ಚುನಾವಣೆ ಬಸ್ ಇಲ್ಲದೆ ಲಕ್ಷ ಲಕ್ಷ ಜನರ ಪರದಾಟ!
– ಸರ್ಕಾರದಿಂದ ಚುನಾವಣೆಯ ದಿನವೂ ಜನರಿಗೆ ಸಂಕಷ್ಟ
– ಖಾಸಗಿ ಬಸ್ ಗಳು ಇಲ್ಲ, ಸರ್ಕಾರಿ ಬಸ್ ಇಲ್ಲ: ಬಸ್ ನಿಲ್ದಾಣಗಳಲ್ಲೇ ಮಲಗಿದ ಜನ!
NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 26ರಂದು ನಡೆಯಿತು, ಆದರೆ ಇದರಿಂದಾಗಿ ಅನೇಕ ಸರ್ಕಾರಿ ಬಸ್ ಸೇವೆ ಇಲ್ಲದೆ ಸಾವಿರಾರು ಜನರು ಪರದಾಡಿದರು. ತಮ್ಮ ಊರಿಗೆ ಹೋಗಲು ಸಾಕಷ್ಟು ಪರದಾಡುವಂತಹ ಸ್ಥಿತಿ ಉಂಟಾಯಿತು . ಸರ್ಕಾರ ಈ ರೀತಿಯ ಪುನರ್ ಪರಿಶೀಲನೆ ಮಾಡದೇ, ಏಕಾಏಕಿ ನಿರ್ಧಾರ ಮಾಡುವುದರಿಂದ ಸರ್ಕಾರಿ ಬಸ್ ಗಳ ಸಮಸ್ಯೆ ಉಂಟಾಗಿ ಜನ ಪರದಾಟ ಎದುರಿಸಿದರು, ಇತ್ತ ಚುನಾವಣೆಯು ಬೇಡ ಮತದಾನನೂ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು ಬಹುತೇಕ ರಾಜ್ಯದ ಎಲ್ಲಾ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕಂಡು ಬಂತು.
ಬಸ್ ರಶ್..ಮನೆ ಸೇರಲು ಆಗಲೇ ಇಲ್ಲ!
ಜನ ಬಸ್ ಗಾಗಿ ಕಾದು ಕುಳಿತಿರುವಂತಹ ದೃಶ್ಯಗಳು ಎಲ್ಲಾ ಬಸ್ ನಿಲ್ದಾಣಗಳಲ್ಲಿ ಕಂಡುಬಂದವು ಇದರಿಂದ ಜನತೆ ಸಂಕಷ್ಟಕೀಡಾಗಿದ್ದರು. ಸಾವಿರಾರು ಜನ ಮನೆ ಸೇರಲಾಗದೆ ಪರದಾಟ ನಡೆಸಿದರು. ಬೆಂಗಳೂರು-ಶಿವಮೊಗ್ಗ, ಬೆಂಗಳೂರು ಹುಬ್ಬಳಿ, ಬೆಂಗಳೂರು ಮಂಗಳೂರು ಭಾಗದಲ್ಲಿ ಅತೀ ಹೆಚ್ಚು ತೊಂದರೆ ಆಗಿತ್ತು.