ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5ರಷ್ಟು ರಿಯಾಯಿತಿ!
NAMMUR EXPRESS NEWS
ಬೆಂಗಳೂರು : ರಾಜ್ಯ ಸರ್ಕಾರದಿಂದ ನಿಗದಿತ ಕಾಲಮಿತಿಯೊಳಗೆ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸಿದ್ರೆ ಶೇ.5ರಷ್ಟು ರಿಯಾಯಿತಿ ನೀಡಿವುದಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ರಿಯಾಯಿತಿ ಘೋಷಣೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಏಕ ಕಾಲಕ್ಕೆ ಪಾವತಿಸಿ ಶೇ.5ರಷ್ಟು ರಿಯಾಯಿತಿಯನ್ನು ಪಡೆಯಿರಿ ಅಂತ ತಿಳಿಸಿದೆ. ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳು ಅಂದ್ರೆ ಏಪ್ರಿಲ್ ನಿಂದ ಜೂನ್ ಅಂತ್ಯ ಅಂದರೇ ದಿನಾಂಕ 0-06-2024ರ ಒಳಗಾಗಿ ತೆರಿಗೆ ಪಾವತಿಸಿ, ಶೇ.5ರಷ್ಟು ರಿಯಾಯಿತಿ ಪಡೆಯಿರಿ ಅಂತ ಹೇಳಿದೆ.