ನೀರಿನ ಹೊಂಡಕ್ಕೆ ಬಿದ್ದ ಬಾಲಕ ಸಾವು
– ಹುಲಿ ದಾಳಿಗೆ ಐದು ಹಸುಗಳು ಬಲಿ
– ಆನೆಗಳ ಹಾವಳಿಯಿಂದ ಬೆಳೆ ನಾಶ
– ಹೆಣ್ಣಿಗಾಗಿ ದೇವರ ಮೊರೆ ಹೋದ ಯುವಕರು
NAMMUR EXPRESS NEWS
ಬೀರೂರು : ತೋಟದಲ್ಲಿ ತೆಂಗಿನ ಗರಿ ತರಲು ಹೋಗಿದ್ದ ಬಾಲಕನೋರ್ವ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿದ ಘಟನೆ ಮುಂಡ್ರೆಕೊಪ್ಪಲು ಗ್ರಾಮದಲ್ಲಿ ಬುಧವಾರ ನಡೆದಿದೆ. ಎಂ.ಎ. ತರುಣ್(15) ಮೃತ ದುರ್ದೈವಿಯಾಗಿದ್ದು, ಮಧ್ಯಾಹ್ನ ಸಮಯದಲ್ಲಿ ಊರಿನ ಸಮೀಪದ ರವಿ ಎಂಬುವವರ ತೋಟಕ್ಕೆ ತನ್ನ ಅತ್ತೆಯ ಮಗನೊಂದಿಗೆ ತೆಂಗಿನಗರಿ ತರಲು ತೋಟಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ತೋಟದಲ್ಲಿದ್ದ ನೀರಿನ ಗುಂಡಿಯನ್ನು ಗಮನಿಸಿದೆ ಕಾಲುಜಾರಿ ಬಿದ್ದಿದ್ದಾರೆ. ನೀರಿನ ಗುಂಡಿಗೆ ಬಿದ್ದ ರಭಸಕ್ಕೆ ಸ್ಥಳದಲ್ಲೇ ತರುಣ್ ಮೃತಪಟ್ಟಿದ್ದಾನೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಹುಲಿ ದಾಳಿಗೆ ಐದು ಹಸುಗಳು ಬಲಿ
ಚಿಕ್ಕಮಗಳೂರು: ತಾಲೂಕಿನ ಆಲ್ಲೂರು ಸಮೀಪದ ಕಠಾರದಹಳ್ಳಿಯಲ್ಲಿ ಹೀಲಿಯ ದಾಳಿಗೆ 5 ಹಸುಗಳು ಬಲಿಯಾಗಿದ್ದು, 1 ಹಸುವನ್ನು ರಕ್ಷಿಸಲಾಗಿದೆ. ಸಾವನ್ನಪ್ಪಿರುವ ಹಸುಗಳು ಚಂದ್ರು ಮತ್ತು ಮುಳ್ಳಪ್ಪ ಎಂಬುವರಿಗೆ ಸೇರಿದ್ದು ಏನ್ಮಾಲಾಗುದೆ. ನಿನ್ನೆ ಮೇಯಲು ಹೋಗಿದ್ದ ಹಸುಗಳು ಮನೆಗೆ ಬಂದಿರಲಿಲ್ಲ. ಇಂದು ಕಾಫಿ ತೋಟದಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದೆ. ನಿತ್ರಾಣಗೊಂಡಿದ್ದ ಹಸುಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆನೆ ದಾಳಿಯಿಂದ ತತ್ತರಿಸಿದ್ದ ಮಲೆನಾಡಿಗರು ಈಗ ಹುಲಿಗೆ ಹೆದರುವಂತಾಗಿದೆ. ಮನೆಯಿಂದ ಹೊರಬಾರಲು ಜನ, ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
– ಆನೆಗಳ ಹಾವಳಿಯಿಂದ ಬೆಳೆ ನಾಶ
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ತೋಟಗಳಿಗೆ ಆನೆಗಳು ನುಗ್ಗಿ ದಾಂಧಲೆ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡಿವೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ರೈತ ನವೀನ್ ಎಂಬುವವರ ತೋಟಕ್ಕೆ ನುಗ್ಗಿದ ಕಾಡಾನೆಯು ಅಡಿಕೆ, ಬಾಳೆ, ಕಾಫಿ ಬೆಳೆಯನ್ನು ಹಾಳು ಮಾಡಿವೆ. ಕೊಟ್ಟಿಗೆ ಹಾರ ಸುತ್ತಮುತ್ತ ಗ್ರಾಮಗಳಲ್ಲಿ ಆನೆಗಳ ದಾಳಿಯು ಆತಂಕವನ್ನು ಸೃಷ್ಟಿಸಿದೆ. ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ನಷ್ಟದ ಜತೆಗೆ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. 3-4 ತಿಂಗಳಿಂದ ಮೂಡಿಗೆರೆಯಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜನರು ಆಕ್ರೋಶಿಸಿದ್ದಾರೆ.
– ಹೆಣ್ಣಿಗಾಗಿ ದೇವರ ಮೊರೆ ಹೋದ ಯುವಕರು
ಚಿಕ್ಕಮಗಳೂರು: ಜಿಲ್ಲೆ ತಾಲೂಕು ಖಂಡ್ಯ ಹೋಬಳಿ ಬಿದರೆ ಅಂಚೆ ಬ್ಯಾಡಿಗೆರೆ ಗ್ರಾಮದಲಿ ನಡೆದ ಒಂದು ವಿಶೇಷ ಘಟನೆ. ಇದು ಅಚ್ಚರಿಯಾದರೂ ಸತ್ಯ ಸಂಗತಿ. ಇತ್ತೀಚಿಗೆ ಇದೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ 3ದಿನಗಳ ಕಾಲ ಸುಗ್ಗಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು 4ನೇ ದಿನ ಗ್ರಾಮದ ಹಿರಿಯರು ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸೇರಿ ಅನೇಕ ಯುವಕರು ಎಲ್ಲಾರೂ ಸೇರಿ ಗ್ರಾಮದ 101 ಕೋಟಿ ಗಣಗಳ ಹೊಂದಿರುವ ಹಾಗೂ ಕಳಸ ಇರುವ ಗಿರಿ ಹತ್ತಿ ಮಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಗಿರಿಯಿಂದ ಕೆಳಗೆ ಇಳಿಯುವಾಗ ಗುಡುಗಿನ ಸದ್ದು ಮಾಡಿ ಮಳೆಯ ಮನ್ಸೂಚನೆ ನೀಡಿದ್ದು ಗ್ರಾಮಸ್ಥರಿಗೆ ಅಚ್ಚರಿ ಹಾಗೂ ಸಂತಸ ತಂದಿತ್ತು.
ಇದೆ ಸಂದರ್ಭದಲ್ಲಿ ಗ್ರಾಮದ ಅನೇಕ 25ರಿಂದ 38ವರ್ಷದ ಯುವಕರಿಗೆ ಇನ್ನು ಮದುವೆ ಆಗದ್ದನ್ನು ಕಂಡ ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮಧು ಕುಮಾರ್ ಶಾಸ್ತ್ರಿ ಅವರು ಯುವಕರೆಲ್ಲರನ್ನು ಸೇರಿಸಿ ಮದುವೆಯಾಗದ ಯುವಕರ ಪಟ್ಟಿ ಮಾಡಿ ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ್ನವರಿಗೆ ಗ್ರಾಮದ ಎಲ್ಲ ಯುವಕರಿಗೆ ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಯುವಕರು ಹಾಸ್ಯ ಚಟಾಕಿ ಹಾರಿಸಿ ಹುಡುಗಿ ಸಿಗದೇ ಇದ್ದ ಸಂದರ್ಭದಲ್ಲಿ ಮಠಕ್ಕೆ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧು ಕುಮಾರ್ ಶಾಸ್ತ್ರಿಯವರಿಗೆ ತಿಳಿಸಿದ್ದಾರೆ.