ಅಬ್ಬಾ ಅಂತೂ ಮಳೆ ಬಂತು!
– ಮುಂಜಾನೆಯೂ ಮಳೆ: ಸೆಕೆ ಕಡಿಮೆಯಾಯ್ತು!
– ಇಂದು ಕೂಡ ಮಳೆ ಮುಂದುವರಿಕೆ: ಜನತೆಗೆ ಖುಷಿ
– ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಇಬ್ಬರು ಸಾವು, ಓರ್ವ ಅಸ್ವಸ್ಥ
NAMMUR EXPRESS NEWS
ಮಲೆನಾಡು/ಕರಾವಳಿ: ಮಲೆನಾಡು, ಕರಾವಳಿ ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆವರೆಗೆ ಭಾರೀ ಗುಡುಗು ಸಿಡಿಲಿನ ಮಳೆಯಾಗಿದೆ. ಭಾರೀ ಮಳೆಗೆ ಎಲ್ಲೆಡೆ ವಿದ್ಯುತ್ ಕಡಿತವಾಗಿತ್ತು. ಅನೇಕ ಕಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಕರಾವಳಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರ ಬಿದ್ದಿವೆ. ಆಗುಂಬೆ ಘಾಟಿಯಲ್ಲಿ ಬುಧವಾರ ಮರ ಬಿದ್ದು ಘಾಟಿ ಕೆಲ ಕಾಲ ಬಂದ್ ಆಗಿತ್ತು. ಇನ್ನು ಶಿವಮೊಗ್ಗ, ಚಿಕ್ಕ ಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರವೂ ಮಳೆಯಾಗುತ್ತಿದೆ.
ಸೆಕೆ ಕಡಿಮೆಯಾಯ್ತು!
ಕಳೆದ ಎರಡು ದಿನಗಳಿಂದ ಹಲವೆಡೆ ಸುರಿಯುತ್ತಿರುವ ಮಳೆಯಿಂದಾಗಿ ಸೆಕೆ ಕೊಂಚ ಕಡಿಮೆಯಾಗಿದೆ. ಎಲ್ಲೆಡೆ ಜನ ಕೂಲ್ ಕೂಲ್ ವಾತಾವರಣ ಅನುಭವಿಸುತ್ತಿದ್ದಾರೆ.
ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಇಬ್ಬರು ಸಾವು, ಓರ್ವ ಅಸ್ವಸ್ಥ
ತೀರ್ಥಹಳ್ಳಿಯಲ್ಲಿ ಭಾರೀ ಮಳೆಗೆ ಮರ ಬಿದ್ದು ಬುಧವಾರ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಯುವಕ ಮೃತಪಟ್ಟಿದ್ದು, ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ರಾಕೇಶ್ (28) ಮೃತ ದುರ್ಧೈವಿ. ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಇವರ ಜೊತೆಯಿದ್ದ ಮತ್ತೋರ್ವ ರುದ್ರೇಶ ಬಿನ್ ಸಿದ್ದಪ್ಪ ಎಂಬುವರಿಗೆ ಸಿಡಿಲು ಬಡಿದು ತಮ್ಮ ಎರಡು ಕಾಲಗಳ ಸ್ವಾಧೀನತೆ ಕಳೆದುಕೊಂಡಿದ್ದಾರೆ.