ಕರ್ನಾಟಕ ಚುನಾವಣೆ ವಿಶೇಷ
1 ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್!
– ವಿದೇಶದಿಂದ ಬಂದು ಮತ ಹಾಕಿದ ದಂಪತಿ
– ಕಡೂರು ತಾಲೂಕು ಪಂಚೇನಹಳ್ಳಿಯ ಸಾಫ್ಟ್ವೇರ್ ಇಂಜಿನಿಯರ್ ಮಧು, ತನುಶ್ರೀ
– ನೀತಿ ಸಂಹಿತೆ: 189 ಪ್ರಕರಣ ದಾಖಲು, ಬೆಂಗಳೂರು ನಗರದಲ್ಲಿ 46 ಕೋಟಿ ಜಪ್ತಿ!
NAMMUR EXPRESS NEWS
ಚಿತ್ರದುರ್ಗ: ಒಂದು ವರ್ಷದ ಹಸುಗೂಸು ಇರುವ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಕಾರಣ, ತಾಯಿ ಮಗು ಬಿಸಿಲಲ್ಲಿ ಪರಿತಪಿಸಿದ ಪ್ರಸಂಗ ನಡೆದಿದೆ. ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಸಂದರ್ಭದಲ್ಲಿ ಕಂಡು ಬಂದ ದೃಶ್ಯ ಕಂಡು ಬಂದಿದೆ. ಚುನಾವಣಾ ಕಾರ್ಯಕ್ಕಾಗಿ ಮಹಿಳಾ ಪೊಲೀಸ್ ಚಿತ್ರದುರ್ಗಕ್ಕೆ ಬಂದಿದ್ದರು. ಜತೆಗೆ ಅವರು ಒಂದು ವರ್ಷದ ಮಗುವಿನ ಕರೆತಂದಿದ್ದರು. ಕೋಟೆ ನಾಡಿನ ಬಿಸಿಲಿನ ಬೇಗೆಗೆ ತಾಯಿ, ಮಗು ತತ್ತರಗೊಂಡಿದ್ದರು. ಸುಡು ಬಿಸಿಲು ಹಾಗೂ ಕಾಡುವ ಒಂದು ವರ್ಷದ ಮಗುವಿನಿಂದಾಗಿ ಪರದಾಟ ನಡೆಸಿದ್ದರು.
ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆ ಸಿಬ್ಬಂದಿ ಶರಣಮ್ಮ ರದಾಡಿದ ಪೊಲೀಸ್ ಪೇದೆ. ತಮ್ಮ ಒಂದು ವರ್ಷದ ಮಗುವಿನ ಜೊತೆ ಚುನವಣಾ ಕಾರ್ಯಕ್ಕೆ ಹಾಜರಾಗಿದ್ದ ಶರಣಮ್ಮ. ಊಟ ಮಾಡಲೂ ಬಿಡದೇ ತಾಯಿಗೆ ಮಗು ತಾಯಿಗೆ ಕಾಡಿಸುತ್ತಿತ್ತು. ತಾಯಿ, ಮಗುವಿನ ಪರದಾಟ ಕಂಡು ಉಳಿದ ಸಿಬ್ಬಂದಿ ಅವರ ನೆರವಿಗೆ ಬಂದಿದ್ದರು.
ಬೆಂಗಳೂರು ನಗರದಲ್ಲಿ 46 ಕೋಟಿ ಜಪ್ತಿ!
ಲೋಕಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಬುಧವಾರದವರೆಗೂ ರಾಜಕೀಯ ಪಕ್ಷಗಳು ಮತ್ತು ಜನಪ್ರತಿದಗಳ ವಿರುದ್ಧ 189 ಪ್ರಕರಣ ದಾಖಲಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇವುಗಳಲ್ಲಿ ದ್ವೇಷಪೂರಿತ ಭಾಷಣ 23, ಮತದಾರರನ್ನು ಪ್ರಚೋದಿಸಲು ಯತ್ನಿಸಿದ ಆರೋಪದಡಿ 28, ಧಾರ್ಮಿಕ ಸ್ಥಳಗಳ ದುರ್ಬಳಕೆ ಅಡಿಯಲ್ಲಿ 25 ಮತ್ತು ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಂಡ ಆರೋಪದಡಿ 15 ಪ್ರಕರಣಗಳು ದಾಖಲಾಗಿವೆ. ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ವಿರುದ್ಧವೂ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದೆ. ಮೂರು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಚುನಾವಣಾ ಆಯೋಗ 46.11 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಿದೆ. ಜಿಲ್ಲಾ ಚುನಾವಣಾ ಕಚೇರಿಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 25 ರವರೆಗೆ ಒಟ್ಟು 6,552 ಎಫ್ಐಆರ್ಗಳು ದಾಖಲಾಗಿವೆ.
ಲೆಕ್ಕಕ್ಕೆ ಸಿಗದ 11.83 ಕೋಟಿ ನಗದು ಹಾಗೂ 19.2 ಕೋಟಿ ಮೌಲ್ಯದ ಮದ್ಯವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯು ಚುನಾವಣಾಧಿಕಾರಿಗಳೊಂದಿಗೆ ಸೇರಿ 4,67,629.634 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. 7.17 ಕೋಟಿ ಮೌಲ್ಯದ ಒಟ್ಟು 227.47 ಕೆಜಿ ಮಾದಕ ವಸ್ತುಗಳು ಮತ್ತು 53.71 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸೇರಿದಂತೆ 49.58 ಕೆಜಿ ಬೆಲೆಬಾಳುವ ಲೋಹಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿದೇಶದಿಂದ ಬಂದು ಮತದಾನ ಮಾಡಿದ ದಂಪತಿ.!
ವಿದೇಶದಿಂದ ಬಂದು ದಂಪತಿಗಳು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಕಡೂರು ತಾಲೂಕು ಪಂಚೇನಹಳ್ಳಿಯ ಸಾಫ್ಟ್ವೇರ್ ಇಂಜಿನಿಯರ್ ಮಧು ಮತ್ತು ಅವರ ಪತ್ನಿ ಪಿಳ್ಳೇನಹಳ್ಳಿಯ ತನುಶ್ರೀ ಅವರು ದುಬೈನಲ್ಲಿ ವಾಸವಾಗಿದ್ದು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೂರದ ದುಬೈನಿಂದ ಬಂದು ಮತ ಚಲಾಯಿಸಿದ್ದಾರೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ದಂಪತಿಗಳು, ನಮ್ಮ ಹಕ್ಕು ಚಲಾಯಿಸಲು ದುಬೈನಿಂದ ಬಂದಿದ್ದೇವೆ. ಯುವ ಸಮುದಾಯವೇ ನಮ್ಮ ದೇಶದ ಶಕ್ತಿಯಾಗಿದ್ದು, ಯುವ ಸಮುದಾಯ ಉತ್ಸಹದಿಂದ ಮತದಾನ ಮಾಡಬೇಕು ಎಂದರು. ಬೇರೆ ದೇಶಗಳಂತೆ ನಮ್ಮ ದೇಶವು ಅಭಿವೃದ್ಧಿ ಹೊಂದಬೇಕು. ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು.
ದುಬೈಗೆ ತೆರಳಿ ಆರು ವರ್ಷವಾಗಿದೆ. ಕಳೆದ ವಿಧಾಸಭೆ ಚುನಾವಣೆಗೆ ಬರಬೇಕೆಂದು ಇಚ್ಚೆ ಇತ್ತು. ಆದರೆ, ಆ ಸಮಯಕ್ಕೆ ರಜೆ ಸಿಗದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮುಂದಿನ ತಿಂಗಳು ರಜೆ ಇತ್ತು. ಮತದಾನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮುಂಚಿತವಾಗಿ ರಜೆ ಪಡೆದು ಬಂದಿದ್ದೇವೆ. ನಮ್ಮ ಹಕ್ಕು ಚಲಾಯಿಸಿದ್ದೇವೆ ಎಂದು ಹೇಳಿದರು.