ಶೃಂಗೇರಿ: ಮಂಗನ ಕಾಯಿಲೆಗೆ ಮೊದಲ ಬಲಿ!
– ಮೂವರಲ್ಲಿ ಸೋಂಕು ಪತ್ತೆ: ಇದೀಗ ವೃದ್ಧ ಸಾವು
– ಕೊಪ್ಪ: ಮರಕ್ಕೆ ಕಟ್ಟಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
NAMMUR EXPRESS NEWS
ಶೃಂಗೇರಿ: ಮಂಗನ ಕಾಯಿಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆಯಲ್ಲಿ ನಡೆದಿದೆ. 79 ವರ್ಷದ ವೃದ್ಧ ಮೃತ ವ್ಯಕ್ತಿ. ಈತನ ತಪಾಸಣೆ ಮಾಡಿದಾಗ ಕೆ.ಎಫ್.ಡಿ ಪತ್ತೆಯಾಗಿದೆ. ಮಣಿಪಾಲ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕೆ.ಎಫ್.ಡಿ ಜೊತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ ಕಾರಣ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಕೊಪ್ಪ, ಶೃಂಗೇರಿ ಸೇರಿ ಮಲೆನಾಡಿನಲ್ಲಿ ಮೂವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ವೃದ್ಧನ ಸಾವಿನಿಂದಾಗಿ ಆತಂಕ ಹೆಚ್ಚಾಗಿದೆ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಣುತ್ತಿದ್ದ ಮಂಗನ ಕಾಯಲೆ ಈ ವರ್ಷ ಪಕ್ಕದ ಜಿಲ್ಲೆಗೂ ವ್ಯಾಪಿಸಿದೆ.
ಮರಕ್ಕೆ ಕಟ್ಟಿ ಹಾಕಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಹಣದ ವಿಚಾರಕ್ಕೆ ಹೊಡೆದಾಟ ನಡೆದು ಓರ್ವನಿಗೆ ಮರಕ್ಕೆ ಕಟ್ಟಿ ಹಾಕಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಕೊಪ್ಪದ ಸೋಮ್ಲಪುರ ರಸ್ತೆಯ ಬಳಿ ಪ್ಲಾಂಟೇಶನ್ ಬಳಿ ವರದಿಯಾಗಿದೆ. ಕಬ್ಬಿಣದ ರಾಡ್ ಮತ್ತು ಕೈಯಿಂದ ಕರ್ಕಶ್ವರದ ಸತೀಶ್ ಎನ್ನುವವರ ಮೇಲೆ6 ಜನರ ತಂಡ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಮಹೇಶ್, ವಿಠಲ್, ಸಿರಿಲ್,ಸುನಿಲ್, ಮಂಜು, ಕಟ್ಟೆಹಕ್ಲು ಸುನಿಲ್ ಅವರ ಮೇಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಸತೀಶ್ ದೂರು ದಾಖಲಿಸಿ ಅವರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.