುವುದರಿಂದ ಬಿಜೆಪಿ ಹಾಗೂ ಅರ್ ಎಸ್ ಎಸ್ ಕಾರ್ಯಕರ್ತರಲ್ಲೂ ಕೂಡ ಸುಧೀರ್ ಕುಮಾರ್ ಮುರೊಳ್ಳಿಯವರನ್ನು ವಿರೊಧಿಸುವವರು ತೀರ ಕಡಿಮೆ.ಈ ಎಲ್ಲಾ ಸಂಗತಿಗಳನ್ನ ಮನಗಂಡಿರುವ ಕಾಂಗ್ರೆಸ್ ಹೈಕಮಾಂಡ್ ಕೂಡ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸುಧೀರ್ ಕುಮಾರ್ ಮುರೊಳ್ಳಿ ಯಂತಹ ಯುವ ನಾಯಕನಿಗೆ ಟಿಕೆಟ್ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ. ಆದರೆ ಇನ್ನು ಅಂತಿಮ ಆಗಿಲ್ಲ.
ಶೃಂಗೇರಿ ಚುನಾವಣೆ ಜತೆಗೆ 2 ಜಿಲ್ಲೆಯ ನಾಯಕರ ಜತೆ ಒಡನಾಟ
ಉಡುಪಿ ಜಿಲ್ಲೆಯಲ್ಲಿ ಅಷ್ಟು ಸ್ಥಾನ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದರೆ ಚಿಕ್ಕಮಗಳೂರಲ್ಲಿ ಅಷ್ಟು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ. ಎರಡು ಜಿಲ್ಲೆಯ ಎರಡು ಪಕ್ಷದ ನಾಯಕರ ಜತೆ ಸಮಾನ ಸ್ನೇಹ ಹೊಂದಿರುವ ಮುರೊಳ್ಳಿ ಉಡುಪಿ ಜಿಲ್ಲೆಯಲ್ಲೂ ಅಪಾರ ಸ್ನೇಹಿತ ವಲಯ ಹೊಂದಿದ್ದಾರೆ.
ಯಾರು ಯಾರು ಆಕಾಂಕ್ಷಿಗಳು?
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಡಾ. ಆರತಿ ಕೃಷ್ಣ ಸಧ್ಯಕ್ಕೆ ಕೇಳಿ ಬರುತ್ತಿರುವ ಹೆಸರುಗಳು.
ಬಿಜೆಪಿಯಲ್ಲಿ ಯಾರು ಮುಂಚೂಣಿ?
ಬಿಜೆಪಿ ಭದ್ರ ಕೋಟೆ ಆಗಿರುವ ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಪ್ರಮೋದ್ ಮದ್ವರಾಜ್, ಸಿಟಿ ರವಿ, ಜಯಪ್ರಕಾಶ್ ಹೆಗ್ಡೆ, ಶೋಭಾ, ಕರಂದ್ಲಾಜೆ, ಜೀವರಾಜ್ ಹೆಸರು ಮುಂಚೂಣಿಯಲ್ಲಿದೆ. ಕೊನೆ ಗಳಿಗೆಯಲ್ಲಿ ಬದಲಾಗಬಹುದು ಕೂಡ.