ಶೃಂಗೇರಿ ಕ್ಷೇತ್ರದ 3 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ!
– ಕೊಪ್ಪ, ಎನ್. ಆರ್. ಪುರ, ಶೃಂಗೇರಿ ತಾಲೂಕಿಗೆ ಆಯ್ಕೆ
– ಬಗೆ ಹರಿಯುತ್ತಾ ತಾಲೂಕಿನ ಜನರ ಸಮಸ್ಯೆ!
NAMMUR EXPRESS NEWS
ಎನ್.ಆರ್ ಪುರ: ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಮೂರು ತಾಲೂಕುಗಳಲ್ಲಿ ತಂಡವನ್ನು ರಚಿಸಿ ಸರ್ಕಾರದ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಮೂರು ತಾಲೂಕುಗಳಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ನರಸಿಂಹರಾಜಪುರ ತಾಲೂಕಿಗೆ ಜಾಯ್
ಅಧ್ಯಕ್ಷ – ಈ.ಸಿ. ಜಾಯ್ ನಾಗಲಾಪುರ, ಸದಸ್ಯರು- ಹೇಮಲತಾ ಬಾಳೆಹೊನ್ನೂರು, ಸತೀಶ್ ಸಂಗಮೇಶ್ವರ ಪೇಟೆ, ಶೇಖ್ ಅಬ್ದುಲ್ಲಾ ಮಾಗುಂಡಿ, ಸದಸ್ಯ ಕಾರ್ಯದರ್ಶಿ ತಹಶೀಲ್ದಾರ್.
ಕೊಪ್ಪ ತಾಲೂಕಿಗೆ ಕೆ.ಜಿ.ಶೋಭಿಂತ್ ಸಾರಥಿ
ಅಧ್ಯಕ್ಷ- ಕೆ.ಜಿ.ಶೋಭಿಂತ್ ಕಾರಗದ್ದೆ, ಸದಸ್ಯರು- ಎನ್.ಕೆ.ಮಂಜುನಾಥ್ ನುಗ್ಗಿ, ಟಿ.ಡಿ.ಆರ್ ಅನ್ನಪೂರ್ಣ ಕಿರುನಾರ್ವೆ, ಕೆ.ಎ.ಶಂಕರಪ್ಪ ಕಾರಬೈಲು. ಸದಸ್ಯ ಕಾರ್ಯದರ್ಶಿ ತಹಶೀಲ್ದಾರ್.
ಶೃಂಗೇರಿ ತಾಲೂಕಿಗೆ ಮಹಾಬಲ ಆಯ್ಕೆ
ಅಧ್ಯಕ್ಷ- ಕೆ.ಸಿ.ಮಹಾಬಲ ಕಕ್ಕರಣೆ, ಸದಸ್ಯರು- ಶಿವಮೂರ್ತಿ ಹೊಳೆಕೊಪ್ಪ, ತ್ರಿವೇಣಿಕೋಡೆಬೈಲು, ರಮೇಶ್ ಹೊಸಕೆರೆ, ಸದಸ್ಯ ಕಾರ್ಯದರ್ಶಿ ತಹಶೀಲ್ದಾರ್ ಅನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.