ಟಾಪ್ ನ್ಯೂಸ್ ಕರಾವಳಿ
ಸ್ವಿಮ್ಮಿಂಗ್ ಪೂಲಲ್ಲಿ ಮುಳುಗಿ ಬಾಲಕ ದುರ್ಮರಣ!
– ಈದ್ ಸಂಭ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳಿದ್ದಾಗ ಅವಘಡ
– ಮಂಗಳೂರು ಬೆಂಗಳೂರು ಎಸಿ ಕೋಚಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು!
– ಸಹ ಪ್ರಯಾಣಿಕನಿಂದ ಕೃತ್ಯದ ಶಂಕೆ
NAMMUR EXPRESS NEWS
ಶಂಕರನಾರಾಯಣ: ಈದ್ ಉಲ್ ಫಿತರ್ ಹಬ್ಬದ ಸಂಭ್ರಮದ ಹಿನ್ನಲೆ ಖಾಸಗಿ ರೆಸಾರ್ಟ್ ನಲ್ಲಿ ರಿಲಾಕ್ಸ್ ಮಾಡಲು ಕುಟುಂಬವೊಂದು ತೆರಳಿದ್ದ ಸಂದರ್ಭದಲ್ಲಿ ಬಾಲಕನೋರ್ವ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ದಾರುಣ ಮೃತಪಟ್ಟ ಘಟನೆ ಶಂಕರನಾರಾಯಣದಲ್ಲಿ ಏ.11ರಂದು ನಡೆದಿದೆ. ಹೂಡೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಅರೀಝ್ (10) ಮೃತ ಬಾಲಕನಾಗಿದ್ದಾನೆ. ಹೂಡೆಯ ಇಬಾದುಲ್ಲ ಅವರು ಕುಟುಂಬ ಸಮೇತರಾಗಿ ಹೆಂಗವಳ್ಳಿ ಯ ಖಾಸಗಿ ರೆಸಾರ್ಟ್ ಹೋಗಿದ್ದು, ಈ ವೇಳೆ ಮಕ್ಕಳೊಂದಿಗೆ ಆಟವಾಡುತ್ತಾ ನೀರಿನಲ್ಲಿ ಬಿದ್ದಿದ್ದಾನೆ. ಈಜುಕೊಳದ ಸುತ್ತಲೂ ಹತ್ತಾರು ಜನರಿದ್ದರೂ ಎಲ್ಲರೂ ಸಂಭ್ರಮದಲ್ಲಿದ್ದರು. ಕಿರುಚಾಟ ಕೇಳೀ ಕುಟುಂಬ ಸದಸ್ಯರು ಮತ್ತು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಬಂದು ಪರಿಶೀಲಿಸಿದಾಗ ವೈದ್ಯರು ಅದಾಗಲೇ ಮೃತಪಟ್ತಿರುವುದಾಗಿ ತಿಳಿಸಿದ್ದಾರೆ.
ಮಗುವಿನ ಸಾವಿಗೆ ರೆಸಾರ್ಟ್ ಅವರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ.ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ದುರ್ಘಟನೆ ಸಂಭವಿಸಿದೆಯೆಂದು ದೂರಿನಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಶಂಕರನಾರಾಯಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿಯು ತಂದೆ, ತಾಯಿ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಈತ ಹೂಡೆಯ ದಾರುಸ್ಟಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯಾಗಿದ್ದ ಶಾಲಾ ಆಡಳಿತ ಮಂಡಳಿಯೂ ಸಂತಾಪ ವ್ಯಕ್ತಪಡಿಸಿದೆ.
ಮಂಗಳೂರು ಬೆಂಗಳೂರು ಎಸಿ ಕೋಚ್ ನಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವ
ಮಂಗಳೂರು: ಮಂಗಳೂರು -ಬೆಂಗಳೂರು ರೈಲಿನ ಎಸಿ ಕೋಚಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಳೂರಿನ ಜಪ್ಪುವಿನ 74 ವರ್ಷದ ವೃದ್ಧೆ, ಆಕೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಎಪ್ರಿಲ್ 7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವ ರೈಲಿನಲ್ಲಿ ಎಸಿ ಕೋಚಿನಲ್ಲಿ ಪ್ರಯಾಣಿಸಿದ್ದರು. ಮರುದಿನ ಮಂಗಳೂರು ತಲುಪಿ ಬೆಳಗ್ಗೆ ಮನೆಗೆ ಹೋಗಿ ನೋಡಿದಾಗ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.
ಸಹ ಪ್ರಯಾಣಿಕನಿಂದ ಕೃತ್ಯದ ಶಂಕೆ :
ಇನ್ನು ವೃದ್ಧೆಯ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ರಾತ್ರಿ 11.30ಕ್ಕೆ ಮಲಗಿದ್ದರು. ವೃದ್ಧೆ ಎಚ್ಚರವಾಗಿದ್ದರು. ರೈಲು ಮೈಸೂರು ಬಿಟ್ಟ ಬಳಿಕ ಓರ್ವ ಪ್ರಯಾಣಿಕ ಅವರ ಪಕ್ಕದ ಸೀಟಿನಲ್ಲಿ ಬಂದು ಕುಳಿತಿದ್ದ. ಆತನ ಟಿಕೆಟ್ ಅನ್ನು ಟಿಟಿಇ ಪರಿಶೀಲಿಸಿ ಹೋಗಿದ್ದ. ಆ ವ್ಯಕ್ತಿ ಮಲಗದೆ ಲಗೇಜ್ಗಳನ್ನೇ ನೋಡುತ್ತಿದ್ದ. ಮೊಮ್ಮಕ್ಕಳ ಬ್ಯಾಗ್ಗಳನ್ನು ಕೂಡ ಮುಟ್ಟಿ ನೋಡುತ್ತಿದ್ದ. ಪ್ರಶ್ನಿಸಿದಾಗ ಸುಬ್ರಹ್ಮಣ್ಯದಲ್ಲಿ ಇಳಿಯುವುದಾಗಿ ಹೇಳಿದ್ದ. ಅನಂತರ ವೃದ್ಧೆಗೆ ನಿದ್ದೆ ಬಂದಿತ್ತು ಎಂದು ರೈಲ್ವೇ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗಳೂರಿನಲ್ಲಿ ಇಳಿದು ಮನೆ ತಲುಪಿ ನೋಡಿದಾಗ ವ್ಯಾನಿಟಿ ಬ್ಯಾಗ್ನಲ್ಲಿಟ್ಟಿದ್ದ ಎರಡು ಬಳೆಗಳು, ಸರ ಸೇರಿ ಒಟ್ಟಾರೆ 3.91 ಲಕ್ಷ ರೂ. ಮೌಲ್ಯದ 59.885 ಗ್ರಾಂ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.