ದಾರಿಯಲ್ಲಿ ಹೋಗುತ್ತಿದ್ದ ಬಾಲಕಿ ಅಪ್ಪಿಕೊಂಡವನ ಮೇಲೆ ಕೇಸ್!
– ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ಘಟನೆ
– ನಂಬರ್ ಕೊಡು, ಇಲ್ದಿದ್ರೆ ರೇಪ್ ಮಾಡ್ತೇನೆ ಎಂದು ಅಸಭ್ಯವಾಗಿ ವರ್ತಿಸಿದ ಯುವಕ: ದೂರು ದಾಖಲು
NAMMUR EXPRESS NEWS
ಬಂಟ್ವಾಳ: ದಾರಿಹೋಕ ಅಪ್ರಾಪ್ತ ಬಾಲಕಿಯನ್ನು ಅಪ್ಪಿಕೊಂಡು ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ಪೊಳಲಿಯಲ್ಲಿ ನಡೆದಿದೆ. ಆರೋಪಿಯನ್ನು ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಎಂದು ಗುರುತಿಸಲಾಗಿದೆ. ಏಪ್ರಿಲ್ 24 ರಂದು ಪೊಳಲಿಯಲ್ಲಿ ಸಂತ್ರಸ್ತ ಬಾಲಕಿಯ ಹಿಂದಿನಿಂದ ಬಂದ ಆರೋಪಿ ಅಕೆಯನ್ನು ಹಿಂಬದಿಯಿಂದಲೇ ಅಪ್ಪಿಕೊಂಡು, ಕೈಯನ್ನು ಬಲವಾಗಿ ಹಿಡಿದುಕೊಂಡು ತಿರುಗಿ ನೋಡಲು ಕೂಡ ಅವಕಾಶ ನೀಡದೆ ನಿನ್ನ ಮೊಬೈಲ್ ನಂಬರ್ ಕೊಡಬೇಕು, ಇಲ್ಲದಿದ್ದರೇ ನಿನ್ನನ್ನು ರೇಪ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಈ ವೇಳೆ ಸಂಬಂಧಿಕನೋರ್ವ ಬರುವುದನ್ನು ನೋಡಿ ಆರೋಪಿಯು ಸ್ಕೂಟರ್ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.