ಕರಾವಳಿ ಜನರ ಪ್ರೀತಿಗೆ ಮೋದಿ ಮೆಚ್ಚಿ ಟ್ವೀಟ್!
– ಕರಾವಳಿಗೂ ಕಮಲಕ್ಕೂ ಬಲಿಷ್ಟ ಬಾಂಧ್ಯವಿದೆ: ಮೋದಿ
– ಕರಾವಳಿಗರ ಪ್ರೀತಿ, ಅಭಿಮಾನ, ಗೌರವಕ್ಕೆ ಮೆಚ್ಚುಗೆ
– ಬಿಜೆಪಿಗೆ ಪ್ಲಸ್ ಆಗುತ್ತಾ ಮಂಗಳೂರು ರೋಡ್ಶೋ?!
NAMMUR EXPRESS NEWS
ಕರಾವಳಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಭರ್ಜರಿ ರೋಡ್ಶೋ ಮಾಡುವ ಮೂಲಕ ಕಡಲನಗರಿಯಲ್ಲಿ ಅಕ್ಷರಶಃ ಮೋದಿ ಅಲೆಯನ್ನು ಎಬ್ಬಿಸಿದ್ದರು. ಮೊದಲ ಹಂತದ ಚುನಾವಣೆ ಇನ್ನು ಕೇವಲ 9 ದಿನವಷ್ಟೇ ಬಾಕಿ ಉಳಿದಿದ್ದು, ಕರಾವಳಿ ಭಾಗದ ಎರಡು ಪ್ರಮುಖ ಕ್ಷೇತ್ರವಾದ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್ನ ಪ್ರಚಾರದ ಭರಾಟೆ ಜೋರಾಗಿದೆ. ಆದರೆ ಪ್ರಧಾನಿ ಮೋದಿ ಬಂದು ಸುಮಾರು ಒಂದು ತಾಸು ರೋಡ್ಶೋ ನಡೆಸಿ ಮಂಗಳೂರಿನ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ಅವರು ತಮ್ಮ ಟ್ವಿಟರ್ ಖಾತೆಯಲ್ಲಿಯೂ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದು ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳಿಗೆ ಆನೆಬಲ ತಂದುಕೊಟ್ಟಿದ್ದು, ಮತದಾರರನ್ನು ಕಮಲದತ್ತ ಸೆಳೆಯುವಲ್ಲಿ ಮೋದಿಯ ರೋಡ್ಶೋ ಬಿಜೆಪಿ ನಾಯಕರ ಚುನಾವಣಾ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಈ ನಡುವೆ ಮೋದಿ ಅವರು ಮಂಗಳೂರು ರೋಡ್ಶೋ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದು, ಮಂಗಳೂರಿನಲ್ಲಿ ನಡೆದ ಈ ಪ್ರಚಾರ ಕಾರ್ಯಕ್ರಮದಲ್ಲಿ ನಿರೀಕ್ಷೆಯನ್ನು ಮೀರಿದ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಜನರು ಭಾಗವಹಿಸಿದ್ದಾರೆ. ಹೀಗಾಗಿ, ಈ ರೋಡ್ಶೋ ತಮ್ಮ ಪಾಲಿಗೆ ಅವಿಸ್ಮರಣೀಯ ಎಂಬುದಾಗಿಯೂ ಬಣ್ಣಿಸಿದ್ದಾರೆ.
ಕರಾವಳಿಗೆ ಕೊಡುಗೆ ಬಗ್ಗೆ ಉಲ್ಲೇಖ
ಕಳೆದ ಒಂದು ದಶಕದಲ್ಲಿ ನಮ್ಮ ಸರ್ಕಾರ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಾರಿಗೆ, ಬಂದರು ಅಭಿವೃದ್ಧಿ, ಮೀನುಗಾರಿಕೆ, ಮಹಿಳಾ ಮೀನುಗಾರರ ಸಬಲೀಕರಣ, ಇಂಧನ, ಆರೋಗ್ಯ ಮತ್ತು ಇತರೆ ವಲಯಗಳನ್ನು ಕೇಂದ್ರೀಕರಿಸಿ ಕೆಲಸ ಮಾಡಿದೆ. ಇಲ್ಲಿನ ಉದ್ಯಮಶೀಲ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಅನೇಕ ಜನರಿಗೆ ನಮ್ಮ ಆರ್ಥಿಕ ಸುಧಾರಣೆಗಳ ಮೇಲಿನ ಒತ್ತು ಪ್ರಯೋಜನಕಾರಿಯಾಗಿದೆ. ಮುಂದೆ ಇಲ್ಲಿನ ವಿಮಾನ, ರೈಲ್ವೆ ನಿಲ್ದಾಣ, ಬಂದರು ವಲಯದ ಮೂಲಸೌಕರ್ಯ ಆಧುನೀಕರಣಗೊಳಿಸಲಾಗುವುದು ಎನ್ನುವ ವಾಗ್ದಾನವನ್ನು ಕೂಡ ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ನೀಡಿರುವುದು ಗಮನಾರ್ಹ. ಇದು ಸಹಜವಾಗಿಯೇ ಮೋದಿ ಬಗ್ಗೆ ಕರ್ನಾಟಕದ ಕರಾವಳಿ ಭಾಗದ ಜನರ ಪ್ರೀತಿ, ಗೌರವ ಹಾಗೂ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಆದರೆ, ಇವೆಲ್ಲವೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತಗಳಾಗಿ ಹೇಗೆ ಪಕ್ಷದ ಗೆಲುವಿಗೆ ಕಾರಣವಾಗಬಹುದು ಎಂಬುದನ್ನು ಕಾದುನೋಡಬೇಕಿದೆ.